ಮೆಟ್ರೊ ಸಂಚಾರ ವ್ಯತ್ಯಯ ಇಂದು

ಸೋಮವಾರ, ಮಾರ್ಚ್ 18, 2019
31 °C
ಉತ್ತರ–ದಕ್ಷಿಣ ಕಾರಿಡಾರ್

ಮೆಟ್ರೊ ಸಂಚಾರ ವ್ಯತ್ಯಯ ಇಂದು

Published:
Updated:

ಬೆಂಗಳೂರು: ಮಹಾಕವಿ ಕುವೆಂಪು ರಸ್ತೆ ಬಳಿ ಹಳಿ ನಿರ್ವಹಣೆ ಕಾಮಗಾರಿ ನಡೆಸಬೇಕಾಗಿರುವುದರಿಂದ ‘ನಮ್ಮ ಮೆಟ್ರೊ’ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಇದೇ 14ರಂದು ರಾತ್ರಿ 9.28ರ ಬಳಿಕ ರೈಲು ಸಂಚಾರ ವ್ಯತ್ಯಯವಾಗಲಿದೆ.

ಯಲಚೇನಹಳ್ಳಿ ನಿಲ್ದಾಣದಿಂದ ನಾಗಸಂದ್ರಕ್ಕೆ ಹೋಗುವ ದಿನದ ಕೊನೆಯ ರೈಲು ರಾತ್ರಿ 9.28ಕ್ಕೆ ಹೊರಡಲಿದೆ. ನಾಗಸಂದ್ರದಿಂದ ಯಲಚೇನಹಳ್ಳಿಗೆ ತೆರಳುವ ಕೊನೆಯ ರೈಲು ರಾತ್ರಿ 9.30ಕ್ಕೆ ಹೊರಡಲಿದೆ. ಬಳಿಕದ ಅವಧಿಯಲ್ಲಿ ಹಸಿರು ಮಾರ್ಗದಲ್ಲಿ ನಾಗಸಂದ್ರ– ಯಶವಂತಪುರದ ನಡುವೆ ಮತ್ತು ಯಲಚೇನಹಳ್ಳಿ– ನ್ಯಾಷನಲ್‌ ಕಾಲೇಜು ನಿಲ್ದಾಣಗಳ ನಡುವೆ ಮಾತ್ರ ರೈಲುಗಳು ಸಂಚರಿಸಲಿವೆ. ಈ ಅವಧಿಯಲ್ಲಿ ನ್ಯಾಷನಲ್‌ ಕಾಲೇಜು ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಮೆಟ್ರೊ ರೈಲು ಸಂಚಾರ ಇರುವುದಿಲ್ಲ.

ಮಾರ್ಚ್‌ 15ರಂದು (ಶುಕ್ರವಾರ) ಹಸಿರು ಮಾರ್ಗದ ರೈಲುಗಳ ಸಂಚಾರ ಬೆಳಿಗ್ಗೆ 5.30ರ ಬದಲು ಬೆಳಿಗ್ಗೆ 7ರಿಂದ  ಆರಂಭವಾಗಲಿದೆ. ಬಳಿಕ ನಿಗದಿತ ವೇಳಾಪಟ್ಟಿಯನುಸಾರ ರೈಲುಗಳು ಸಂಚರಿಸಲಿವೆ.

ನೇರಳೆ ಮಾರ್ಗದಲ್ಲಿ ಗುರುವಾರ ಹಾಗೂ ಶುಕ್ರವಾರ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಮೆಟ್ರೊ ನಿಗಮದ ಪ್ರಕಟಣೆ ತಿಳಿಸಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !