‘ಫನ್ ಸ್ಕೂಲ್‌’ ಆಟಿಕೆಗಳ ಬಿಡುಗಡೆ

7

‘ಫನ್ ಸ್ಕೂಲ್‌’ ಆಟಿಕೆಗಳ ಬಿಡುಗಡೆ

Published:
Updated:
Deccan Herald

ಫನ್ ಸ್ಕೂಲ್ ಇಂಡಿಯಾ ಲಿಮಿಟೆಡ್‌ ದೀಪಾವಳಿ ಪ್ರಯುಕ್ತ ಆಕರ್ಷಕ ಮೋಜಿನ ಆಟಿಕೆಗಳನ್ನು ಬಿಡುಗಡೆ ಮಾಡಿದೆ. ಎಲ್ಲಾ ವಯೋಮಾನದ ಮಕ್ಕಳು ಬಳಸುವ ವ್ಯಾಪಕ ಶ್ರೇಣಿ ಆಟಿಕೆಗಳ ಸಂಗ್ರಹ ಇದರಲ್ಲಿದೆ.

ಪ್ರೀ- ಸ್ಕೂಲ್‌ಗೆ ಹೆಸರಾಗಿರುವ ಫನ್ ಸ್ಕೂಲ್ ಮಕ್ಕಳಿಗಾಗಿ ವಿಭಿನ್ನ ಮತ್ತು ಹೊಸ ವಿನ್ಯಾಸದ ಆಟಿಕೆಗಳನ್ನು ಪರಿಚಯಿಸಿದೆ. ಒಂದು ಬದಿಯಲ್ಲಿ ಮ್ಯಾಗ್ನೆಟಿಕ್ ಬೋರ್ಡ್, ಇನ್ನೊಂದು ಬದಿಯಲ್ಲಿ ಡ್ರಾಯಿಂಗ್ ಬೋರ್ಡ್ ಜೊತೆಗೆ ಹೋಲ್ಡಿಂಗ್ ಟ್ರೇ ಹೊಂದಿರುವ ಫೋರ್‌ ಇನ್‌ ಒನ್‌ ‘ಮೈ ಫಸ್ಟ್ ಈಸೆಲ್‘ ಬೋರ್ಡ್ ಬಿಡುಗಡೆ ಮಾಡಿದೆ.

ಟ್ರೈವಿಂಗ್ ಬ್ಯಾಟ್‌ಮ್ಯಾನ್ ಎಂಬ 3 ಹಂತದಲ್ಲಿ ರೆಕ್ಕೆಗಳನ್ನು ಮಡಚಬಹುದಾದ ಬಾಡಿ ಆರ್ಮರ್ ಮತ್ತು ಓವರ್-ಹೆಡ್ ಮಿಸ್ಸೈಲ್, ಲಾಂಚರ್ ಹೊಂದಿರುವ ಕ್ಲಾಸಿಕ್ ಬ್ಯಾಟ್‌ಮ್ಯಾನ್ ಅನ್ನೂ ಇದು ಪರಿಚಯಿಸಿದೆ. ಇವು ಮಕ್ಕಳಿಗೆ ವಿಶಿಷ್ಟ ಆರ್ಟ್ ಪ್ರಾಜೆಕ್ಟ್‌ಗಳನ್ನು ರೂಪಿಸಲು ಸಹಾಯಕವಾಗುತ್ತವೆ. ಇದರಲ್ಲಿ ಸ್ಕೆಚ್‌ಪೆನ್‌ಗಳು, ಕ್ರೆಯಾನ್‌ಗಳು, ಲಿಕ್ವಿಡ್‌ಪೈಂಟ್‌, ಗ್ಲಿಟರ್ ಟ್ಯೂಬ್‌ಗಳು ಮತ್ತು ಫನ್ ಪೆನ್ಸಿಲ್‌ಗಳು ಇವೆ.

ಬೆರಳುಗಳಲ್ಲಿ ಸಿಗಿಸಿಕೊಳ್ಳುವ ‘ಪಪ್ಪೆಟ್‌’ಗಳು ಮಕ್ಕಳನ್ನು ಸೆಳೆಯುತ್ತವೆ. ಮಕ್ಕಳಿಗೆ ಇಷ್ಟವಾಗುವ ಪ್ರಾಣಿಗಳ ಆಕೃತಿಯ ಫಿಂಗರ್‌ ಪಪ್ಪೆಟ್‌ಗಳನ್ನು ತಯಾರಿಸಿ, ‘ಗೂಗ್ಲಿ ಐಸ್‌’ಗಳಿಂದ ಅವನ್ನು ಸಿಂಗರಿಸಲಾಗಿದೆ.

ನೇಲ್‌ ಸ್ಟಿಕರ್ಸ್ ಮತ್ತು ನೇಲ್ ಪಾಲಿಶ್‌ಗಳನ್ನು ಮನೆಯಲ್ಲೇ ತಯಾರಿಸುವಂತಹ ಕಿಟ್‌ಗಳೂ ಇವೆ. ಮ್ಯಾಜಿಕಲ್ ಫ್ಲವರ್ ಕ್ಯಾಂಡಲ್ ಲ್ಯಾಂಪ್‌ಕಿಟ್‌ ಹಬ್ಬದ ಸಂದರ್ಭದಲ್ಲಿ ಮನೆಯನ್ನು ಬೆಳಗಿಸಲು ಸಹಕಾರಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !