ಶುಕ್ರವಾರ, ಡಿಸೆಂಬರ್ 6, 2019
18 °C

ಏಷ್ಯಾ ಆಭರಣ ಉತ್ಸವ

Published:
Updated:
Prajavani

ದಕ್ಷಿಣ ಭಾರತದ ಅತ್ಯುತ್ತಮ ಆಭರಣ ವಿನ್ಯಾಸಕರ ಮತ್ತು ಬ್ರಾಂಡ್‍ಗಳ ಚಿನ್ನ ಮತ್ತು ವಜ್ರಾಭರಣಗಳನ್ನು ಗ್ರಾಹಕರು ಒಂದೇ ಸೂರಿನಡಿಯಲ್ಲಿ ಖರೀದಿಸುವ ಅವಕಾಶವನ್ನು ಏಷ್ಯಾ ಜುವೆಲ್ಸ್ ಫೇರ್ ಕಲ್ಪಿಸಿದೆ.

ವೈಟ್‌ಫೀಲ್ಡ್‌ನ ಹೋಟೆಲ್ ವಿವಂತಾ ಬೈ ತಾಜ್‌ನಲ್ಲಿ ಡಿಸೆಂಬರ್ 7 ಮತ್ತು 8 ರಂದು ಏಷ್ಯಾ ಜುವೆಲ್ಸ್ ಫೇರ್ ಆಯೋಜಿಸಲಾಗಿದೆ. ಇದು 17ನೇ ಆವೃತ್ತಿಯಾಗಿದ್ದು ಅತ್ಯಂತ ಆಕರ್ಷಕ ಮತ್ತು ವಿಶೇಷ ಆಭರಣ ದೊರೆಯುವ ತಾಣವಾಗಿದೆ.

ಬೆಂಗಳೂರು, ನವದೆಹಲಿ, ಮುಂಬೈ, ಜೈಪುರ, ಸೂರತ್ ಮತ್ತು ಹೈದರಾಬಾದ್‍ನ ಮುಂಚೂಣಿಯ ಎಲ್ಲ ಬ್ರಾಂಡೆಡ್‌  ಆಭರಣಗಳು ಒಂದೇ ಸೂರಿನಲ್ಲಿ ದೊರೆಯಲಿವೆ. ಫೈನ್ ಗೋಲ್ಡ್ ಆಭರಣ, ವಜ್ರಾಭರಣ, ಪ್ಲಾಟಿನಂ ಆಭರಣ, ಸಾಂಪ್ರದಾಯಿಕ ಆಭರಣ, ವಿವಾಹದ ಆಭರಣ, ಅಮೂಲ್ಯ ಹರಳಿನ ಆಭರಣ, ಕುಂದನ್, ಜಡೌ ಮತ್ತು ಪೊಲ್ಕಿ ಆಭರಣ ಪ್ರದರ್ಶನದಲ್ಲಿ ಇರಲಿವೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು