ಬೆಂಗಳೂರಿನಲ್ಲಿ ಭಾನುವಾರಗಳಂದು 7 ಗಂಟೆಗೆ ಮೆಟ್ರೊ ಸಂಚಾರ

7

ಬೆಂಗಳೂರಿನಲ್ಲಿ ಭಾನುವಾರಗಳಂದು 7 ಗಂಟೆಗೆ ಮೆಟ್ರೊ ಸಂಚಾರ

Published:
Updated:

ಬೆಂಗಳೂರು: ಮೆಟ್ರೊ ರೈಲು ಭಾನುವಾರಗಳಂದು ಬೆಳಿಗ್ಗೆ 7 ಗಂಟೆಗೆ ಸಂಚಾರ ಆರಂಭಿಸಲಿದೆ. ಇದುವರೆಗೆ 8 ಗಂಟೆಗೆ ಸಂಚಾರ ಆರಂಭವಾಗುತ್ತಿತ್ತು. ಇತರ ದಿನಗಳಲ್ಲಿ 5.30ರಿಂದ ಸಂಚಾರ ಆರಂಭವಾಗುತ್ತದೆ. 

ಭಾನುವಾರವೂ ಕೂಡಾ ಮೆಟ್ರೊ ರೈಲನ್ನು ಬೆಳಿಗ್ಗೆ 6 ಗಂಟೆಯಿಂದ ಆರಂಭಿಸಬೇಕು ಎಂಬ ಒತ್ತಾಯ ಇತ್ತು. ಆದರೆ, ಮೊದಲ ಹಂತದಲ್ಲಿ ಬೆಳಿಗ್ಗೆ 7ರಿಂದ ಸಂಚಾರ ಆರಂಭಿಸುವುದಾಗಿ ನಿಗಮ ಹೇಳಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಸೇವೆಯನ್ನು ಇನ್ನೂ ಒಂದು ಗಂಟೆ ಮುಂಚಿತವಾಗಿ ಆರಂಭಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ಬೆಳಿಗ್ಗೆ ಬೇಗನೆ ಸಂಚಾರ ಆರಂಭಿಸಿರುವುದರಿಂದ ಕಬ್ಬನ್‌, ಲಾಲ್‌ಬಾಗ್‌ ಉದ್ಯಾನಕ್ಕೆ ಬರುವ ವಾಯುವಿಹಾರಿಗಳಿಗೆ ಅನುಕೂಲವಾಗಲಿದೆ. ಭಾನುವಾರ ಹೊರ ಪ್ರದೇಶಗಳಿಂದ ನಗರಕ್ಕೆ ಬಂದವರು ಮೆಟ್ರೊ ಇಲ್ಲದೆ ಸ್ಥಳೀಯ ಸಂಚಾರಕ್ಕೆ ಬಸ್‌ ಅಥವಾ ಆಟೋರಿಕ್ಷಾಗಳನ್ನು ಅವಲಂಬಿಸಬೇಕಿತ್ತು. ಹಲವರು ಪರದಾಡುವುದೂ ಸಾಮಾನ್ಯವಾಗಿತ್ತು.

ಹೊಸ ಸಂಚಾರ ಸಮಯ ಘೋಷಿಸಿದ ಬಳಿಕ ರೈಲುಗಳು, ನಿಲ್ದಾಣ ನಿರ್ವಹಣೆಗೆ ನಾವು ಸಮಯ ಹೊಂದಾಣಿಕೆ ಮಾಡಬೇಕಿದೆ. ಸಂಚಾರದಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಸವಾಲೂ ಇಲ್ಲಿದೆ. ಸಿಬ್ಬಂದಿಯನ್ನೂ ಮಾನಸಿಕವಾಗಿ ಸಜ್ಜುಗೊಳಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹೊಸ ಕ್ರಮವನ್ನು ನಗರದ ನಾಗರಿಕರು ಸ್ವಾಗತಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !