ಸೋಮವಾರ, ಜೂನ್ 27, 2022
25 °C

ಆಡೋಣಾ ನೀನು -ನಾನು

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

Prajavani

ಮಧು - ಪ್ರೇಮಾ ದಂಪತಿ ಮಗ ಶೌರ್ಯನಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಶಾಲೆಗೆ ರಜೆ. ಹೊರಗಡೆ ಹೋಗುವ ಹಾಗಿಲ್ಲ. ಆಟವಾಡುವ ಹಾಗಿಲ್ಲ.

ಇತ್ತ ಅಪ್ಪ - ಅಮ್ಮ ಕೆಲಸಕ್ಕೆ ಹೋಗ್ತಾರೆ. ಈ ಪುಟ್ಟನನ್ನು ನೋಡಿಕೊಳ್ಳಲೆಂದೇ, ಅಜ್ಜ- ಅಜ್ಜಿ ಊರಿಂದ ಬಂದಿದ್ದಾರೆ. ಬಿಡುವಿನ ವೇಳೆಯಲ್ಲೇ ಮೊಮ್ಮಗನನ್ನು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಮೊನ್ನೆ ಬೆಳಿಗ್ಗೆ ಅಜ್ಜ ಶೌರ್ಯನಿಗೆ ತಿಂಡಿ ತಿನ್ನಿಸುತ್ತಾ ‘ಧರಣಿ ಮಂಡಲ ಮಧ್ಯದೊಳಗೆ’ ಹಾಡು ಹೇಳಿಕೊಡುತ್ತಿದ್ದರು. ಅಜ್ಜ ರಾಗವಾಗಿ ಹೇಳಿಕೊಡುತ್ತಿದ್ದ ಆ ಹಾಡು, ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಇಂಗ್ಲಿಷ್ ರೈಮ್ಸ್‌ಗಿಂತ ಖುಷಿ ಕೊಡ್ತಿತ್ತು ಅನ್ನಿಸುತ್ತದೆ. ಬಹಳ ಸೊಗಸಾಗಿ ಹಾಡುತ್ತಿದ್ದ.

‘ಒಂದು ಎರಡು ಬಾಳೆಲೆ ಹರಡು..’ ‘ತೋಟಕೆ ಹೋಗು ತಿಮ್ಮ...’ ಹಾಡುಗಳನ್ನು ಆಕ್ಷನ್ ಮಾಡ್ತಾ ಹೇಳಿಕೊಡುತ್ತಿದ್ದ ಅಜ್ಜಿಯ ವರಸೆಗೆ ಅವನೂ ಹೆಜ್ಜೆ ಹಾಕುತ್ತಿದ್ದ.

ಅಜ್ಜಿ ಹೇಳುವ ಕಥೆಗಳು.. ಫುಲ್ ಖುಷಿ ಕೊಡ್ತಿದ್ದವು. ಅಪ್ಪ - ಅಮ್ಮ ಕೆಲಸಕ್ಕೆ ಹೋಗಿದ್ದರೂ, ಮೊಮ್ಮಗನನ್ನು ಅಜ್ಜ - ಅಜ್ಜಿ ಹೀಗೆ ಹಾಡು, ಕಥೆಗಳನ್ನು ಹೇಳಿಕೊಂಡು ಖುಷಿಯಾಗಿಡುತ್ತಿದ್ದರು. 

ಶಾಲೆಯಲ್ಲಿ ಕಲಿಯದಿದ್ದನ್ನು ಶೌರ್ಯ ಅಜ್ಜಿ–ತಾತನ ಲಾಲನೆಪಾಲನೆಯಲ್ಲಿ ಕಲಿಯುತ್ತಿದ್ದಾನೆ.

ಹೊಸ ಆಟ, ಹಾಡು ಕಥೆ ಕೇಳುತ್ತ, ಆಡುತ್ತಾ- ಹಾಡುತ್ತಾ ಊಟ ಮಾಡುತ್ತಾನೆ. ಹೇಳಿಕೊಟ್ಟ ಹಾಡುಗಳೆಲ್ಲ ಅವನಿಗೀಗ ಬಾಯಿಪಾಠವಾಗಿಬಿಟ್ಟಿವೆ. ಅಜ್ಜಿ ಹೇಳುವ ಕಥೆ ಕೇಳಿ ಒಂದು ತುತ್ತು ಹೆಚ್ಚೇ ಊಟ ಒಳಹೋಗುತ್ತಿದೆ.

ಬಿಸಿಲೇರುತ್ತಿದ್ದಂತೆ, ಕಥೆ ಕೇಳುತ್ತಾ ಮಲಗುವ ಪುಟ್ಟ, ಮಧ್ಯಾಹ್ನದ ವೇಳೆ ಪ್ರಾಣಿ ಪಕ್ಷಿಗಳ ಚಿತ್ರ ಬರೆದು ಅದಕ್ಕೆ ಬಣ್ಣ ತುಂಬುತ್ತಾನೆ. ಗೋಡೆಯನ್ನೇ ಕ್ಯಾನ್ವಾಸ್ ಮಾಡಿಕ್ಕೊಂಡು ಕ್ರಯಾನ್ಸ್‌ನಲ್ಲಿ ಗೀಚುತ್ತಾನೆ.  ಅಜ್ಜ, ಹಳೆಯ ದಿನಪತ್ರಿಕೆಗಳನ್ನೆಲ್ಲ ಹರಡಿಕೊಂಡು ಅದರಲ್ಲೇ ಕ್ರಾಫ್ಟ್ ಮಾಡಿ ತೋರಿಸುತ್ತಾರೆ. ಅವನೂ ಮನಸ್ಸಿಗೆ ಬಂದಂತೆ ಪೇಪರ್ ಹರಿಯುತ್ತಾ, ಜೋಡಿಸುತ್ತಾ ಮನೆ ತುಂಬಾ ಪೇಪರ್ ಹರಡುತ್ತಾನೆ. 

ಸಂಜೆಯಾಗುತ್ತಲೇ ತಾತನ ಹೆಗಲು ಹಿಡಿದು ಸೈಕಲ್‌ ಓಡಿಸುವುದಕ್ಕೆ ಹೊರಡುತ್ತಾನೆ. ಅಜ್ಜ - ಅಜ್ಜಿಯೊಂದಿಗೆ ಜೂಟ್ ಆಟ ಆಡುತ್ತಾನೆ. ಬಿಲ್ಡಿಂಗ್ ಬ್ಲಾಕ್ ಗಳೊಂದಿಗೆ ಮನೆ ಕಟ್ಟುತ್ತಾನೆ.

ಕೊರೊನಾಗಾಗಿ ಕೊಟ್ಟ ರಜೆಯನ್ನು ಶೌರ್ಯ ಅರ್ಥಪೂರ್ಣವಾಗಿ ಕಳೆಯುತ್ತಿದ್ದಾನೆ. 

‘ಆಡೂ ಆಟ ಆಡು‘
ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಶಾಲೆಗೆ ರಜೆ. ಆದರೂ ಹೊರಗೆ ತಿರುಗಾಡುವ ಹಾಗಿಲ್ಲ. ‘ಗೃಹಬಂಧನ‘. ಹೀಗಾಗಿ ಮನೆಯಲ್ಲಿರುವರನ್ನೇ ‘ನೀವೂ ಬನ್ನಿ ಆಟ ಆಡೋಣ’ ಎಂದು ಹಠ ಹಿಡಿಯುತ್ತಾರೆ. ಹಾಗಾದರೆ, ಈ ರಜೆಯಲ್ಲಿ ನೀವು ಮಕ್ಕಳನ್ನು ಹೇಗೆ ಆಟವಾಡಿಸುತ್ತಿದ್ದೀರಿ. ಯಾವ ಯಾವ ತರಹದ ಚಟುವಟಿಕೆಗಳನ್ನು ಮಾಡುತ್ತಿದ್ದೀರಿ. ಈ ಕುರಿತು ಫೋಟೊ ಸಹಿತ ಪುಟ್ಟ ಮಾಹಿತಿ ನಮಗೆ ಬರೆದುಕಳಿಸಿ. ಆಯ್ದ ಉತ್ತಮ ಬರಹಗಳನ್ನು  ‘ಆಡೂ ಆಟ ಆಡು‘ ಅಂಕಣದಲ್ಲಿ ಪ್ರಕಟಿಸುತ್ತೇವೆ. ಮಾಹಿತಿ ಕಳಿಸಬೇಕಾದ ವಾಟ್ಸ್ ಆ್ಯಪ್ - 9513322931
ಇ–ಮೇಲ್‌: metropv@
prajavani.co.in

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.