ಮಂಗಳವಾರ, ಏಪ್ರಿಲ್ 13, 2021
32 °C

ಮಾವು–ಹಲಸು ಸಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಸರ್‌, ಕಾಲಾಪಹಾಡ್‌, ರಸಪುರಿ, ಅಲ್ಫೊನ್ಸೊ, ನೀಲೇಶ್ವರಿ, ತಾಲಿ, ಪೀಚ್‌, ತೆನವರಿಕೆ...’ ಎಂಬ ಹೆಸರುಗಳು ಭಾನುವಾರ ಮಾವುಪ್ರಿಯರ ಬಾಯಲ್ಲಿ ಹರಿದಾಡಿತು.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಐಎಚ್‌ಆರ್‌) ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಮಾವು ಮತ್ತು ಹಲಸು ವೈವಿಧ್ಯತಾ ಪ್ರದರ್ಶನ ಮೇಳ’ ‌ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು. ‘ಮೇಳಕ್ಕೆ ಮೊದಲ ದಿನ 5 ಸಾವಿರ ಮಂದಿ ಬಂದಿದ್ದರೆ, ಭಾನುವಾರ ಭೇಟಿ ನೀಡಿದವರ ಸಂಖ್ಯೆ 7 ಸಾವಿರ ದಾಟಿತ್ತು’ ಎಂದು ಸಂಘಟಕರು ತಿಳಿಸಿದರು.

ಪ್ರದರ್ಶನಕ್ಕೆ ಇಡಲಾಗಿದ್ದ 300ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ಜನರು ಅಚ್ಚರಿಯಿಂದ ವೀಕ್ಷಿಸಿದರು. ಅಪ್ಪೆ ಮಿಡಿ, ಮ್ಯಾಗ್ನಿಫೆರಾ, ಕಬಿನಿ, ಲಾಲ್‌ ಪಸಂದ್‌, ರಾಜಪುರಿ, ಚಿಮುಟ್‌, ವನರಾಜ, ಸಬ್ರೆ, ಸಿಂಧು, ಆರುಣಿಕಾ, ಅಕರ, ಉದಯ..ಮುಂತಾದ ಮಾವಿನ ತಳಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು. ಮಾವಿನ ಹಣ್ಣುಗಳು ಖರೀದಿಗೆ ಇಲ್ಲವೆಂದು ತಿಳಿದು ನಿರಾಸೆಗೊಂಡರು.

‘ಹೆಸರಘಟ್ಟದ ತೋಟದಲ್ಲಿ 1,200ಕ್ಕೂ ಹೆಚ್ಚು ಮಾವಿನ ತಳಿಗಳು ಹಾಗೂ 110 ಹಲಸಿನ ತಳಿಗಳನ್ನು ಬೆಳೆಯಲಾಗಿದೆ. ಅವುಗಳಲ್ಲಿ 300 ಮಾವು ಹಾಗೂ 50 ಹಲಸಿನ ತಳಿಗಳನ್ನು ಮಾತ್ರ ಪ್ರದರ್ಶನಕ್ಕೆ ಇಡಲಾಗಿದೆ. ಸಾಮಾನ್ಯವಾಗಿ ಈ ತಳಿಗಳು ಗ್ರಾಹಕರಿಗೆ ಪರಿಚಯ ಇರುವುದಿಲ್ಲ. ಪ್ರದರ್ಶನಕ್ಕೆ ಇಟ್ಟ ಮಾವುಗಳನ್ನು ಖರೀದಿಸಲು ಕೇಳುತ್ತಿದ್ದಾರೆ. ಮುಂದಿನ ಬಾರಿ ಹೆಚ್ಚಿನ ಮಾವಿನ ತಳಿಗಳನ್ನು ಗ್ರಾಹಕರಿಗೆ ತಲುಪಿಸಲು ಪ್ರಯತ್ನಿಸುತ್ತೇವೆ’ ಎಂದು ವಿಜ್ಞಾನಿ ಡಾ.ನಂದೀಶ್‌ ಮಾಹಿತಿ ನೀಡಿದರು.

‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಬಳಿ ಮಾವಿನ ತೋಟವಿದೆ. ಬಂಗನಪಲ್ಲಿ, ಬಾದಾಮಿ, ಮಲ್ಲಿಕಾ, ಆಲ್ಫನ್ಸೊ, ರಸಾಲ್‌ ತಳಿಯ ಮಾವುಗಳನ್ನು ಬೆಳೆಯುತ್ತೇವೆ. ತೋಟದಲ್ಲೇ ಮಾಗಿಸಿ ಮಾವು ತಂದಿದ್ದೇವೆ. ಹೆಚ್ಚು ಸಿಹಿಯಿಂದ ಕೂಡಿರುವ ಬಂಗನಪಲ್ಲಿ ಮಾವನ್ನು ಗ್ರಾಹಕರು ಬಹಳ ಇಷ್ಟಪಟ್ಟು ಖರೀದಿಸಿದರು. ನಾವು ತಂದ ಹಣ್ಣುಗಳೆಲ್ಲ ಶನಿವಾರವೇ ಖಾಲಿಯಾದವು’ ಎಂದು ತೋಟದ ಮಾಲೀಕರಾದ ವಿಜಯಲಕ್ಷ್ಮಿ ಸಂತಸ ವ್ಯಕ್ತಪಡಿಸಿದರು.

ಮೇಳದಲ್ಲಿ ತಿನಿಸುಗಳ ಮಳಿಗೆಇದ್ದವು. ಹಲಸಿನ ಹಲ್ವ, ಚಟ್ನಿ ಪುಡಿ, ಚಿಪ್ಸ್‌, ಉಪ್ಪಿನಕಾಯಿ, ಹಪ್ಪಳ, ಪಾನೀಯ, ಹಲಸಿನ ಬನ್ನು, ಬಿಸ್ಕೆಟ್‌ ಚಿಣ್ಣರಿಗೆ ರಸದೌತಣ ಉಣಬಡಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು