ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಗೇಡ್ ರೋಡ್ ನೆಚ್ಚಿನ ತಾಣ...

Last Updated 7 ಜೂನ್ 2012, 19:30 IST
ಅಕ್ಷರ ಗಾತ್ರ

ರಣ್‌ವಿಜಯ್ ಸಿಂಗ್ ಎಂಟಿವಿ ಪ್ರಿಯರಿಗೆ ಚಿರಪರಿಚಿತ ಮುಖ. 2003ರಲ್ಲಿ ಶುರುವಾದ `ಎಂಟಿವಿ ರೋಡಿಸ್~ನಲ್ಲಿ ವಿಜಯಿಯಾಗಿ ಖ್ಯಾತಿ ಗಳಿಸಿದ ರಣ್‌ವಿಜಯ್ ಈಗ ದೇಶದ ಪ್ರಖ್ಯಾತ ವಿಡಿಯೊ ಜಾಕಿಗಳಲ್ಲೊಬ್ಬ. `ಎಂಟಿವಿ ರೋಡಿಸ್~ ರಿಯಾಲಿಟಿ ಶೋ ನಿರೂಪಣೆ ಹೊಣೆ ಕೂಡ ಇವರದ್ದೇ.

`ಎಂಟಿವಿ ರೋಡಿಸ್~ ಕೇವಲ ಕಾರ್ಯಕ್ರಮವಲ್ಲ. ಅದು ಜೀವನದ ಒಂದು ಹಾದಿ~ ಎಂದು ವ್ಯಾಖ್ಯಾನಿಸುವ ರಣ್‌ವಿಜಯ್ ನಟನಾಗಿ ಬಾಲಿವುಡ್‌ನ ಕೆಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

 

ಕ್ರೂಸೋ ಬಗ್ಗೆ ಒಂದಿಷ್ಟು...

ಟೆಕ್ಸ್‌ಟೈಲ್ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವವಿರುವ ಜಗನ್ನಾಥ್ ಟೆಕ್ಸ್‌ಟೈಲ್ ಕಂಪೆನಿ ಲಿಮಿಟೆಡ್ 2009ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ವಿವಿಧ ಶ್ರೇಣಿಗಳ ಪುರುಷರ ಒಳ ಉಡುಪುಗಳ ಬ್ರಾಂಡ್ ಕ್ರೂಸೋ.

ಆಧುನಿಕ ಜೀವನ ಶೈಲಿಯ ಉತ್ಪನ್ನ ಎಂದು ಪರಿಗಣಿಸಲಾಗಿರುವ ಕ್ರೂಸೋ ಬ್ರಾಂಡ್ ಗುರುತಿಸಿಕೊಂಡಿರುವುದು `ಸಾಹಸ~/ `ಶೌರ್ಯ~ ಪದದೊಂದಿಗೆ.
ಈಗಾಗಲೇ ಕ್ರೂಸೋ 50ಕ್ಕೂ ನಮೂನೆಗಳ ಪುರುಷರ ಒಳ ಉಡುಪುಗಳನ್ನು ಪರಿಚಯಿಸಿದೆ. ಪ್ರಸ್ತುತ ಈ ಬ್ರಾಂಡ್‌ನ ಉತ್ಪನ್ನಗಳು 22 ರಾಜ್ಯಗಳಲ್ಲಿ ಲಭ್ಯವಿದೆ. 

 `ಎಂಟಿವಿ ರೋಡಿಸ್~ ಪುರುಷರ ಒಳ ಉಡುಪಗಳ ಬಿಡುಗಡೆ ಸಮಾರಂಭದಲ್ಲಿ ಕ್ರೂಸೋದ ಮಾರುಕಟ್ಟೆ ಮುಖ್ಯಾಧಿಕಾರಿ ಅಭಿಷೇಕ್ ಟಿಬ್ರೆವಾಲ್, ವಯಾಕೊಮ್18 ಮೀಡಿಯಾ ಪ್ರೈ.ಲಿನ (ಎಂಟಿವಿ) ಗ್ರಾಹಕ ಉತ್ಪನ್ನಗಳು ಮತ್ತು ಸಂವಹನ ವಿಭಾಗದ ಹಿರಿಯ ಉಪಾಧ್ಯಕ್ಷ ಸಂದೀಪ್ ದಹಿಯಾ ಉಪಸ್ಥಿತರಿದ್ದರು.

ಎಂಟಿವಿಯ ಪ್ರಮುಖ ವಿಜೆ ಆಗಿರುವ ರಣ್‌ವಿಜಯ್, ಎಂಟಿವಿ ಮತ್ತು ಕ್ರೊಸೋ ಜಂಟಿಯಾಗಿ ಹೊರತಂದಿರುವ ವಿವಿಧ ಶ್ರೇಣಿಯ `ಎಂಟಿವಿ ರೋಡಿಸ್~ ಪುರುಷರ ಒಳ ಉಡುಪುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಉದ್ಯಾನ ನಗರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು `ಮೆಟ್ರೊ~ ಮಾತಿಗೆ ಸಿಕ್ಕಾಗ.

2003ರಿಂದ `ಎಂಟಿವಿ ರೋಡಿಸ್~ನಲ್ಲಿ ಗುರುತಿಸಿಕೊಂಡಿದ್ದೀರಿ. ನಿಮ್ಮ ಪಯಣದ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ...
ನಮ್ಮದು ಸೇನಾ ಕುಟುಂಬ. ತಾತ, ತಂದೆ ಸೇನೆಯಲ್ಲಿ ದುಡಿದವರು. ನಾನೂ ಸೇನೆಗೆ ಸೇರಬೇಕೆಂದಿದ್ದೆ. 2003ರಲ್ಲಿ `ಎಂಟಿವಿ ರೋಡಿಸ್~ ಕಾರ್ಯಕ್ರಮ ಆರಂಭಿಸಿದಾಗ ಅದರಲ್ಲಿ ಹೀರೋ ಹೊಂಡಾ ಕರಿಷ್ಮಾ ಬೈಕ್ ಬಹುಮಾನವಾಗಿಟ್ಟಿದ್ದರು. ಆ ಬೈಕ್ ಪಡೆಯಲೇ ಬೇಕೆಂಬ ಅಭಿಲಾಷೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿತು. ನಾನು ಹಾಕಿದ ಶ್ರಮಕ್ಕೆ ಪ್ರತಿಫಲ ಸಿಕ್ಕಿತು. ಚೊಚ್ಚಿಲ ಕಾರ್ಯಕ್ರಮದಲ್ಲಿ ನಾನೇ `ಎಂಟಿವಿ ರೋಡಿ~ ಆದೆ.

~ರೋಡಿ~ಯಿಂದ `ರೋಡಿಸ್~ ಕಾರ್ಯಕ್ರಮ ನಿರೂಪಕನಾದ ಬಗೆ?
ನನ್ನಲ್ಲಿರುವ ಸಾಮರ್ಥ್ಯವನ್ನು ಎಂಟಿವಿ ಗುರುತಿಸಿತು. ಮರುವರ್ಷದಿಂದ ಈ ರಿಯಾಲಿಟಿ ಶೋನ ನಿರೂಪಣೆ ಜವಾಬ್ದಾರಿಯನ್ನೂ ನನ್ನ ಹೆಗಲಿಗೇರಿಸಿತು.

ನಿರೂಪಣೆ ಕೆಲಸ ಹೇಗನ್ನಿಸುತ್ತದೆ?
ಈ ಕೆಲಸವನ್ನು ತುಂಬಾ ಇಷ್ಟಪಡುತ್ತೇನೆ. ಇದೊಂದು ಸಾಹಸಮಯ ಕಾರ್ಯಕ್ರಮ. ಇದು ನನ್ನನ್ನು ಯಾವಾಗಲೂ ಕ್ರಿಯಾಶೀಲನಾಗಿ ಇರುವಂತೆ ಮಾಡಿದೆ.  ಪ್ರಯಾಣ, ಪ್ರವಾಸ ಎಂದರೆ ನನಗೆ ಅಚ್ಚುಮೆಚ್ಚು. `ರೋಡಿಸ್~ ಈ ಎಲ್ಲಾ ಅವಕಾಶಗಳನ್ನು ಕಲ್ಪಿಸಿದೆ. ನನ್ನ ಕೆಲಸ ತೃಪ್ತಿ ತಂದಿದೆ.

`ರೋಡಿಸ್~ ಕಾರ್ಯಕ್ರಮವನ್ನು ಹೇಗೆ ವಿಶ್ಲೇಷಿಸುತ್ತೀರಿ?
ನಾನು ಮೊದಲೇ ಹೇಳಿದಂತೆ ಇದು ಕೇವಲ ರಿಯಾಲಿಟಿ ಶೋ ಅಲ್ಲ. ಜೀವನದ ಒಂದು ದಾರಿ. ಸಾಮಾನ್ಯ ಜನರು ಅಸಾಮಾನ್ಯವಾದುದನ್ನು ಮಾಡುವ ಕಾರ್ಯಕ್ರಮ ಇದು. ಯುವಕರಿಗೇ ಮೀಸಲಾದ ಶೋ. ಸಾಹಸಮಯವೂ ಹೌದು.

`ರೋಡಿಸ್~ ಅಂದು-ಇಂದು: ಏನಾದರೂ ಬದಲಾವಣೆಗಳನ್ನು ಗುರುತಿಸಿದ್ದೀರಾ?
ಸಾಕಷ್ಟು ಬದಲಾವಣೆಗಳಾಗಿವೆ. ಈಗ ಇದು ದೊಡ್ಡ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಸ್ಪರ್ಧಿಗಳು ಜಾಸ್ತಿ ಇದ್ದಾರೆ.  ಇದರತ್ತ ಯುವಕರು ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ನಿಮ್ಮ ಬೈಕ್ ಕ್ರೇಜ್‌ನ ಬಗ್ಗೆ ಹೇಳಿ?
ಬಾಲ್ಯದಿಂದಲೇ ನನಗೆ ಬೈಕುಗಳ ಮೇಲೆ ಹೆಚ್ಚು ಮೋಹ.  ನನ್ನ ತಾತ ಸೇನೆಯಲ್ಲಿದ್ದರು. ವಿಶೇಷ ಸಂದರ್ಭಗಳಲ್ಲಿ ಸೇನಾ ಸಿಬ್ಬಂದಿ ದ್ವಿಚಕ್ರ ವಾಹನಗಳಲ್ಲಿ ನಡೆಸುತ್ತಿದ್ದ ಕಸರತ್ತುಗಳನ್ನು ನೋಡುತ್ತಾ ಬೆಳೆದವನು ನಾನು. ಹಾಗಾಗಿ ಬೈಕುಗಳತ್ತ ಆಕರ್ಷಿತನಾದೆ.

ಬಾಲಿವುಡ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದೀರಿ. ಅವಕಾಶಗಳು ಹೇಗಿವೆ?
ಲಂಡನ್ ಡ್ರೀಮ್ಸ, ಆ್ಯಕ್ಷನ್ ರೀಪ್ಲೆ ಸೇರಿದಂತೆ ಇದುವರೆಗೆ ಏಳು ಚಿತ್ರಗಳಲ್ಲಿ ನಟಿಸಿದ್ದೇನೆ. ಅವಕಾಶಗಳು ಒಂದೊಂದಾಗಿ ಬರುತ್ತಿವೆ.

ಪ್ರಾದೇಶಿಕ ಭಾಷಾ ಚಿತ್ರಗಳಲ್ಲಿ ನಟಿಸುವ ಇರಾದೆ ಇದೆಯಾ?
ಈಗಾಗಲೇ ಪಂಜಾಬಿ ಚಿತ್ರಗಳಲ್ಲಿ ನಡೆಸಿದ್ದೇನೆ. ನಮ್ಮ ದೇಶದಲ್ಲಿ ಪ್ರಾದೇಶಿಕ ಭಾಷಾ ಚಿತ್ರಗಳು ಬಹಳ ಮುಖ್ಯ. ಒಬ್ಬ ನಟನಾಗಿ ಹೆಚ್ಚು ಜನರನ್ನು ತಲುಪಬೇಕಾದರೆ ಈ ದೇಶದಲ್ಲಿ ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಲೇಬೇಕು.

ಎಂತಹ ಪಾತ್ರಗಳಲ್ಲಿ ನಟಿಸಲು ಇಷ್ಟ ಪಡುತ್ತೀರಿ?
ಉತ್ತಮ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಕಾಂಕ್ಷೆ ನನಗೂ ಇದೆ. ಯುವಜನ ಕೇಂದ್ರಿತ ಚಿತ್ರಗಳಲ್ಲಿ ನಟಿಸುವ ಬಯಕೆಯಿದೆ. ಪ್ರಮುಖ ಪಾತ್ರಗಳನ್ನೇ ನಿರ್ವಹಿಸಲು ಇಚ್ಛಿಸುತ್ತೇನೆ.
ಕಾರ್ಯಕ್ರಮ ನಿರೂಪಣೆ ಮತ್ತು ಸಿನಿಮಾ ನಟನೆ. ಹೊಂದಾಣಿಕೆ ಹೇಗೆ ಮಾಡುತ್ತೀರಿ?
ಎರಡನ್ನೂ ಸಮತೋಲನ ಮಾಡಿಕೊಂಡು ನಿಭಾಯಿಸಲು ಯತ್ನಿಸುತ್ತಿದ್ದೇನೆ.

ನಿಮ್ಮ ಕಣ್ಣಲ್ಲಿ ಬೆಂಗಳೂರು...
ಒಂದೇ ಮಾತಲ್ಲಿ ಹೇಳುವುದಾದರೆ ಇದು ಸುಂದರ ನಗರ. ಇಲ್ಲಿಯ ಹವಾಮಾನ ನನಗಿಷ್ಟ. ಈ ಹಿಂದೆ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ನನ್ನ ಹಲವು ಸ್ನೇಹಿತರು ಇಲ್ಲಿದ್ದಾರೆ. ಅವರೊಂದಿಗೆ ಇಲ್ಲಿನ ರಸ್ತೆಗಳಲ್ಲಿ ಬೈಕ್ ಸವಾರಿ ಮಾಡುತ್ತಿದ್ದೆ. ಬ್ರಿಗೇಡ್ ರಸ್ತೆ ನನ್ನ ನೆಚ್ಚಿನ ತಾಣ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT