ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕಿಯರಿಗೆ ಪ್ರಶಸ್ತಿಯ ಹಿರಿಮೆ

Last Updated 2 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಡಿನ ಹತ್ತು ಹಲವು ಮಹಿಳಾ ಸಾಧಕಿಯರಿಗೆ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ ಆಫ್‌ ಜುವೆಲರ್ಸ್‌ ವತಿಯಿಂದ ಕರ್ನಾಟಕ ಮಹಿಳಾ ಸಾಧಕಿಯರ ಪ್ರಶಸ್ತಿ–2019 ( ಕೆಡಬ್ಲ್ಯೂಎಎ) ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿಶೇಷ ಸಾಮರ್ಥ್ಯದಹತ್ತು ಮಹಿಳಾ ಸಾಧಕಿಯರಿಗೆ ಸ್ಫೂರ್ತಿ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಯಶವಂತಪುರದ ವಿವಾಂತ್ ತಾಜ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸಾಲುಮರದ ತಿಮ್ಮಕ್ಕ ಅವರು ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ರೈಲ್ವೆ ಐಜಿಪಿ ರೂಪಾ ಡಿ. ಮೌದ್ಗಿಲ್‌, ನಟಿಯರಾ ವಿಜಯಲಕ್ಷ್ಮಿ ಸಿಂಗ್, ರಕ್ಷಿತಾ ಪ್ರೇಮ್‌ ಅಪರೂಪದ ಸಮಾರಂಭಕ್ಕೆ ಸಾಕ್ಷಿಯಾದರು.

ಮಹಿಳೆಯರ ಸಬಲೀಕರಣದೊಂದಿಗೆ ಮಹಿಳೆಯರಸಾಧನೆ ಗುರುತಿಸಿ, ಮುಂಚೂಣಿ ತರುವ ಮಹತ್ವಾಕಾಂಕ್ಷೆ ಈ ಪ್ರಶಸ್ತಿಯ ಉದ್ದೇಶ ಎಂದುಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ ಆಫ್‌ ಜುವೆಲರ್ಸ್‌ ವ್ಯವಸ್ಥಾಪಕ ನಿರ್ದೇಶಕ ಸಿ. ವಿನೋದ್‌ ಹಯಗ್ರೀವ್‌ ಹೇಳಿದರು.

ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದ ಮೂಲಕ ಸಮಾಜದಲ್ಲಿ ಬದಲಾವಣೆ ತರುವಲ್ಲಿಮಹಿಳೆಯರು ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸಿ, ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ. ಈ ಮಹಿಳಾ ಸಾಧಕಿಯರ ಬದುಕು, ಸಾಧನೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಪ್ರಶಸ್ತಿ ಸಂಸ್ಥಾಪಕಿ ಸ್ಫೂರ್ತಿ ವಿಶ್ವಾಸ್‌ ಹಾರೈಸಿದರು.

ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿನಿಂತು ಮಹಿಳೆಯರು ಸಾಧನೆ ಹಾದಿಯಲ್ಲಿ ಸಾಗುತ್ತಾರೆ. ಅವರ ಸಾಧನೆಯ ಹಾದಿ ಹೂವಿನ ಹಾಸಿಗೆಯಾಗಿರುವುದಿಲ್ಲ. ಮಹಿಳೆಯರ ಅಪರೂಪದ ಸಾಧನೆಗಳನ್ನು ಗುರುತಿಸಿ, ಅಭಿನಂದಿಸುವ ಕೆಲಸ ನಡೆಯುತ್ತಿದೆ ಎನ್ನುವುದೇ ಸಮಾಧಾನದ ಸಂಗತಿ ಎಂದು ಅಂತರರಾಷ್ಟ್ರೀಯ ಪರ್ವತಾರೋಹಿ ಮತ್ತು ಪ್ರಶಸ್ತಿಯ ರಾಯಭಾರಿ ನಂದಿತಾ ನಾಗಣ್ಣಗೌಡ ಅನುಭವ ಹಂಚಿಕೊಂಡರು.

ರೆಡ್‌ ಕಾರ್ಪೆಟ್‌ ಸಂಜೆಯಲ್ಲಿ ಚೆಟ್ಟಿ ಮತ್ತು ಅಕ್ವಾಬ್‌ ವಿಶೇಷ ಫ್ಯಾಶನ್‌ ಷೋ ‘ಎಸ್‌ಎಫ್‌ಕೆ’ಯಲ್ಲಿ ಸೆಲೆಬ್ರಿಟಿಗಳಾದ ತಾನ್ಯಾ ಹೋಪ್‌, ನಟಿ ಕೃಷಿ ತಾಂಪಂಡ ಹೆಜ್ಜೆ ಹಾಕಿದರು.

ದಿವ್ಯಾ ಹೆಗ್ಡೆ,ನಿಖಿತಾ ಸಿ., ಅರುಣಾ ಸಂಪಿಗೆ, ಜಿ.ವಿ. ರೇಣುಕಾ, ಡಾ. ಶಾಂತಿ ತುಮ್ಮಲಾ,ಭಾರತಿ ಯಾದವ್,ಡಾ.ಛಾಯಾ ಆಲ್ಫ್ರೆಡ್,ಅರ್ಚನಾ ತಿಮ್ಮರಾಜು,ಡಾ.ರಜನಿ ಎ.ಪೈ,ಎಂ.ಸುಮನಾ,ಪ್ರೀತಾ ಜಯರಾಮನ್,ಶಾಲಿನಿ,ಶ್ರುತಿ ಭತಿಜಾ,ಮಂಜುಳಾ ರಾಜ್,ಲತಾ ಪುಟ್ಟಣ್ಣ,ರೋಮಿಕಾ ನ್ರೆವೊಲಾ,
ಐಶ್ವರ್ಯಾ ಪಿಸೇ,ರೇಷ್ಮಾ ಜೆರೆಡ್ಡಿ,ಕವಿತಾ ಮಿಶ್ರಾ,ಡಾ ಸುಲೋಚನಾ

ಸ್ಫೂರ್ತಿ ಪ್ರಶಸ್ತಿ ವಿಜೇತ ವಿಶೇಷ ಸಾಮರ್ಥ್ಯದ ಮಹಿಳಾ ಸಾಧಕಿಯರು

ಧನ್ಯಾ ರವಿ,ಮಹಾಲಕ್ಷ್ಮಿ ಮಹಾದೇವಪ್ಪ,ಶ್ರದ್ಧಾ ಮುರಳೀಧರನ್,ಕಾಂಚನ್ ಬಾಬಾಸೊ ಖೋತ್‌,ರಕ್ಷಿತಾ ಆರ್.,ಗೌಸಿಯಾ ತಾಜ್ ಎಂ.ರೇಖಾ ಕೆ. , ಕೆ.ವಿ.ಸಿರಿಶಾ,ಕರಿಷ್ಮಾ ಕಣ್ಣನ್,ರಾಧಾ ವಿ.

ಕೆಲಸ ಸಂಭ್ರಮಿಸಬೇಕು

ಮಹಿಳೆಯರು ಪ್ರತಿದಿನ ಕೆಲಸವನ್ನು ಸಂಭ್ರಮಿಸಬೇಕು. ಪ್ರಶಸ್ತಿ, ಗೌರವ ತಾವಾಗಿಯೇ ಹುಡುಕಿಕೊಂಡು ಬರುತ್ತವೆ ಎನ್ನುತ್ತಾರೆಶ್ರುತಿ ಭತೇಜಾ

ಉತ್ತಮ ಉದ್ದೇಶದಿಂದ ಕೆಲಸ ಮಾಡಿ

ಉತ್ತಮ ಉದ್ದೇಶದಿಂದ ಮಾಡಿದ ಕೆಲಸ ಯಾವುದೇ ಯಾವುದೇ ಪ್ರಶಸ್ತಿ, ಸನ್ಮಾನ ಬಯಸುವುದಿಲ್ಲ. ಆದರೆ, ನಾವು ಮಾಡುವ ಕೆಲಸವನ್ನು ಮತ್ತಷ್ಟು ಜವಾಬ್ದಾರಿಯಿಂದ ನಿರ್ವಹಿಸುವ ಉತ್ತರದಾಯಿತ್ವ ನೀಡುತ್ತವೆ ಎನ್ನುತ್ತಾರೆಡಾ. ರಜನಿ ಪೈ.

ಪ್ರಶಸ್ತಿ ಮೌಲ್ಯ ಹೆಚ್ಚು

ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪಾರದರ್ಶಕದಿಂದ ಕೂಡಿರುವುದರಿಂದ ಪ್ರಶಸ್ತಿಯ ಮೌಲ್ಯ ಸಹಜವಾಗಿ ಹೆಚ್ಚಿದೆ ಎನ್ನುತ್ತಾರೆನಿಖಿತಾ ಸಿ.

ಪ್ರಶಸ್ತಿ ಸ್ಫೂರ್ತಿಯಾಗಬೇಕು

ಪ್ರಶಸ್ತಿ ವಿಜೇತರ ಸಾಧನೆ ಇತರರಿಗೆ ಸ್ಫೂರ್ತಿಯಾಗಬೇಕು. ಉತ್ತಮ ಸಮಾಜ ರೂಪಿಸಲು ದಾರಿದೀಪವಾಗಲಿ ಎನ್ನುತ್ತಾರೆಕೃಷ್ಣಯ್ಯ ಚೆಟ್ಟಿ ಗ್ರೂಪ್‌ ಆಫ್‌ ಜುವೆಲರ್ಸ್‌ ನಿರ್ದೇಶಕಿ ತ್ರಿವೇಣಿ ವಿನೋದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT