ಶನಿವಾರ, ನವೆಂಬರ್ 23, 2019
17 °C

ಪಾಕಿಸ್ತಾನ ಅತ್ಯಂತ ಅಪಾಯಕಾರಿ: ಜಿಮ್ ಮ್ಯಾಟಿಸ್‌ ಹೇಳಿಕೆ

Published:
Updated:

ನ್ಯೂಯಾರ್ಕ್: ‘ನಾನು ಆಡಳಿತಾತ್ಮಕವಾಗಿ ತಿಳಿದಿರುವ ದೇಶಗಳ ಪೈಕಿ ಪಾಕಿಸ್ತಾನ ಅತ್ಯಂತ ಅಪಾಯಕಾರಿ ಎನಿಸುತ್ತದೆ’ ಎಂದು ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹೇಳಿದ್ದಾರೆ. ‌

ವಿದೇಶಾಂಗ ವ್ಯವಹಾರಗಳ ಮಂಡಳಿ (ಸಿಎಫ್‌ಆರ್‌) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಈಚೆಗೆ ಬಿಡುಗಡೆಯಾಗಿರುವ ‘Call Sign Chaos: Learning to Lead’ ಕೃತಿಯ ಸಹಲೇಖಕರಾಗಿರುವ ಮ್ಯಾಟಿಸ್, ಕೃತಿಯಲ್ಲಿ ಪಾಕಿಸ್ತಾನ ಕುರಿತು ಉಲ್ಲೇಖಿಸಿದ್ದಾರೆ.

ಸಿಎಫ್‌ಆರ್ ಅಧ್ಯಕ್ಷ ರಿಚರ್ಡ್ ಹಾಸ್ ಅವರು ಈ ವಿಷಯ ಪ್ರಸ್ತಾಪಿಸಿದಾಗ, ‘ಪಾಕಿಸ್ತಾನ ಮೂಲಭೂತವಾದಕ್ಕೆ ಪ್ರೋತ್ಸಾಹ ನೀಡುತ್ತದೆ. ಪಾಕ್‌ ಸೇನೆ ಸಹ ಇದೇ ನಿಲುವು ಹೊಂದಿದೆ. ಜತೆಗೆ ತನ್ನ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಲೇ ಇದೆ’ ಎಂದು ಮ್ಯಾಟಿಸ್ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)