ಬಸವನಗುಡಿಯಲ್ಲಿರುವ ಬಿಎಂಎಸ್‌ಸಿಇ ಕಾಲೇಜಿನ ದೂರಸಂಪರ್ಕ ವಿಭಾಗವು `ವೈರ್‌ಲೆಸ್, ಸಿಗ್ನಲ್ ಪ್ರಾಸೆಸಿಂಗ್ ಅಂಡ್ ಎಂಬೆಡೆಡ್ ಸಿಸ್ಟಮ್ಸ' ಎಂಬ ಎರಡು ದಿನಗಳ ರಾಷ್ಟ್ರಮಟ್ಟದ ಸಮಾವೇಶ ಆಯೋಜಿಸಿತ್ತು.
ಎಂಜಿನಿಯರಿಂಗ್ ವೃತ್ತಿಪರರ ಜ್ಞಾನವನ್ನು ವಿಸ್ತರಿಸುವುದು ಹಾಗೂ ಎಂಜಿನಿಯರಿಂಗ್ ಕ್ಷೇತ್ರದ ಬೆಳವಣಿಗೆ ಹಾಗೂ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ಕೈಗೊಳ್ಳುವುದು ಈ ಸಮಾವೇಶದ ಉದ್ದೇಶವಾಗಿತ್ತು. ಸಮಾವೇಶದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಿಷಯಗಳನ್ನು ಮಂಡಿಸಿದರು.
ಆರ್‌ವಿಸಿಇ, ಆರ್‌ಇವಿಎ ಐಟಿಎಂ, ಪೆಸಿಟ್, ಏಟ್ರಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಿದ್ದಗಂಗಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಿಎಂಎಸ್‌ಸಿಇ, ರಾಜೀವ್ ಗಾಂಧಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯೋನೇಜ್‌ಮೆಂಟ್, ಜೈನ್ ಯೂನಿವರ್ಸಿಟಿ, ಡಾ. ಎಐಟಿ, ಐಐಎಸ್‌ಸಿ, ಬೆಂಗಳೂರು, ಎಸ್‌ಐಟಿ ತುಮಕೂರು, ಎಸ್‌ಜೆಬಿಐಟಿ ಸೇರಿದಂತೆ ಬೆಂಗಳೂರು ನಗರದ 18 ಕಾಲೇಜುಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದವು.
ಖ್ಯಾತ ಶಿಕ್ಷಣ ತಜ್ಞರು, ಕೈಗಾರಿಕಾ ತಜ್ಞರು ಹಾಗೂ ಐಟಿ ಕಂಪೆನಿಗಳ ವಕ್ತಾರರು ಈ ಸಮಾವೇಶದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗಕ್ಕೆ ಉಪಯೋಗವಾಗುವಂತಹ ಮೌಲ್ಯಯುತ ವಿಷಯಗಳನ್ನು ತಿಳಿಸಿಕೊಟ್ಟರು.
ಡಾ. ಜಿ.ಎನ್. ಶೇಖರ್ (ಉಪ ಪ್ರಾಂಶುಪಾಲ, ಬಿಎಂಎಸ್‌ಸಿಇ), ಡಾ. ಮಲ್ಲಿಕಾರ್ಜುನ ಬಾಬು (ಪ್ರಾಂಶುಪಾಲ, ಬಿಎಂಎಸ್‌ಸಿಇ), ಡಾ. ಮಾರ್ಟಿನ್ ಜೆಬರಾಜ್ (ಆರ್‌ಡಿ ನಿರ್ದೇಶಕ, ಬಿಎಂಎಸ್‌ಸಿಇ), ಡಾ. ಬಿ. ಕಣ್ಮಣಿ (ವಿಭಾಗ ಮುಖ್ಯಸ್ಥರು, ಬಿಎಂಎಸ್‌ಸಿಇ), ಡಾ. ಎನ್. ಜೆ. ರಾವ್ (ಪ್ರಾಧ್ಯಾಪಕರು, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್), ಶೇಖರ್ ಸನ್ಯಾಲ್ (ಕಂಟ್ರಿ ಹೆಡ್, ಐಜೆಟಿ), ಧನಬಲ್ ಸೊಲೈಕುಟ್ಟಿ (ಶೈಕ್ಷಣಿಕ ಪ್ರಬಂಧಕ, ನ್ಯಾಷನಲ್ ಇನ್ಸ್‌ಟ್ರುಮೆಂಟ್ಸ್) ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.