ಶನಿವಾರ, ಆಗಸ್ಟ್ 8, 2020
23 °C

ವಿಪಕ್ಷಗಳ ಸಭೆ: ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ, ಟಿಎಂಸಿ, ಡಿಎಂಕೆ ನಾಯಕರು ಭಾಗಿ

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ಆನಂತರದ ತಂತ್ರಗಾರಿಕೆಗಳ ಕುರಿತು ಚರ್ಚಿಸಲು ದೇಶದ ಪ್ರಮುಖ ಪಕ್ಷಗಳ ನಾಯಕರು ಕಾಂಗ್ರೆಸ್‌ ನೇತೃತ್ವದಲ್ಲಿ ಇಂದು ನವದೆಹಲಿಲ್ಲಿ ಸಭೆ ನಡೆಸಿದರು. 

ಕಾಂಗ್ರೆಸ್ ನಾಯಕರಾದ ಅಹ್ಮದ್‌ ಪಟೇಲ್‌, ಗುಲಾಮ್‌ ನಬಿ ಆಜಾದ್‌, ಅಶೋಕ್‌ ಗೆಹ್ಲೋಟ್‌, ಅಭಿಷೇಕ್‌ ಮನು ಸಿಂಘ್ವಿ, ಟಿಡಿಪಿಯ ಚಂದ್ರಬಾಬು ನಾಯ್ಡು, ಬಿಎಸ್‌ಪಿಯ ಸತೀಶ್‌ ಚಂದ್ರಮಿಶ್ರ, ಸಿಪಿಐಎಂನ ಸೀತಾರಾಂ ಯೆಚೂರಿ, ಸಿಪಿಐನ ಡಿ. ರಾಜ, ಎಎಪಿಯ ಅರವಿಂದ ಕೇಜ್ರಿವಾಲ್‌, ಡಿಎಂಸಿಯ ಡೆರಿಕ್‌ ಓಬ್ರೆಯನ್‌, ಎಸ್‌ಪಿಯ ರಾಮ್‌ ಗೋಪಾಲ್‌ ಯಾದವ್‌, ಡಿಎಂಕೆಯ ಕನಿಮೋಳಿ, ಆರ್‌ಜೆಡಿಯ ಮನೋಜ್‌ ಜಾ, ಎನ್‌ಸಿಪಿಯ ಮಜೀದ್‌ ಮೆನೋನ್‌, ಎನ್‌ಸಿಯ ದೇವೇಂದ್ರ ರಾಣ ಸೇರಿದಂತೆ ಹಲವು ಭಾಗಿಯಾಗಿದ್ದರು. 

ಮತ ಎಣಿಕೆ ವೇಳೆ ವಿವಿಪ್ಯಾಟ್‌ ಅನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿ ನಾಯಕರು ಚುನಾವಣೆ ಆಯೋಗಕ್ಕೆ ಮನವಿ ಮಾಡಲು ನಿರ್ಧರಿಸಿದರು. ನಂತರ ಅಲ್ಲಿಂದ ನೇರವಾಗಿ ಆಯೋಗದ ಕಚೇರಿಗೆ ತೆರಳಿದ ನಾಯಕರು,  ‘ಯಾವುದೇ ಕ್ಷೇತ್ರದಲ್ಲಿ ಮತ ಎಣಿಕೆ ವೇಳೆ, ಮತಯಂತ್ರದ ಸಂಖ್ಯೆಯಗೂ ವಿವಿಪ್ಯಾಟ್‌ ಪರಿಶೀಲನೆ ವೇಳೆ ಸಿಗುವ ಸಂಖ್ಯೆಗೂ ವ್ಯತ್ಯಾಸ ಕಂಡು ಬಂದರೆ, ಇಡೀ ಕ್ಷೇತ್ರದ ಸಂಪೂರ್ಣ ವಿವಿಪ್ಯಾಟ್‌ ಮತಗಳನ್ನೂ ಎಣಿಸಬೇಕು,’ ಎಂದು ಆಯೋಗವನ್ನು ಮನವಿ ಮಾಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು