ವರ್ತಕರಿಂದ ರಾಜ್ಯ ಸರ್ಕಾರಕ್ಕೆ ಮನವಿ ನಾಳೆ

7
ಕೇಂದ್ರ ಸರ್ಕಾರದ ಬೆಲೆ ವ್ಯತ್ಯಾಸ ಪಾವತಿ ಯೋಜನೆ ಜಾರಿಗೊಳಿಸಿ

ವರ್ತಕರಿಂದ ರಾಜ್ಯ ಸರ್ಕಾರಕ್ಕೆ ಮನವಿ ನಾಳೆ

Published:
Updated:

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಡಿಪಿಎಸ್‌ (ಬೆಲೆ ವ್ಯತ್ಯಾಸ ಪಾವತಿ ಯೋಜನೆ) ಯೋಜನೆಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಬೇಕು ಎಂದು ವಿಜಯಪುರ ಜಿಲ್ಲಾ ಮರ್ಚೆಂಟ್ಸ್‌ ಅಸೋಸಿಯೇಷನ್‌ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಸಂಘದ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿದ ಪದಾಧಿಕಾರಿಗಳು, ಜಿಲ್ಲಾಡಳಿತದ ಮೂಲಕ ಸೋಮವಾರ (ಜ.7) ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ರಾಜ್ಯದಲ್ಲೂ ಪಿಡಿಪಿಎಸ್‌ ಯೋಜನೆ ಅನುಷ್ಠಾನದ ಮೂಲಕ ರೈತರು ಹಾಗೂ ಕೃಷಿ ಮಾರುಕಟ್ಟೆ ವ್ಯಾಪಾರಸ್ಥರ ಬದುಕನ್ನು ಸದೃಢಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಒಕ್ಕೊರಲ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ರವೀಂದ್ರ ಬಿಜ್ಜರಗಿ ತಿಳಿಸಿದರು.

‘ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಅನ್ನದಾತಾ ಸಂರಕ್ಷಣಾ ಅಭಿಯಾನ ಯೋಜನೆಯಡಿ ಪ್ರೈಸ್ ಸಪೋರ್ಟ್‌ ಸ್ಕೀಂ, ಪ್ರೈಸ್ ಡೆಫಿಸಿಯನ್ಸಿ ಪೇಮೆಂಟ್ ಸ್ಕೀಂ ವ್ಯತ್ಯಾಸ ಹಾಗೂ ಪೈಲಟ್ ಆಫ್‌ ಪ್ರೈವೇಟ್‌ ಪ್ರೊಕ್ಯುರ್‌ಮೆಂಟ್‌ ಅಂಡ್‌ ಸ್ಟಾಕಿಸ್ಟ್‌ ಸ್ಕೀಂ ಎಂಬ ಮೂರು ವಿಧದ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಈ ಯೋಜನೆಗಳಲ್ಲಿ ಪ್ರೈಸ್ ಡೆಫಿಸಿಯನ್ಸಿ ಪೇಮೆಂಟ್ ಸ್ಕೀಂ (ಬೆಲೆ ವ್ಯತ್ಯಾಸ ಪಾವತಿ ಯೋಜನೆ ಇಲ್ಲವೇ ಭಾವಾಂತರ ಯೋಜನೆ) ಎಂಬ ವಿನೂತನ ಯೋಜನೆಯನ್ನು, ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂಬುದು ವರ್ತಕ ಸಮೂಹದ ಆಗ್ರಹವಾಗಿದೆ’ ಎಂದು ಬಿಜ್ಜರಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !