ಶುಕ್ರವಾರ, ಡಿಸೆಂಬರ್ 13, 2019
24 °C

ಮಕ್ಕಳ ದಿನಾಚರಣೆ ವಿಶೇಷ: ಮಕ್ಕಳೇ ಡಾಕ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ದಿನಾಚರಣೆಯನ್ನು ಕೋರಮಂಗಲದ ಮಣಿಪಾಲ್‌ ಆಸ್ಪತ್ರೆಯಲ್ಲಿ ವಿಶೇಷವಾಗಿ ಆಚರಿಸಿದ್ದು, ವೈದ್ಯರು ಹಾಗೂ ಚಿಕಿತ್ಸೆ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಹುದುಗಿಕೊಂಡಿರುವ ಭಯ ಹಾಗೂ ತಪ್ಪುಗ್ರಹಿಕೆಯನ್ನು ದೂರ ಮಾಡುವ ಸಲುವಾಗಿ ಇಲ್ಲಿ ಟೆಡ್ಡಿಬೇರ್‌ ಕ್ಲಿನಿಕನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

ಆರೋಗ್ಯದ ಬಗ್ಗೆ ಸ್ವತಃ ಕಾಳಜಿ ಹಾಗೂ ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ಪುಟಾಣಿಗಳಿಗೆ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ತುರ್ತು ಚಿಕಿತ್ಸೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ವೇಳೆ ಪೋಷಕರೇ ರೋಗಿಗಳಂತೆ ನಟಿಸಿದರು.

ಮಕ್ಕಳಿಗೆ ಕೃತಕ ಸ್ಟೆತೋಸ್ಕೋಪ್‌ ನೀಡಿ, ಪರೀಕ್ಷೆ ನಡೆಸುವುದನ್ನು ವೈದ್ಯರು ಹೇಳಿಕೊಟ್ಟರು. ಗಾಯ ಸ್ವಚ್ಛ, ಬ್ಯಾಂಡೇಜ್‌ ಕಟ್ಟುವುದು, ತುರ್ತು ಚಿಕಿತ್ಸೆ ಬಗ್ಗೆ ಹೇಳಿಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ‘ಮಣಿಪಾಲ್‌ ಮಕ್ಕಳ ತಜ್ಞರಿಂದ ಡಾಕ್ಟರ್‌ ಡಿಗ್ರಿ’ ಎಂಬ ಪ್ರಮಾಣಪತ್ರವನ್ನು ನೀಡಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು