ಬುಧವಾರ, ಅಕ್ಟೋಬರ್ 23, 2019
21 °C

ಬೊಹ್ರಾ ಕೆಫೆ: ಸಮುದಾಯ ಭೋಜನ

Published:
Updated:

ನೆಲದ ಮೇಲೆ ನಾಲ್ಕಾರು ಮಂದಿ ಒಟ್ಟಿಗೆ ಕೂತು ಒಂದೇ ತಟ್ಟೆಯಲ್ಲಿ ಊಟ ಮಾಡುವಂತಹ ವಿನೂತನ ಅನುಭವ ಸಿಗಬೇಕಾದರೆ ‘ಬೊಹ್ರಾ ಬೊಹ್ರಾ ಕೆಫೆಗೆ’ ಭೇಟಿ ನೀಡಬೇಕು.

ಸಮುದಾಯ ಭೋಜನ ಮಾಡಲು ಬಯಸುವವರಿಗಾಗಿಯೇ ಕೋರಮಂಗಲದಲ್ಲಿರುವ ಮನೆಯೊಂದರಲ್ಲಿ ಈ ಅವಕಾಶ ನೀಡಲಾಗಿದೆ. ಇಲ್ಲಿ ‘ಬೊಹ್ರಿ ಥಾಲ್‌’ ಸವಿಯಲು ಲಭ್ಯ. ಮನೆಯವರು ಹಾಗೂ ಸ್ನೇಹಿತರ ಜೊತೆ ಇಲ್ಲಿಗೆ ಹೋಗಬಹುದು ಅಥವಾ ಅಲ್ಲಿಯೇ ಹೊಸ ಸ್ನೇಹಿತರೊಂದಿಗೆ ಊಟ ಮಾಡಬಹುದು.

ದೊಡ್ಡ ತಟ್ಟೆಯಲ್ಲಿ ಒಟ್ಟಿಗೆ ಊಟ ಮಾಡುವ ಅನುಭವ ಸಿಗಲಿದೆ. ಮುಖ್ಯವಾಗಿ ಬೊಹ್ರಿ ಥಾಲ್‌ನಲ್ಲಿ ಏಳು ರೀತಿಯ ಖಾದ್ಯಗಳು ಲಭ್ಯ. ಮನೆಯಲ್ಲೇ ತಯಾರಿಸಿದ ವೆಜ್ ಹಾಗೂ ನಾನ್‌ವೆಜ್‌ ಎರಡೂ ರೀತಿಯ ಖಾದ್ಯಗಳ ಜೊತೆ ಹೊಸ ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳಲು ಐಸ್‌ ಬ್ರೇಕಿಂಗ್‌ ಆ್ಯಕ್ಟಿವಿಟಿ ಕೂಡ ಇದೆ.

ಖರಾಸ್‌, ಸ್ಮೋಕ್ಡ್‌ ಚಿಕನ್‌ ಖೀಮಾ ಸಮೋಸಾ, ಬೊಹ್ರಿ ಫ್ರೆಂಡ್ ಚಿಕನ್‌, ಮಟನ್‌ ರಾನ್‌ ಇನ್‌ ರೆಡ್‌ ಮಸಾಲಾ ಇಲ್ಲಿನ ವಿಶೇಷ.

ಸ್ಥಳ–ಕೇಂದ್ರೀಯ ಸದನ, ಸಂತೋಷಪುರಂ, 2ನೇ ಬ್ಲಾಕ್‌, ಕೋರಮಂಗಲ.

ಮಾಹಿತಿಗೆ: 9742661909

ಊಟದ ದಿನ: ಸೆಪ್ಟೆಂಬರ್‌ 29, ಮಧ್ಯಾಹ್ನ 12ರಿಂದ 2.30

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)