ಮೆಟ್ರೊ ನಿಲ್ದಾಣದಲ್ಲಿ 55 ದ್ವಿಚಕ್ರ ವಾಹನ ಕದ್ದಿದ್ದರು

ಬುಧವಾರ, ಏಪ್ರಿಲ್ 24, 2019
33 °C
ಮಾಗಡಿ ರಸ್ತೆ ಠಾಣೆ ಪೊಲೀಸರಿಂದ ನಾಲ್ವರ ಬಂಧನ

ಮೆಟ್ರೊ ನಿಲ್ದಾಣದಲ್ಲಿ 55 ದ್ವಿಚಕ್ರ ವಾಹನ ಕದ್ದಿದ್ದರು

Published:
Updated:

ಬೆಂಗಳೂರು: ನಗರದ ಮೆಟ್ರೊ ನಿಲ್ದಾಣಗಳ ಬಳಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕದಿಯುತ್ತಿದ್ದ ನಾಲ್ವರು ಆರೋಪಿಗಳನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಉಪ್ಪಾರಹಳ್ಳಿಯ ದಿನೇಶ್ ಅಲಿಯಾಸ್ ಹಾವು (31), ಹಾಸನ ಶಂಕರಮಠದ ಫೈಜ್ ಶರೀಫ್ (21), ತಾವರೆಕೆರೆಯ ಸೀಗೆಹಳ್ಳಿ ಗೇಟ್‌ನ ಮಹೇಶ್ ಅಲಿಯಾಸ್ ಮಚ್ಚಿ (24) ಹಾಗೂ ಬನ್ನೇರುಘಟ್ಟ ವೃತ್ತದ ಪ್ರವೀಣ್‌ಕುಮಾರ್ (32) ಬಂಧಿತರು. ಅವರಿಂದ ₹27.68 ಲಕ್ಷ ಮೌಲ್ಯದ 55 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

’ರಾಮನಗರದ ಚಿಕ್ಕಲೂರಿನಲ್ಲಿ ವಾಸವಿದ್ದ ದಿನೇಶ್, ಸಹಚರ ಫೈಜ್ ಶರೀಫ್ ಜೊತೆ ಸೇರಿ ಕೃತ್ಯ ಎಸಗುತ್ತಿದ್ದ. ಅವರಿಬ್ಬರು ಕದಿಯುತ್ತಿದ್ದ ವಾಹನಗಳನ್ನು ಆರೋಪಿಗಳಾದ ಮಹೇಶ್ ಹಾಗೂ ಪ್ರವೀಣ್‌ಕುಮಾರ್, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ ಸೇರಿದಂತೆ ಹಲವು ಮೆಟ್ರೊ ನಿಲ್ದಾಣಗಳ ಬಳಿ ಓಡಾಡುತ್ತಿದ್ದ ಆರೋಪಿಗಳು, ನಕಲಿ ಕೀ ಬಳಸಿ ವಾಹನಗಳನ್ನು ಕದಿಯುತ್ತಿದ್ದರು. ಅವುಗಳ ಮಾರಾಟದಿಂದ ಬಂದ ಹಣವನ್ನು ನಾಲ್ವರೂ ಹಂಚಿಕೊಂಡು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು’ ಎಂದರು. 

‘ವಾಹನ ಕಳವು ಪ್ರಕರಣದಲ್ಲಿ ದಿನೇಶ್‌ ಹಾಗೂ ಶರೀಫ್‌ ಕೆಲ ತಿಂಗಳ ಹಿಂದೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಜೈಲಿನಲ್ಲಿದ್ದ ಅವರಿಬ್ಬರು ಇತ್ತೀಚೆಗಷ್ಟೇ ಜಾಮೀನು ಮೇಲೆ ಹೊರಬಂದು ಕೃತ್ಯ ಮುಂದುವರಿಸಿದ್ದರು’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !