ಮೈಸೂರು–ಬೆಂಗಳೂರು ಮೆಮು ರೈಲಿನ ವೇಳಾಪಟ್ಟಿ ಬದಲು

ಶನಿವಾರ, ಮಾರ್ಚ್ 23, 2019
31 °C

ಮೈಸೂರು–ಬೆಂಗಳೂರು ಮೆಮು ರೈಲಿನ ವೇಳಾಪಟ್ಟಿ ಬದಲು

Published:
Updated:

ಬೆಂಗಳೂರು: ಬೆಂಗಳೂರು– ಮೈಸೂರು ನಡುವೆ ಸಂಚರಿಸುತ್ತಿದ್ದ ಮೆಮು ರೈಲಿನ (06575 / 06576) ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಇದುವರೆಗೆ ಈ ರೈಲುಗಳು ವಾರಕ್ಕೆ ನಾಲ್ಕು ದಿನಗಳ ಕಾಲ ಸಂಚರಿಸುತ್ತಿದ್ದವು. ಮುಂದೆ ಆರು ದಿನ ಸಂಚರಿಸಲಿವೆ. ಮಾರ್ಚ್‌ 18ರ ಬಳಿಕ ಸೋಮವಾರದಿಂದ ಶನಿವಾರದವರೆಗೆ ಈ ರೈಲುಗಳ ಸಂಚಾರ ಇರಲಿದೆ. 

ಬೆಂಗಳೂರಿನಿಂದ ಮೈಸೂರಿಗೆ ತೆರಳುವ ರೈಲು (06575) ನಗರದಿಂದ ಸಂಜೆ 5.20ಕ್ಕೆ  ಹೊರಡಲಿದೆ. (ಇದುವರೆಗೆ ಈ ರೈಲು 8.20ಕ್ಕೆ ಹೊರಡುತ್ತಿತ್ತು.) ರಾತ್ರಿ 7.50ಕ್ಕೆ ಮೈಸೂರು ತಲುಪಲಿದೆ. (ಈ ಮೊದಲು 10.40ಕ್ಕೆ ತಲುಪುತ್ತಿತ್ತು)

ಮೈಸೂರಿನಿಂದ ಬೆಂಗಳೂರಿಗೆ ಬರುವ ರೈಲು (06576) ರಾತ್ರಿ 8.30ಕ್ಕೆ ಹೊರಟು 11.35ಕ್ಕೆ ನಗರ ತಲುಪಲಿದೆ. (ಇದುವರೆಗೆ ಈ ರೈಲು ರಾತ್ರಿ 11.05ಕ್ಕೆ ಹೊರಡುತ್ತಿತ್ತು)

ಬೆಂಗಳೂರು ರಾಮನಗರ ನಡುವೆ ಸಂಚರಿಸುತ್ತಿದ್ದ (66539 / 66540) ರೈಲುಗಳನ್ನು ಮಾರ್ಚ್‌ 18ರಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

  • 13

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !