ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಗಲ್‌ ಕ್ವೀನ್‌ ಚಾರ್ಲೆಟ್‌

Last Updated 25 ನವೆಂಬರ್ 2019, 7:00 IST
ಅಕ್ಷರ ಗಾತ್ರ

ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಅಮೆರಿಕದ ಚಾರ್ಲೆಟ್‌ಫ್ಲೇರ್‌. ಇವರ ಅಪ್ಪ ರಿಕಿಫ್ಲೇರ್‌ ಕೂಡ ಪ್ರಸಿದ್ಧ ಕುಸ್ತಿಪಟು. 2000ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಗರಡಿಮನೆ ಪ್ರವೇಶಿಸಿದ ಚಾರ್ಲೆಟ್‌, 10 ಬಾರಿ ಡಬ್ಲ್ಯೂಡಬ್ಲ್ಯೂಇ ವಿಶ್ವ ಚಾಂಪಿಯನ್‌ಶಿಪ್‌ ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಕಾಮಿಕ್‌ ಕಾನ್‌ ಇಂಡಿಯಾ’ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು, ‘ಚೌ ಚೌ’ ಜೊತೆ ಮಾತನಾಡಿದರು.

ಕುಸ್ತಿ ಅಖಾಡಕ್ಕೆ ಇಳಿಯಲು ಕಾರಣವೇನು?

ಅಪ್ಪನೇ ನನ್ನ ಬೆಸ್ಟ್‌ಫ್ರೆಂಡ್. ನಾನು ರೆಸ್ಲಿಂಗ್‌ ಜಗತ್ತಿಗೆ ಬರಲು ಅಪ್ಪನ ಒತ್ತಾಯ ಏನೂ ಇರಲಿಲ್ಲ. ಆದರೆ ಅವರಿಂದಾಗಿ ನನಗೆ ಆ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆದಿತ್ತು. ನನ್ನ ಅಣ್ಣ ಕುಸ್ತಿಪಟುವಾಗುವಂತೆ ಒತ್ತಾಯಿಸಿದ. ಇಲ್ಲಿಗೆ ಬರಲು ಅವನೇ ಕಾರಣ

ಆರಂಭದಲ್ಲಿ ಸಾಕಷ್ಟು ಕಷ್ಟ, ಸವಾಲು ಎದುರಾಗಿರಬೇಕು ಅಲ್ಲವೇ?

ಓಹ್‌! ಅದೆಲ್ಲ ಹೇಳುವುದು ಕಷ್ಟ. ಆರಂಭದಲ್ಲಿ ಅನೇಕ ಟೀಕೆ ಎದುರಿಸಿದೆ. ಹೀಗೆ ಟೀಕೆ ಬಂದಾಗಲೆಲ್ಲಾ ನನ್ನಲ್ಲಿ ನಾನು ಗಟ್ಟಿಯಾಗಬೇಕಿತ್ತು. ಈ ಹಂತಕ್ಕೆ ಬರಲು ನಾನು ತುಂಬ ಕಷ್ಟಪಟ್ಟಿದ್ದೇನೆ. ಅಸುರಕ್ಷಿತ ಭಾವ ಕಾಡಿದಾಗಲೆಲ್ಲಾ ‘ನಾನು ಯಾರು’ ಎಂಬ ಪ್ರಶ್ನೆ ಕಾಡುತ್ತಿತ್ತು. ಈಗ ಹಿಂತಿರುಗಿ ನೋಡಿದರೆ ಅದೊಂದು ಚಂದದ ಪಯಣ. ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಕುಸ್ತಿಪಟು ಎಂದು ಗುರುತಿಸಿಕೊಂಡಿರುವುದಕ್ಕೆ ಖುಷಿಯಿದೆ

ರೆಸ್ಲಿಂಗ್‌ನಲ್ಲಿ ಮಹಿಳೆಯರಿಗೆ ಅವಕಾಶ ಹೇಗೆ ?

ಪುರುಷರಿಗೆ ಎಷ್ಟು ಅವಕಾಶಗಳಿವೆಯೋ ಅಷ್ಟೇ ಮಹಿಳೆಯರಿಗೂ ಇವೆ. ಇದು ಪುರುಷ ಪ್ರಧಾನ ಕ್ಷೇತ್ರ ಎಂದು ತಿಳಿದುಕೊಂಡಿದ್ದಾರೆ. ಆದರೆ ಹಾಗೇನಿಲ್ಲ. ಮಹಿಳೆಯರು ಈ ಕ್ರೀಡೆ ಬಗ್ಗೆ ಪ್ಯಾಶನ್‌ ಬೆಳೆಸಿಕೊಳ್ಳಬೇಕಿದೆ. ನೀವು ಡಬ್ಲ್ಯೂಡಬ್ಲ್ಯೂಇ ನೋಡುವಾಗ ಬೇರೆ, ಬೇರೆ ದೇಶದ ರೆಸ್ಲಿಂಗ್‌ ಪಟುಗಳನ್ನು ನೋಡುತ್ತೀರಿ. ಸಿಕ್ಕಿರುವ ಅವಕಾಶ ಬಳಸಿಕೊಂಡು ಎತ್ತರಕ್ಕೆ ಬೆಳೆಯಲು ಪ್ರಯತ್ನಿಸಬೇಕು. ಎಲ್ಲ ಕ್ಷೇತ್ರವೂ ಹಾಗೆಯೇ. ಇಲ್ಲಿ ಹೆಣ್ಣುಮಕ್ಕಳಿಗೆ ಬಾಡಿಬಿಲ್ಡಿಂಗ್‌ ಬಗ್ಗೆ, ಪುರುಷ ಸ್ಪರ್ಧಿಗಳಿಂದ ತಿರಸ್ಕಾರದ ಮಾತು ಬರಬಹುದು. ಆದರೆ, ಅದನ್ನೆಲ್ಲಾ ಮೀರಬೇಕು. ನಾನು 10 ಬಾರಿ ವಿಶ್ವ ರೆಸ್ಲಿಂಗ್‌ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿದ್ದೇನೆ. ಅದು ನನ್ನ ಕಠಿಣ ಪರಿಶ್ರಮದ ಫಲ.

ನಿಮ್ಮ ಡಯೆಟ್‌, ಆಹಾರಾಭ್ಯಾಸ ಹೇಗಿದೆ?

ವಾರಕ್ಕೆ ಒಂದು ದಿನ ಉಪವಾಸ ಮಾಡುತ್ತೇನೆ. ದಿನನಿತ್ಯ ವ್ಯಾಯಾಮ ಮಾಡುತ್ತೇನೆ. ಸರಿಯಾದ ಸಮಯಕ್ಕೆ ಆಹಾರ ಸೇವನೆ, ಹೆಚ್ಚು ನೀರು ಕುಡಿಯುತ್ತೇನೆ. ಕೈ, ಭುಜ, ಬೆನ್ನಿನ ವ್ಯಾಯಾಮಗಳನ್ನು ಜಾಸ್ತಿ ಮಾಡುತ್ತೇನೆ. ಬೈಸೆಪ್ಸ್‌ ಮಾಡುತ್ತೇನೆ. ದಿನಕ್ಕೆ 40 ನಿಮಿಷ ಕಾರ್ಡಿಯೊ, ಜಿಮ್‌ ತಪ್ಪಿಸಲ್ಲ

ಭಾರತದ ರೆಸ್ಲಿಂಗ್‌ ಭವಿಷ್ಯದ ಬಗ್ಗೆ ಹೇಳಿ...

ಕಳೆದ ಮೂರು ವರ್ಷಗಳಿಂದ ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಆಗ ಎಲ್ಲಾ ವಯಸ್ಸಿನ ಜನರು ನನ್ನನ್ನು ಗುರುತಿಸಿ ಮಾತನಾಡಿಸುತ್ತಾರೆ. ಭಾರತದಲ್ಲಿ ರೆಸ್ಲಿಂಗ್‌ಗೆ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ ಎಂದು ಅದರಲ್ಲೇ ಗೊತ್ತಾಗುತ್ತದೆ. ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ರೆಸ್ಲಿಂಗ್‌ಗೆ ಪ್ರಾಮುಖ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT