ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಬಿಂಜ್‌ ಕ್ಲಬ್‌ ಥಿಯೇಟರ್‌

Last Updated 18 ಫೆಬ್ರುವರಿ 2020, 2:10 IST
ಅಕ್ಷರ ಗಾತ್ರ

‘ಬಿಂಜ್ ಕ್ಲಬ್’ ಒಂದು ಖಾಸಗಿ ಥಿಯೇಟರ್ ಪರಿಕಲ್ಪನೆ! ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಈ ಕ್ಲಬ್‌ನಲ್ಲಿ ಇಷ್ಟದ ಸಿನಿಮಾವನ್ನು ಇಷ್ಟಬಂದ ಸಮಯದಲ್ಲಿ ನೋಡಬಹುದು. ಇದಕ್ಕೆ ತಾಸು ಲೆಕ್ಕದಲ್ಲಿ ಬಾಡಿಗೆ ನೀಡಬೇಕಷ್ಟೇ.

ಸಾಹಿತ್ಯ, ಶ್ರಾವಣ್ ದಂಪತಿಗೆ ಮಣಿರತ್ನಂ ನಿರ್ದೇಶನದ ಹಲವಾರು ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡಲಾಗಲಿಲ್ಲ ಎಂಬ ಕೊರಗು ಕಾಡುತಿತ್ತು.ಅದಕ್ಕಾಗಿ ಮನೆಯಲ್ಲೇ 135 ಇಂಚಿನ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಫ್ರೆಬುವರಿ 2019ರಲ್ಲಿ ತಮ್ಮ ಹೋಂ ಥಿಯೇಟರ್‌ಗೆ ‘ಬಿಂಜ್ ಕ್ಲಬ್’ ಎಂದು ಹೆಸರಿಟ್ಟು ಸಾರ್ವಜನಿಕರಿಗೂ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

‘ಚಿತ್ರಮಂದಿರಕ್ಕೆ ಕೆಲವೊಮ್ಮೆ ಹೋಗಲು ಸಾಧ್ಯವಾಗುವುದಿಲ್ಲ. ಮೊಬೈಲ್, ಲ್ಯಾಪ್‌ಟಾಪ್‌ಗಳಲ್ಲಿ ಸಿನಿಮಾ ನೋಡಿದರೆ ವಿಶ್ಯುವೆಲ್ ಎಫೆಕ್ಟ್‌, 3ಡಿ ಸಿನಿಮಾ ನೋಡಿದ ಅನುಭವ ದಕ್ಕುವುದಿಲ್ಲ. ಆ ಅನುಭವವನ್ನು ಯಾಕೆ ಕಳೆದುಕೊಳ್ಳಬೇಕು? ಅದಕ್ಕಾಗಿ ಈ ಸ್ಕ್ರೀನಿಂಗ್‌ ಮಾಡಿದೆವು. ಇದಕ್ಕೊಂದು ವೆಬ್‌ಸೈಟ್‌ ಮಾಡಿ, ಸಾರ್ವಜನಿಕರಿಗೂ ಸ್ಕ್ರೀನಿಂಗ್‌ ಬುಕ್‌ ಮಾಡುವ ಅವಕಾಶ ಕಲ್ಪಿಸಿದ್ದೇವೆ’ ಎನ್ನುತ್ತಾರೆ ಸಾಹಿತ್ಯ.

ಪಾರ್ಟಿಗೂ ಜಾಗ

ಪಾರ್ಟಿ, ಹುಟ್ಟಿದಹಬ್ಬ, ಪ್ರೇಮ ನಿವೇದನೆಯಂಥ ಖಾಸಗಿ ಸಂಭ್ರಮಾಚರಣೆಗೆ ‘ಬಿಂಜ್ ಕ್ಲಬ್’ ಸೂಕ್ತ ಸ್ಥಳ. ಥಿಯೇಟರ್ ಪಕ್ಕದಲ್ಲೇ ಕೊಠಡಿ ಇದ್ದು, ಅಲ್ಲಿಯೂ ಪಾರ್ಟಿ ಮಾಡಬಹುದು. ಒಬ್ಬರಿಗೆ, ಒಂದು ಗಂಟೆಗೆ ₹100 ಬಾಡಿಗೆ ನೀಡಬೇಕು. ಮಕ್ಕಳಿಗಾಗಿ ವಿಶೇಷ ಸ್ಥಳಾವಕಾಶವೂ ಇದೆ.

‘ವಾರದ ದಿನಗಳಲ್ಲಿ ಒಂದು ಅಥವಾ ಎರಡು ಬುಕ್ಕಿಂಗ್‌ ಇದ್ದೇ ಇರುತ್ತದೆ. ವಾರಾಂತ್ಯದ ಹಾಗೂ ರಜೆ ದಿನಗಳಿಗೆ ಬೇಡಿಕೆ ಹೆಚ್ಚು’ ಎನ್ನುತ್ತಾರೆ ಸಾಹಿತ್ಯ.

ನವೀನ ವಿನ್ಯಾಸ

‘ಬಿಂಜ್ ಕ್ಲಬ್’ ಖಾಸಗಿ ಚಿತ್ರಮಂದಿರದಲ್ಲಿ 15 ಜನರು ಏಕಕಾಲಕ್ಕೆ ಕೂರಬಹುದಾದ ವ್ಯವಸ್ಥೆ ಮಾಡಿದ್ದಾರೆ. ಮಾಮೂಲಿ ಚಿತ್ರಮಂದಿರಗಳಂತೆ ಸಾಲುಸಾಲಾಗಿ ಕುರ್ಚಿಗಳನ್ನು ಹಾಕದೆ. ಪಿಗ್ಗಿ ಬ್ಯಾಗ್, ಸೋಫಾದಿಂದ ಮನೆಯಂತೆ ಅಲಂಕರಿಸಿದ್ದಾರೆ. ಇದೇ ಸ್ಥಳಕ್ಕೆ ಊಟ ತರಿಸಿಕೊಳ್ಳಬಹುದು.

ದೃಶ್ಯ ಹಾಗೂ ಶ್ರವಣ ಅನುಭವದಲ್ಲೂ ‘ಬಿಂಜ್ ಕ್ಲಬ್’ನಲ್ಲಿ ಕೊರತೆ ಇಲ್ಲ. ಚಿತ್ರಮಂದಿರಕ್ಕಿಂತ ಹೊಸ ಬಗೆಯ ತಂತ್ರಜ್ಞಾನ ಅಳವಡಿಸಿದ್ದಾರೆ. ಈ ಸ್ಕ್ರೀನ್‌ನಲ್ಲಿ 3ಡಿ ಸಿನಿಮಾ ನೋಡಬಹುದು ಹಾಗೂ 7.2.1 ಡಾಲ್ಬಿ ಅಟ್ಮಸ್ ಸರೌಂಡ್ ಸೌಂಡ್‌ ವ್ಯವಸ್ಥೆ ಮಾಡಿದ್ದಾರೆ.

ವೈಫೈ ಸಂಪರ್ಕ

ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಂ, ಜಿಯೊ ಟಿವಿ, ವೂಟ್.. ಇಂಥ ಯಾವುದೇ ಚಾನೆಲ್ ಸ್ಟ್ರೀಮಿಂಗ್‌ ಮಾಡಿಕೊಳ್ಳಬಹುದು. ಇದಕ್ಕೆ ವೈಫೈ ಸಂಪರ್ಕವನ್ನು ‘ಬಿಂಜ್ ಕ್ಲಬ್’ ನೀಡುತ್ತದೆ. ಇಂಥದ್ದೇ ನೋಡಬೇಕು ಎನ್ನುವ ಯಾವುದೇ ಅಡಚಣೆ ಇಲ್ಲ. ಮೊಬೈಲ್‌ನೊಂದಿಗೆ ಪೇರ್‌ ಮಾಡಿಕೊಡುತ್ತಾರೆ. ಇಷ್ಟ ಬಂದ ಸಿನಿಮಾ, ಕ್ರಿಕೆಟ್ ಯಾವುದೇ ವಿಡಿಯೊ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT