ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಸ್ ಶಾಲೆಯ ವಿದ್ಯಾರ್ಥಿಗಳ ಎವೆರೆಸ್ಟ್ ಬೇಸ್ ಕ್ಯಾಂಪ್ ಆರೋಹಣ

Last Updated 18 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಇಂಡಸ್ ಅಂತರರಾಷ್ಟ್ರೀಯ ಶಾಲೆ ಎವೆರೆಸ್ಟ್ ಶಿಖರದ ಬೇಸ್ ಕ್ಯಾಂಪ್ (ಇಬಿಸಿ) ನಲ್ಲಿ ತನ್ನ ಬಾವುಟವನ್ನು ಹಾರಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಒಂದು ವಾರದ ಸಾಹಸ ಯಾತ್ರೆ ಕೈಗೊಂಡ ಇಂಡಸ್ ಅಂತರರಾಷ್ಟ್ರೀಯ ಶಾಲೆಯ ಮೂವರು ವಿದ್ಯಾರ್ಥಿನಿಯರು ಮತ್ತು ಐವರು ವಿದ್ಯಾರ್ಥಿಗಳ ತಂಡವು ಎವೆರೆಸ್ಟ್ ಶಿಖರದ ಬೇಸ್ ಕ್ಯಾಂಪ್‌ನಲ್ಲಿ ಕಡೆಗೂ ಕಾಲಿಟ್ಟರು.

‘ನಾವು ಜಯಿಸಿದ್ದು ಪರ್ವತವನ್ನಲ್ಲ. ನಮ್ಮನ್ನೇ’ ಎಂದು ವಿಶ್ವದ ಅತಿ ಎತ್ತರದ ಪರ್ವತದ ತುತ್ತತುದಿಯನ್ನು ತಲುಪಿದ ಮೊದಲ ವ್ಯಕ್ತಿ ಸರ್ ಏಡ್ಮಂಡ್‌ ಹಿಲರಿ ಹೇಳಿದ್ದರು. ಹಿಲರಿ ಅವರ ಮಾತು ಇಂಡಸ್ ಅಂತರರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳನ್ನು ಎವೆರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಕಾಲಿಡಲು ಪ್ರೇರೇಪಿಸಿತು.

11ನೇ ತರಗತಿಯ 8 ವಿದ್ಯಾರ್ಥಿಗಳ ಮತ್ತು ನಾಯಕತ್ವದ ತರಬೇತುದಾರರ ಆರೋಹಣ ತಂಡವು 110 ಕಿಮೀ ಗಳನ್ನು ಏಳು ದಿನಗಳವರೆಗೆ ನಡೆದು ಆರೋಹಣ ಸಾಹಸವನ್ನು ಮುಗಿಸಿತು.

ವಿದ್ಯಾರ್ಥಿಗಳು ಉನ್ನತ ಮಟ್ಟದ ಸಹನೆ ಮತ್ತು ಉದ್ದೇಶವನ್ನು ಮೆರೆದರು. ವಿಶ್ವದ ಅತಿ ಎತ್ತರದ ಶಿಖರ ತಲುಪಲು ಒಂದು ವಾರ ಬೃಹದಾಕಾರದ ಹಿಮಾಲಯಗಳ ಹಳ್ಳಿಗಳು, ನದಿಗಳು, ಪರ್ವತಗಳ ಸಾಲುಗಳು, ಕಾಡುಮೇಡು, ಮಂಜು, ಕಲ್ಲು, ಮೋಡಗಳನ್ನು ದಾಟಿದರು. ಅಂತಿಮವಾಗಿ ತೆಂಗ್ಬೊಶೆ, ದಿಂಗ್ಬೋಶೆ, ಫೆರಿಶೆ, ಲೊಬುಶೆ ಮತ್ತು ಗೋರಕ್ಶೆಪ್ ಗಳಂತಹ ಹಿಮಾಲಯದ ಗ್ರಾಮಗಳನ್ನು ದಾಟಿದ ವಿದ್ಯಾರ್ಥಿಗಳ ತಂಡವು 5364ಮೀ ಎತ್ತರದ ಎವೆರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ನಲ್ಲಿ ಇಂಡಸ್ ಶಾಲೆಯ ಬಾವುಟವನ್ನು ಹಾರಿಸಿದರು.

‘ನನಗೆ ಒಂದು ಕ್ಷಣವೂ ಹೆದರಿಕೆಯಾಯಿತು ಎಂದು ಅನ್ನಿಸಲಿಲ್ಲ. ನಾವು ನಮ್ಮ ಗುರಿಯನ್ನು ತಲುಪುತ್ತೇವೆ ಎಂದು ನನಗೆ ತಿಳಿದಿತ್ತು. ನಾವು ಬಹಳ ಶ್ರಮದಿಂದ ಸಿದ್ಧತೆ ನಡೆಸಿದ್ದೆವು’ ಎನ್ನುತ್ತಾರೆಆರೋಹಣ ತಂಡದ ಸದಸ್ಯೆ 11ನೇ ತರಗತಿಯ ವಿದ್ಯಾರ್ಥಿನಿ ಜುಜಾನ್ನಾ ಲಾಜ್ಲೊ.

‘ಮಿತೇಶ್ ಸಿಂಘ್ ಅವರ ನಾಯಕತ್ವದಲ್ಲಿ ಎವೆರೆಸ್ಟ್ ಪರ್ವತದ ಬೇಸ್ ಕ್ಯಾಂಪ್‌ಗೆ ಆರೋಹಣ ನಡೆಯಿತು. ಸಹನಶೀಲತೆ ಮತ್ತು ಮಾನಸಿಕ ದೃಢತೆಯು ತಂಡಕ್ಕೆ ಯಶಸ್ಸನ್ನು ತಂದಿತು’ ಎನ್ನುತ್ತಾರೆಇಂಡಸ್ ನಾಯಕತ್ವದ ಶಾಲೆಯನಿರ್ದೇಶಕ ಕೆ. ಸತ್ಯ ರಾವ್.

5364ಮೀ ಎತ್ತರ ಏರಿದ ಸಾಹಸಿಗಳು

1 ಸಿದ್ಧಾರ್ಥ ಕೃಷ್ಣ ರಾವ್

2 ಭವ್ಯ ಭೂಪೇಂದ್ರ ವೆಕಾರಿಯಾ (ವಿದ್ಯಾರ್ಥಿನಿ)

3 ಜುಜಾನ್ನಾ ಲಾಜ್ಲೊ ಐಐಎಸ್‌ಬಿ (ವಿದ್ಯಾರ್ಥಿನಿ)

4 ವೆರೊನಿಕಾ ಲಾಜ್ಲೊ (ವಿದ್ಯಾರ್ಥಿನಿ)

5 ಆದಿ ರಾಘವ ನಾರಾಯಣ್ (4010 ಮೀ)

6 ಸಿದ್ಧಾರ್ಥ ನೀಹಲ್ ಥೈವಲಪ್

7 ವೇದಿಕ್ ವೀರಮಣಿ

8 ಶ್ರೇಯಸ್ ರಾವ್ ಯಚಮನೇನಿ

9 ಮಿತೇಶ್ ಸಿಂಘ್ (ಆರೋಹಣದ ನಾಯಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT