ನಮ್ಮ ಮೆಟ್ರೊ 2ನೇ ಹಂತ: 2020ವರೆಗೆ ಕಾಯಬೇಕು ಜನತೆ

7

ನಮ್ಮ ಮೆಟ್ರೊ 2ನೇ ಹಂತ: 2020ವರೆಗೆ ಕಾಯಬೇಕು ಜನತೆ

Published:
Updated:

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದ ವಿಸ್ತರಣೆಯಲ್ಲಿ ಕೈಗೆತ್ತಿಕೊಂಡಿರುವ ಎತ್ತರಿಸಿದ ಮಾರ್ಗಗಳಲ್ಲಿ ಮೊದಲ ರೈಲು ಓಡುವುದನ್ನು ನೋಡಲು ನಗರದ ಜನತೆ 2020ರವರೆಗೆ ಕಾಯಬೇಕು.

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಅವರ ಪ್ರಕಾರ, ಕನಕಪುರ ರಸ್ತೆ ಹಾಗೂ ಮೈಸೂರು ರಸ್ತೆಗಳಲ್ಲಿ ಕೈಗೆತ್ತಿಕೊಂಡಿರುವ ವಿಸ್ತರಣಾ ಕಾಮಗಾರಿಗಳು 2019ರಲ್ಲಿ ಪೂರ್ಣಗೊಳ್ಳಲಿವೆಯಾದರೂ ಅದರಲ್ಲಿ ರೈಲು ಸಂಚಾರ ಆರಂಭವಾಗುವುದು 2020ರಲ್ಲೇ.

ನಮ್ಮ ಮೆಟ್ರೊ 2ನೇ ಹಂತವನ್ನು 2020ರ ಒಳಗೆ ಪೂರ್ಣಗೊಳಿಸಬೇಕು ಎಂದು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಿಸಿದ್ದರು. ಯೆಲಚೇನಹಳ್ಳಿ– ಅಂಜನಾಪುರ ನಡುವಿನ ಎತ್ತರಿಸಿದ ಮಾರ್ಗದ ಕಾಮಗಾರಿಯನ್ನು 2018ರ ಡಿಸೆಂಬರ್‌ ಒಳಗೆ ಹಾಗೂ ಮೈಸೂರು ರಸ್ತೆ– ಕೆಂಗೇರಿ ನಡುವಿನ ಎತ್ತರಿಸಿದ ಮಾರ್ಗದ (6.46 ಕಿ.ಮೀ) ಕೆಲಸವನ್ನು 2019ರಲ್ಲಿ ಪೂರ್ಣಗೊಳಿಸುವಂತೆ ಎಂದು ಈ ಹಿಂದಿನ ಸರ್ಕಾರದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಸೂಚಿಸಿದ್ದರು.

ಯಲಚೇನಹಳ್ಳಿ–  ಅಂಜನಾಪುರ ಮಾರ್ಗದ ಕಾಮಗಾರಿ 2019ರ ಏಪ್ರಿಲ್‌ನಲ್ಲಿ ಪುರ್ಣಗೊಳ್ಳಲಿದೆ. ಮೈಸೂರು–ಕೆಂಗೇರಿ ಮಾರ್ಗದ ಶೇ 75ರಷ್ಟು ಸಿವಿಲ್‌ ಕಾಮಗಾರಿಗಳು ಪೂರ್ಣಗೊಂಡಿವೆ. ನಾವು ಮೊದಲು ಅಂಜನಾಪುರದವರೆಗಿನ ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದೇವೆ’ ಎಂದರು.

ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ಸುರಂಗ ಮಾರ್ಗದ ವಿಸ್ತೃತ ವಿನ್ಯಾಸದ ಪ್ರಗತಿಯಲ್ಲಿದೆ ಎಂದು ಸೇಠ್‌ ತಿಳಿಸಿದರು.

ಮೈಸೂರು ರಸ್ತೆ– ಪಟ್ಟಣಗೆರೆವರೆಗಿನ ಎತ್ತರಿಸಿದ ಮಾರ್ಗದ  (3.95 ಕಿ.ಮೀ) ಕಾಮಗಾರಿಯನ್ನು ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಷಿಯಲ್‌ ಸರ್ವಿಸಸ್‌ (ಐಎಲ್‌ಆ್ಯಂಡ್‌ ಎಫ್‌ಎಸ್‌) ಕಂಪನಿಯು ಗುತ್ತಿಗೆ ವಹಿಸಿಕೊಂಡಿತ್ತು. ಈ ಕಂಪನಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಕಾಮಗಾರಿಗೆ ಹಿನ್ನಡೆ ಆಗಿದೆ. ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರದವರೆಗಿನ ಎತ್ತರಿಸಿದ ಮಾರ್ಗದ ಟೆಂಡರ್‌ನಲ್ಲೂ ಇದೇ ಕಂಪನಿ ಕಡಿಮೆ ಮೊತ್ತವನ್ನು ನಮೂದಿಸಿತ್ತು.

‘ಹೊರ ವರ್ತುಲ ರಸ್ತೆಯ ಮೆಟ್ರೊ ಕಾಮಗಾರಿಯ ಟೆಂಡರ್‌ನ ಮೌಲ್ಯಮಾಪನ ಈಗಷ್ಟೇ ನಡೆಯುತ್ತಿದೆ’ ಎಂದು ಸೇಠ್‌ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !