ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನಮತ್ತ ಚಾಲನೆಗೆ ‘ಆಲ್ಕೊಲಾಕ್ಸ್’ ಕಣ್ಗಾವಲು

Last Updated 11 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಮಾಲೀಕರ ಕಣ್ಣು ತಪ್ಪಿಸಿ ಚಾಲಕರು ಮದ್ಯ ಸೇವಿಸುತ್ತಾರೆ.‌ಇದರಿಂದ ಅಪಘಾತ ಸಂಭವಿಸಿ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ, ಇನ್ನು ಮುಂದೆ ಮಾಲೀಕರುಪಾನಮತ್ತ ಚಾಲಕರಿಂದ ತಮ್ಮ ವಾಹನವನ್ನು ರಕ್ಷಿಸಿಕೊಳ್ಳಬಹುದು. ಮೊಬೈಲ್‌ ಮೂಲಕವೇ ವಾಹನ ಸ್ಟಾರ್ಟ್‌ ಆಗದಂತೆ ತಡೆಯಬಹುದಾಗಿದೆ. ಅದಕ್ಕಾಗಿ ಹೊಸ ಸಾಧನ ಬಂದಿದೆ.

ವಾಹನ ಹಾಗೂ ಚಾಲಕನ ಮೇಲೆ ನಿಗಾ ಇಡಲು ‘ಆಲ್ಕೊಲಾಕ್‌’ ಎಂಬ ಸಾಧನವನ್ನು ಆಂಧ್ರಪ್ರದೇಶದ ವಿಜಯವಾಡ ಮೂಲದ ರಾಮ್‌ನಾಥ್‌ ಮಂದಲಿ ಅಭಿವೃದ್ಧಿಪಡಿಸಿದ್ದಾರೆ.ಇದರ ಹಿಂದೆ ಅವರ ಹದಿನೈದು ವರ್ಷಗಳ ನಿರಂತರ ಪ್ರಯತ್ನ ಮತ್ತು ಶ್ರಮ ಇದೆ.

‘ವಾಹನ ಸ್ಟಾರ್ಟ್‌ ಮಾಡುವ ಮುನ್ನಚಾಲಕರು ಒಮ್ಮೆ ಆಲ್ಕೊಲಾಕ್‌ ಸಾಧನದ ಎದುರು ಊದಬೇಕು. ಒಂದು ವೇಳೆ ಚಾಲಕ ಮದ್ಯ ಸೇವನೆ ಮಾಡಿದ್ದರೆ ಮಾಲೀಕರ ಆ್ಯಪ್‌ಗೆ ಸಂದೇಶ ರವಾನೆಯಾಗುತ್ತದೆ. ಆ್ಯಪ್‌ ಮುಖಾಂತರವೇ ಮಾಲೀಕವಾಹನ ಸ್ಟಾರ್ಟ್‌ ಆಗದಂತೆ ತಡೆಯಬಹುದು’ ಎನ್ನುತ್ತಾರೆರಾಮ್‌ನಾಥ್‌.

‘ಮಾರ್ಗ ಮಧ್ಯೆದಲ್ಲಿ ಎಲ್ಲಿಯಾದರೂ ಚಾಲಕ ಮದ್ಯ ಸೇವಿಸಿದರೂ ಸಾಧನ ಮಾಲೀಕರಿಗೆ ಸಂದೇಶ ರವಾನಿಸುತ್ತದೆ. ವಾಹನದ ಭದ್ರತಾ ದೃಷ್ಟಿಯಿಂದ ಈ ಸಾಧನ ಮಾಲೀಕರಿಗೆ ನೆರವಾಗಲಿದೆ. ಚಾಲಕನ ಸ್ಥಿತಿಗತಿಗಳ ಇಂಚಿಂಚೂ ಮಾಹಿತಿ ಮಾಲೀಕನ ಮೊಬೈಲ್‌ಗೆ ರವಾನೆಯಾಗುತ್ತದೆ’ ಎಂದು ಅವರು ವಿವರಿಸಿದರು.

‘ಇದು ವಾಹನಕ್ಕೆ ಭದ್ರತೆ ನೀಡುವ ಜೊತೆಗೆ ಚಾಲಕನ ಪ್ರಾಣವನ್ನೂ ರಕ್ಷಿಸುತ್ತದೆ. ಈ ಸಾಧನದಲ್ಲಿ ಸ್ಪೈ ಕ್ಯಾಮೆರ ಇದ್ದು, ಅದು ಚಾಲಕನ ಗಮನಕ್ಕೆ ಬರುವುದಿಲ್ಲ.ಯಾವುದೇ ಕಾರಣಕ್ಕೂ ಚಾಲಕರು ಈ ಸಾಧನದ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಚಾಲಕನ ಚಲನವಲನಗಳ ಮೇಲೆ ನಿಗಾ ಇಡುತ್ತದೆ’ ಎಂದರು.

₹9 ಸಾವಿರ ಖರ್ಚು ಮಾಡಿದರೆಈಆಲ್ಕೊಲಾಕ್‌ ಸಾಧನವನ್ನು ನಿಮ್ಮ ವಾಹನಗಳಿಗೂ ಅಳವಡಿಸಬಹುದು. ಕಾರು, ಟ್ರಕ್‌, ಲಾರಿ, ಬಸ್‌ಗಳಲ್ಲಿ ಬಳಸಬಹುದು.ಆಂಧ್ರಪ್ರದೇಶ ಸಾರ್ವಜನಿಕ ಬಸ್‌ಗಳಲ್ಲಿ ಈಗಾಗಲೇ ಈ ಸಾಧನ ಅಳವಡಿಸಲಾಗಿದೆ. ಸರಕು ಸಾಗಣೆ ವಾಹನಗಳಿಗೂ ಈ ಸಾಧನ ಹೆಚ್ಚು ಉಪಯುಕ್ತ.

ರಾಜ್ಯದ ಖಾಸಗಿ ಬಸ್‌ಗಳಲ್ಲೂಆಲ್ಕೊಲಾಕ್‌ ಬಳಕೆಯಾಗುತ್ತಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲೂ ಈ ಸಾಧನ ಅಳವಡಿಸಲು ಅಧಿಕಾರಿಗಳಿಗೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದುರಾಮ್‌ನಾಥ್‌ ತಿಳಿಸಿದರು.

ನಿಮ್ಮ ವಾಹನಗಳಿಗೂ ‘ಆಲ್ಕೊಲಾಕ್ಸ್’ ಸಾಧನ ಅಳವಡಿಸಲು...

ವಿಳಾಸ: ಬೈಡ್‌ ಆಟೊ ಟೆಕ್ನಾಲಜೀಸ್‌, #35, ಸುಪ್ರಭಾ ಕಾಂಪ್ಲೆಕ್ಸ್‌, ವಾಸವಿ ದೇವಸ್ಥಾನ ರಸ್ತೆ, ಜೈನ್‌ ಕಾಲೇಜು ಎದುರು,ವಿ.ವಿ. ಪುರಂ

ಸಂಪರ್ಕ– 9916686615, 6300049774

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT