ಯಥಾಸ್ಥಿತಿಗೆ ಮರಳಿದ ಮೆಟ್ರೊ ಸಂಚಾರ

7
ಎಂ.ಜಿ.ರಸ್ತೆ– ಇಂದಿರಾನಗರ ನಡುವಿನ ಮಾರ್ಗ ದುರಸ್ತಿ l ಸೆನ್ಸರ್‌ಗಳ ಅಳವಡಿಕೆ

ಯಥಾಸ್ಥಿತಿಗೆ ಮರಳಿದ ಮೆಟ್ರೊ ಸಂಚಾರ

Published:
Updated:
Prajavani

ಬೆಂಗಳೂರು: ಎಂ.ಜಿ.ರಸ್ತೆ– ಇಂದಿರಾನಗರ ನಡುವಿನ ಮೆಟ್ರೊ ಸಂಚಾರ ಮಂಗಳವಾರ ಬೆಳಿಗ್ಗೆ 9.35ರಿಂದ ಎಂದಿನಂತೆ ಆರಂಭವಾಯಿತು.

ಟ್ರನಿಟಿ ನಿಲ್ದಾಣದ ಬಳಿ ಪಿಲ್ಲರ್‌ ಸಂಖ್ಯೆ 155ರ ಮೇಲಿನ ವಯಡಕ್ಟ್‌ನಲ್ಲಿ ಕಾಂಕ್ರೀಟ್‌ ದುರ್ಬಲಗೊಂಡಿತ್ತು. ಹನಿ ಕಾಂಬಿಂಗ್‌ ಎಂದು ಕರೆಯಲಾಗುವ ಈ ಸಮಸ್ಯೆಯನ್ನು ಸರಿಪಡಿಸಲು ಡಿಸೆಂಬರ್‌ 28ರ ರಾತ್ರಿಯಿಂದ ಈ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪರ್ಯಾಯವಾಗಿ ಬೈಯಪ್ಪನಹಳ್ಳಿಯಿಂದ ಕಬ್ಬನ್‌ ಪಾರ್ಕ್‌ವರೆಗೆ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಈ ಅವಧಿಯಲ್ಲಿ ಮೆಟ್ರೊ ಪ್ರಯಾಣಿಕರ ಪ್ರಮಾಣ ಶೇ 20ರಷ್ಟು ಕುಸಿದಿತ್ತು.

ಸೋಮವಾರ ರಾತ್ರಿಯೇ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಆರಂಭಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ 1 ಗಂಟೆಯ ನಂತರ ರೈಲುಗಳು ಸಂಚರಿಸಲಿವೆ ಎಂದು ಹೇಳಲಾಗಿತ್ತು. ಆದರೆ ಸುರಕ್ಷತೆ  ಖಾತ್ರಿಯಾದ ಕಾರಣ ಬೆಳಿಗ್ಗೆಯೇ ರೈಲುಗಳನ್ನು ಓಡಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

‘ನೇರಳೆ ಮಾರ್ಗದಲ್ಲಿ ಸುರಕ್ಷತಾ ಪರೀಕ್ಷೆ ನಡೆಯುತ್ತಿದೆ. ನಗರದಲ್ಲಿ ಉಳಿದೆಲ್ಲ ಪಿಲ್ಲರ್ ಹಾಗೂ ವಯಡಕ್ಟ್‌ಗಳ ತಾಂತ್ರಿಕ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ದೋಷ ಕಂಡುಬಂದಲ್ಲಿ ತಕ್ಷಣ ಸರಿಪಡಿಸಲಾಗುವುದು’ ಎಂದು ಮೆಟ್ರೊ ನಿಗಮದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶವಂತ ಚವಾಣ್‌ ತಿಳಿಸಿದರು. ಪಿಲ್ಲರ್ ಸಂಖ್ಯೆ 155ರ ಮೇಲೆ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ ಒಂದು ತಿಂಗಳು ನಿಗಾ ವಹಿಸಲಿದೆ. ಈ ಪಿಲ್ಲರ್ ವಯಡಕ್ಟ್ ಪ್ರದೇಶದಲ್ಲಿ 27
ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ವಯಡಕ್ಟ್ ಅದರ ತಾಳಿಕೆ ಸಾಮರ್ಥ್ಯವನ್ನು ಅಳೆಯಲಾಗುವುದು ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದರು.

ಬಿಎಂಟಿಸಿ– ಮೆಟ್ರೊ ಬೆಸೆದ ನಂಟು

ಮೂರು ದಿನಗಳ ಅವಧಿಯಲ್ಲಿ ಮೆಟ್ರೊ ನಿಗಮವು ಕಬ್ಬನ್‌ ಪಾರ್ಕ್‌ – ಬೈಯಪ್ಪನಹಳ್ಳಿ ನಡುವೆ  ಉಚಿತ ಬಸ್‌ ವ್ಯವಸ್ಥೆ ಮಾಡಿತ್ತು. ಇದಕ್ಕಾಗಿ ಬಿಎಂಟಿಸಿಯಿಂದ 110 ಬಸ್‌ಗಳನ್ನು ‍ಪಡೆಯಲಾಗಿತ್ತು. ಇದೇ ಅವಧಿಯಲ್ಲಿ ಈ ಮಾರ್ಗದಲ್ಲಿ ಮೆಟ್ರೊ ಸಾರಿಗೆಯ ಮಹತ್ವವೂ ಜನರಿಗೆ ಅರಿವಾಯಿತು.

ಈ ಹಿಂದೆ ಮೆಟ್ರೊ ನಿಲ್ದಾಣಗಳಿಗೆ ಫೀಡರ್‌ ಬಸ್‌ ಸೌಲಭ್ಯವನ್ನು ಬಿಎಂಟಿಸಿ ಸ್ಥಗಿತಗೊಳಿಸಿತ್ತು. ಆರ್ಥಿಕ ನಷ್ಟಕ್ಕೆ ಒಳಗಾಗುವುದರಿಂದ ಈ ಸೇವೆಯನ್ನು ಹಿಂಪಡೆದಿತ್ತು. ಮಾತ್ರವಲ್ಲ. ಫೀಡರ್‌ ಮಾರ್ಗದಲ್ಲಿ ಬಸ್‌ ಓಡಿಸಲು ಆರ್ಥಿಕ ನೆರವು ನೋಡಲು ಬಿಎಂಟಿಸಿ ಸರ್ಕಾರವನ್ನು ಕೋರಿತ್ತು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !