ಸೋಮವಾರ, ಏಪ್ರಿಲ್ 19, 2021
32 °C

ಡಿಜೆ ದೆಬ್ಜೀತ್‌ ಜೊತೆ ‘ಹೌಸ್‌ ಆಫ್‌ ಟ್ರಾಯ್‌’ ಹೊಸ ವರ್ಷದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋರಮಂಗಲದ ‘ಹೌಸ್‌ ಆಫ್‌ ಟ್ರಾಯ್‌’ ರೆಸ್ಟೊರೆಂಟ್‌ ಹೊಸ ವರ್ಷವನ್ನು ಡಿಜೆ ದೆಬ್ಜೀತ್‌ ಬಾಜಿಯಾ ಜೊತೆ ಸ್ವಾಗತಿಸುತ್ತಿದೆ. ಡಿ.31 ರಾತ್ರಿ 8 ರಿಂದ ಹೌಸ್‌ ಆಫ್‌ ಟ್ರಾಯ್‌ನಲ್ಲಿ ಡಿಜೆ ನೈಟ್‌  ಆಯೋಜಿಸಲಾಗಿದೆ.

ಪ್ರಸಿದ್ಧ ಡಿಜೆ ಮತ್ತು ಎಲೆಕ್ಟ್ರಾನಿಕ್‌ ಸಂಗೀತ ಸಂಯೋಜಕ ಡಿಜೆ ದೆಬ್ಜೀತ್‌ ತಾಳಕ್ಕೆ ಹೆಜ್ಜೆ ಹಾಕುವ ಮೂಲಕ ಸಂತೋಷದಿಂದ ನ್ಯೂ ಇಯರ್‌ ಅನ್ನು ಸಂಭ್ರಮಿಸಬಹುದು. ಇದರೊಂದಿಗೆ ಕಾಕ್‌ಟೇಲ್‌, ರುಚಿ–ರುಚಿಯಾದ ಖಾದ್ಯಗಳನ್ನೊಳಗೊಂಡ ಬಫೆ ಕೂಡ ಇರಲಿದೆ. ಗ್ರೀಕ್‌ ಆಹಾರ ಖಾದ್ಯಗಳು, ಹೌಸ್‌ ಆಫ್‌ ಟ್ರಾಯ್‌ನ ವಿಶೇಷತೆ. ಈ ಬಾರಿಯೂ ನ್ಯೂ ಇಯರ್‌ ವಿಶೇಷ ಖಾದ್ಯಗಳಲ್ಲಿ ಗ್ರೀಕ್‌ ಶೈಲಿಯ ಗ್ರಿಲ್ಡ್‌, ರೋಸ್ಟೆಡ್‌ ಚಿಕನ್‌, ಡೊಲ್ಮಾಡಾಕಿಯ ಸ್ಟಫಡ್‌ ವೈನ್‌ ಲೀವ್ಸ್‌ (Dolmadakia-stuffed vine leaves), ಚಿಕನ್‌ ಸೌವಲಾಕಿ– ಫ್ರೈಡ್‌ ಚೀಸ್‌(Chicken Souvlaki, Saganaki-Fried Cheese),ಗಿರೊಸ್‌–ಗ್ರಿಲ್ಡ್‌ ಮೀಟ್‌ ರೋಲ್ಸ್‌ (Gyros-grilled meat rolls), ರೇವಾನಿ(Revani) ಮತ್ತು ಕೊರ್ಮೊಸ್‌(Kormos), ಡೆರ್ಜರ್ಟ್‌ ಸೇರಿದಂತೆ ಗ್ರೀಸ್‌ ಶೈಲಿಯ ಕಾಕ್‌ಟೇಲ್‌ನ್ನು ಸಂಗೀತ ರಸಸಂಜೆಯಲ್ಲಿ ಮಗ್ನರಾಗಿ, ಸವಿಯಬಹುದು. ಪ್ರವೇಶ ಶುಲ್ಕ: ₹2000 ದಿಂದ ಆರಂಭ. 

ಸ್ಥಳ– ಹೌಸ್‌ ಆಫ್‌ ಟ್ರಾಯ್‌, ಎಸ್‌ಜೆಆರ್‌ ಪ್ರಿಮಸ್‌, ಕೆಳ ಅಂತಸ್ತು, ಫಾರಂ ಮಾಲ್‌ ಮುಂಭಾಗ, 7ನೇ ಹಂತ ಕೋರಮಂಗಲ, 20ನೇ ಮುಖ್ಯರಸ್ತೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು