ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಸಿ ಗಾರ್ಡೇನಿಯಾದಲ್ಲಿ4ರಂದು ‘ಫಿಕ್ಕಿ ಫ್ಲೋ’ ಮಾರ್ಕೆಟ್‌

ಲೇಡಿಸ್ ಸ್ಪೆಷಲ್
Last Updated 1 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಅಖಿಲ ಭಾರತ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ–ಫಿಕ್ಕಿ) ಸೆಪ್ಟೆಂಬರ್‌ 4ರಂದು ಐಟಿಸಿ ಗಾರ್ಡೇನಿಯಾದಲ್ಲಿ ಫ್ಲೋ ಮಾರ್ಕೆಟ್‌ ಆಯೋಜಿಸಿದೆ.

ದೇಶದ ಎಲ್ಲ ಭಾಗಗಳ ಮಹಿಳಾ ಉದ್ಯಮಿಗಳು ಫ್ಲೋ ಮಾರ್ಕೆಟ್‌ನಲ್ಲಿ ತಮ್ಮ ಸಂಸ್ಥೆಯ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಫಿಕ್ಕಿ ಆಯೋಜಿಸುತ್ತಿರುವ ಐದನೇ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಜಾರದ ವಿಸ್ತೀರ್ಣ ದೊಡ್ಡದಾಗಿದೆ. 65 ಮಳಿಗೆಗಳನ್ನು ತೆರೆಯಲಾಗಿದ್ದು, ವೈವಿಧ್ಯಮಯಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು.

ದೇಶದ ಫಿಕ್ಕಿ ಫ್ಲೋ 15 ಶಾಖೆಗಳು ಮೇಳದಲ್ಲಿ ಭಾಗವಹಿಸಲಿವೆ. ‘ಮಹಿಳಾ ಉದ್ಯಮಿಗಳ ಸಬಲೀಕರಣ ಇದರ ಉದ್ದೇಶ’ ಎಂದು ಫಿಕ್ಕಿ ಫ್ಲೋ ಅಧ್ಯಕ್ಷೆ ಶ್ರುತಿ ಮಿತ್ತಲ್‌ ಹೇಳುತ್ತಾರೆ.

ಮಹಿಳೆಯರ ಸ್ವಸಹಾಯ ಸಂಘಗಳು ಮತ್ತು ಎನ್‌ಜಿಒಗಳ ಉತ್ಪನ್ನ ಪ್ರದರ್ಶನಕ್ಕೆ ಈ ಬಜಾರ ವೇದಿಕೆಯಾಗಲಿದೆ. ಇಲ್ಲಿ ಮಾರಾಟಕ್ಕೂ ಅವಕಾಶ ಇರುವುರಿಂದ ಮಾರಾಟದಿಂದ ಬಂದ ಹಣವನ್ನು ಮಹಿಳೆಯರ ಏಳಿಗೆ, ಸ್ವಾವಲಂಬನೆ, ಸಬಲೀಕರಣ ಮತ್ತು ಕೌಶಲವೃದ್ಧಿ ತರಬೇತಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುವುದು ಎಂದು ಹೇಳಿದ್ದಾರೆ.

ಸ್ಥಳ: ಐಟಿಸಿ ಗಾರ್ಡೇನಿಯಾ, ರಿಚ್ಮಂಡ್‌ ರಸ್ತೆ

ದಿನಾಂಕ: ಬುಧವಾರ, 4ನೇ ಸೆಪ್ಟೆಂಬರ್‌

ಸಮಯ: ಬೆಳಿಗ್ಗೆ 10ರಿಂದ ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT