ಮಾಧ್ಯಮಗಳ ಯುದ್ಧೋನ್ಮಾದ ಸರಿಯಲ್ಲ: ಕೈಲಾಶ್‌ ಸತ್ಯಾರ್ಥಿ

ಬುಧವಾರ, ಮಾರ್ಚ್ 27, 2019
26 °C

ಮಾಧ್ಯಮಗಳ ಯುದ್ಧೋನ್ಮಾದ ಸರಿಯಲ್ಲ: ಕೈಲಾಶ್‌ ಸತ್ಯಾರ್ಥಿ

Published:
Updated:
Prajavani

ಪ್ಯಾರಿಸ್‌: ‘ಪಾಕಿಸ್ತಾನದೊಂದಿಗಿನ ಸಂಘರ್ಷದ ನಂತರ, ಭಾರತೀಯ ಪತ್ರಕರ್ತರಲ್ಲಿ ಯುದ್ಧೋನ್ಮಾದ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಅಭಿಪ್ರಾಯಪಟ್ಟಿದ್ದಾರೆ. 

ಅಣ್ವಸ್ತ್ರ ರಾಷ್ಟ್ರಗಳಾದ ಭಾರತ–ಪಾಕಿಸ್ತಾನ ನಡುವೆ ಗಡಿಯಲ್ಲಿ ಉಂಟಾಗಿರುವ ಉದ್ನಿಗ್ವ ವಾತಾವರಣವನ್ನು ಶಮನಗೊಳಿಸಬೇಕು ಎಂದು ಒತ್ತಾಯಿಸಿ 71 ಸಾಹಿತಿಗಳು, ಗಣ್ಯರು ಸಹಿ ಮಾಡಿ ಹೊರಡಿಸಿರುವ ಪ್ರಕಟಣೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ದೇಶಭಕ್ತರು ಮತ್ತು ರಾಷ್ಟ್ರೀಯವಾದಿಗಳು ಮಾತ್ರವಲ್ಲ, ಮಾಧ್ಯಮಗಳು ಕೂಡ ಸಂಯಮದ ಗೆರೆ ದಾಟಿ, ಯುದ್ಧವನ್ನು ಆಹ್ವಾನಿಸುತ್ತಿವೆ. ಹಲವು ಬಾರಿ ಮಾಧ್ಯಮಗಳು ಇಂತಹ ಸನ್ನಿವೇಶಗಳನ್ನು ಆನಂದಿಸುತ್ತವೆ. ಇದು ದುರದೃಷ್ಟಕರ’ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. 

‘ಅದೃಷ್ಟವಶಾತ್‌, ಪತ್ರಿಕೋದ್ಯಮ ಮತ್ತು ರಾಜಕೀಯದಲ್ಲಿ ಕೆಲವೇ ವ್ಯಕ್ತಿಗಳು ಸಂಯಮ ಪ್ರದರ್ಶಿಸುತ್ತಿದ್ದಾರೆ. ಆದರೆ, ಕೆಲವು ವ್ಯಕ್ತಿಗಳು ರಾಷ್ಟ್ರಪ್ರೇಮದ ಗಡಿ ಮೀರಿ, ಯುದ್ಧ ಪ್ರಚೋದಕರಂತೆ ವರ್ತಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !