ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ ಆರ್ ಬೆಂಗಳೂರಿನಲ್ಲಿ ಕ್ರಿಸ್‌ಮಸ್

Last Updated 13 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ವಾರಾಂತ್ಯದ ಆಕರ್ಷಣೆಯಾಗಿ ವಿಆರ್ ಬೆಂಗಳೂರು ಮಾಲ್‌ನಲ್ಲಿ ಕ್ರಿಸ್‌ಮಸ್ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಲಾಗುತ್ತಿದೆ.

ಡಿ.16ರಿಂದ 21ರವರೆಗೆಗಾಯಕರ ತಂಡದ ಸ್ಪರ್ಧೆ ನಡೆಯಲಿದೆ. ಇದರಲ್ಲಿ 10 ಬೆಂಗಳೂರು ಕಾಯಿರ್ ಬ್ಯಾಂಡ್‌ಗಳು 7 ದಿನಗಳ ಕಾಲ ಪರಸ್ಪರ ಸ್ಪರ್ಧಿಸಲಿವೆ. ವಿಜೇತ ತಂಡ ತಮ್ಮ ಆದ್ಯತೆಯ ದತ್ತಿ ಸಂಸ್ಥೆಗೆ ₹1ಲಕ್ಷ ಬಹುಮಾನ ಪಡೆಯುತ್ತದೆ. ಇದಲ್ಲದೇ ಅವರು ಇತರ ಆಕರ್ಷಕ ನಗದು ಬಹುಮಾನಗಳನ್ನು ಗೆಲ್ಲಲಿದ್ದಾರೆ.

ಡಿ21ರಂದು ಸ್ಕೈ ಡೆಸ್ಕ್‌ನಲ್ಲಿ ‘ಸ್ಟೆಪಿಂಗ್‌ ಔಟ್‌’ ಮೂವಿ ನೈಟ್‌. ಇದು ಓಪನ್ ಏರ್ ಮೂವಿ ಸ್ಕ್ರೀನಿಂಗ್.

ಡಿ 22ರಂದು ‘ಗ್ರ‍್ಯಾಂಟ್ ಎ ವಿಶ್’ನಲ್ಲಿ ಎಕ್ಸ್‌ಪ್ಯಾಟ್ ಲೈಫ್ ಇಂಡಿಯಾ ಸಹಯೋಗದೊಂದಿಗೆ ವಿಆರ್‌ಬಿ ಸ್ಥಳೀಯ ಅನಾಥಾಶ್ರಮಗಳು ಮತ್ತು ಎನ್‌ಜಿಓಗಳು 300 ಮಕ್ಕಳಿಗೆ ಒಂದು ದಿನದ ಆತಿಥ್ಯ ನೀಡಲಿವೆ.

ಡಿ22ರಿಂದ 29ರವರೆಗೆ ಕ್ರಿಸ್‌ಮಸ್‌ ಹಬ್ಬ– ಎಲ್ಲಾ ವಯಸ್ಸಿನವರಿಗೆ ಯೋಜಿಸಲಾದ 8 ದಿನಗಳ ಕಾಲ ಹಲವು ವಿನೋದಗಳಿಂದ ತುಂಬಿದ ಕ್ರಿಸ್‌ಮಸ್ ಚಟುವಟಿಕೆ ಇದಾಗಿದೆ.

ಕುಕಿ ತಯಾರಿಕೆಯಿಂದ ಹಿಡಿದು ಕ್ರಿಸ್‌ಮಸ್ ಟ್ರೀ ಅಲಂಕಾರ ಕಾರ್ಯಾಗಾರಗಳು, ಕ್ರಿಸ್ಮಸ್ ಚಲನಚಿತ್ರ ಪ್ರದರ್ಶನ ಮತ್ತು ನಿಧಿ ಹುಡುಕಾಟ.. ಹೀಗೆ ವಿವಿಧ ಮೋಜು ಮಸ್ತಿಯಿಂದ ಕೂಡಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇವುಗಳ ಜೊತೆಗೆಕ್ರಿಸ್‌ಮಸ್ ಅಲಂಕಾರ, ಕ್ರಿಸ್‌ಮಸ್‌ ಟ್ರೀ, ಜಾರುಬಂಡಿ ಮತ್ತು ಹಿಮಸಾರಂಗ, ಸಂತ ಸ್ಥಾಪನೆ, ಪಿಯಾನೊ ಪ್ಲೆಯರ್‌ನ ನೇರಪ್ರಸಾರ, ಕರೋಲ್‌ ಗಾಯಕರ ಗಾನ ವೈಭವ ಮತ್ತಿತರ ಕಾರ್ಯಕ್ರಮಗಳಿವೆ.ಸ್ಥಳ:ವಿಆರ್ ಬೆಂಗಳೂರು ಮಾಲ್‌, ವೈಟ್‌ಫೀಲ್ಡ್‌ ಮುಖ್ಯರಸ್ತೆ, ಮಹದೇವಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT