ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಯಂದು ಬಸವೇಶ್ವರ ಜಾತ್ರೆ

Last Updated 12 ಜನವರಿ 2020, 19:31 IST
ಅಕ್ಷರ ಗಾತ್ರ

ಚನ್ನವೀರಯ್ಯಪಾಳ್ಯ ಸೋಂಪುರ, ವರಹಾಸಂದ್ರ ಸಮೀಪದಲ್ಲಿರುವ ಚೋಳರ ಕಾಲದಇತಿಹಾಸ ಪ್ರಸಿದ್ದ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ಆವರಣ ಸಂಕ್ರಾಂತಿಯ ಜಾತ್ರಾ ಮಹೋತ್ಸವಕ್ಕೆ ಸಜ್ಜಾಗಿದೆ.

ಸಂಕ್ರಾಂತಿಯಂದು (ಜ.15) ಬಸವೇಶ್ವರ ಸ್ವಾಮಿ ದೇವರ ಉತ್ಸವ, ಜಾತ್ರಾ ಮಹೋತ್ಸವ, ಗಿರಿಜಾ ಕಲ್ಯಾಣೋತ್ಸವ ಮತ್ತು ಕಡಲೇಕಾಯಿ ಪರಿಷೆ ಒಟ್ಟೊಟ್ಟಿಗೆ ನಡೆಯಲಿವೆ.

ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ಶಿಥಿಲಗೊಂಡಿತು. ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್‍ ಖೇಣಿ ಅವರು ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ. ದೇವಾಲಯ ನಿರ್ಮಿಸಿದ ನಂತರ ಶ್ರೀ ಬಸವೇಶ್ವರ ಭಕ್ತಮಂಡಳಿಯ ಅಧ್ಯಕ್ಷ ಎಂ.ರುದ್ರೇಶ್ ನೇತೃತ್ವದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು 12 ವರ್ಷದಿಂದ ಅದ್ದೂರಿ ಜಾತ್ರಾಮಹೋತ್ಸವ, ಕಡಲೇಕಾಯಿ ಪರಿಷೆ, ಸುಗ್ಗಿ ನಡೆಸಿಕೊಂಡು ಬರುತ್ತಿದ್ದಾರೆ.

ವಿವಿಧ ಗ್ರಾಮಗಳ ಗ್ರಾಮ ದೇವರ ಉತ್ಸವ, ಪೂಜಾ ಕುಣಿತದೊಂದಿಗೆ ಸಾವಿರಾರು ಹೆಣ್ಣುಮಕ್ಕಳು ಆರತಿ ಉತ್ಸವದೊಂದಿಗೆ ಜಾತ್ರಾ ಮಹೋತ್ಸವ ಸ್ಥಳಕ್ಕೆ ಬಂದು ಸೇರುತ್ತಾರೆ.ಸಂಜೆ 4 ಗಂಟೆ ಸುಮಾರಿಗೆ ರೈತರು ತಾವು ಸಾಕಿರುವ ರಾಸುಗಳನ್ನು ಮೆರವಣಿಗೆ ಮೂಲಕ ಬಂದು ದೇವಸ್ಥಾನ ಪ್ರದಕ್ಷಿಣೆ ಮಾಡಿದ ನಂತರ ಕಿಚ್ಚು ಹಾಯಿಸುತ್ತಾರೆ.

ಬೆಂಗಳೂರು ನಗರ ಸೇರಿದಂತೆ ರಾಮನಗರ, ಮಾಗಡಿ, ಕನಕಪುರ, ಆನೇಕಲ್, ಚನ್ನಪಟ್ಟಣ, ಕುಣಿಗಲ್, ಹುಲಿಯೂರುದುರ್ಗ ವಿವಿಧೆಡೆಯಿಂದ ಜನರು ಜಾತ್ರೆಗೆ ಬರುತ್ತಾರೆ.

ಪರಿಷೆಯಲ್ಲಿ ಕಡಲೆಕಾಯಿ ಉಚಿತ!
ಬಸವನಗುಡಿ ಕಡಲೇಕಾಯಿ ಪರಿಷೆ ಮಾದರಿಯಲ್ಲಿ ಸೋಂಪುರ ಕಡಲೇಕಾಯಿ ಪರಿಷೆಯು ನಡೆಯಲಿದ್ದು ಇಲ್ಲಿ ಹಣಕೊಟ್ಟು ಕಡಲೇಕಾಯಿ, ಗೆಣಸು, ಕಬ್ಬನ್ನು ಖರೀದಿಸುವಂತಿಲ್ಲ. ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತಿದೆ.

ಸಾವಿರಾರು ಜನರಿಗೆ ಅನ್ನದಾನದ ಜತೆಗೆ ಬೇಯಿಸಿದ ಗಿಣ್ಣು, ಗೆಣಸು ಮತ್ತು ಪ್ರತಿಯೊಬ್ಬರಿಗೂ ತಲಾ ಎರಡು ಸೇರು ಕಡಲೇಕಾಯಿ, ಒಂದು ಜೊತೆ ಕಬ್ಬಿನ ಜೊಲ್ಲೆಯನ್ನು ಉಚಿತವಾಗಿ ವಿತರಿಸುತ್ತಾರೆ. ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ಉತ್ಸವ, ಕ್ರೀಡೆ, ಮನೊರಂಜನೆಗಳು ಮುಂಜಾನೆಯಿಂದ ರಾತ್ರಿ 11ರವರೆಗೆ ನಡೆಯುತ್ತದೆ. ಪೂಜಾ ಕುಣಿತ, ಪಟದ ಕುಣಿತ, ಯಕ್ಷಗಾನ, ಗ್ರಾಮಿಣ ಸಂಸ್ಕೃತಿಯ ಕಲಾ ಪ್ರದರ್ಶನ ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT