ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಹದ್ದುಬಸ್ತಿನಲ್ಲಿ ಹೊಸ ವರ್ಷದ ಸಂಭ್ರಮ!

Last Updated 31 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ
ADVERTISEMENT
""
""
""
""

ಹೊಸ ವರ್ಷದ ಸಂಭ್ರಮಕ್ಕೆ ಯುವ ಮನಸುಗಳು ಹಾತೊರೆಯುವುದು ಸಹಜ. ಕೇಕೆ, ಕುಣಿತದ ಮೂಲಕ ಅವರು ಪ್ರದರ್ಶಿಸುವ ಉಮೇದು ಕೂಡ ಸಹಜವೇ. ನಗರದ ಎಂ.ಜಿ. ರಸ್ತೆ ಅಂಥ ವರ್ಷದ ಹುಮ್ಮಸ್ಸಿಗೆ, ಯುವೋತ್ಸಾಹಕ್ಕೆ ಒಂದು ದೊಡ್ಡ ವೇದಿಕೆ. ಸಹಜವಾಗಿ ಯುವಜನರ ಮನಸ್ಸನ್ನು ಎಂ.ಜಿ. ರಸ್ತೆಸೆಳೆಯದೇ ಇರುವುದಿಲ್ಲ.ಹೊಸ ವರ್ಷದ ಸಂಭ್ರಮಕ್ಕೆ ಅವರ ಜೀವ ಮಿಡಿಯುತ್ತ ಇರುತ್ತದೆ.

ಸಾವಿರಾರು ಸಂಖ್ಯೆಯಲ್ಲಿ ಮುಖ್ಯವಾಗಿ ಯುವಕರು, ಯುವತಿಯರು ಮತ್ತು ಎಲ್ಲ ವಯೋಮಾನದವರು ನಗರದ ವಿವಿಧೆಡೆಯಿಂದ ಇಲ್ಲಿಗೆ ಬಂದು ಸೇರುತ್ತಾರೆ. ಸಾಗರೋಪಾದಿಯಲ್ಲಿ ಜನ ಸೇರುವುದರಿಂದ ಸುರಕ್ಷತೆ ಪೊಲೀಸರಿಗೆ ಸವಾಲುಮಾತ್ರವಲ್ಲ, ಸಾಹಸವೂ ಆಗುತ್ತದೆ.ಈ ಸಲವಂತೂ ಅವರು ಜನರ ಸುರಕ್ಷತೆಗೆಹದ್ದಿನ ಕಣ್ಣುಗಳನ್ನು ನಾಲ್ಕೂ ಕಡೆಗಳಲ್ಲಿ ಇಟ್ಟಿದ್ದರು.

ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ವ್ಯವಸ್ಥೆ

ಈ ಸುರಕ್ಷಾ ಕ್ರಮದ ಭಾಗವಾಗಿ ಮಂಗಳವಾರ (ಡಿ.31) ಮೆಟ್ರೊ ನಿಲ್ದಾಣ, ಬ್ರಿಗೇಡ್‌, ಚರ್ಚ್‌ ಸ್ಟ್ರೀಟ್‌ ಕೂಡು ರಸ್ತೆ ಸೇರಿದಂತೆ ಕೆಲವೆಡೆ ಮಹಿಳೆಯರ ರಕ್ಷಣೆಗೆ ನಿಗಾ ಕೇಂದ್ರಗಳನ್ನು ಪೊಲೀಸ್‌ ಇಲಾಖೆ ರೂಪಿಸಿದೆ. ಎಂ.ಜಿ. ರಸ್ತೆ, ಚರ್ಚ್‌ ಸ್ಟ್ರೀಟ್‌, ಬ್ರಿಗೇಡ್‌ ರಸ್ತೆ ಮತ್ತು ಇದಕ್ಕೆ ಹೊಂದಿಕೊಂಡ ಕಿರಿದಾದ ರಸ್ತೆಗಳಲ್ಲಿಯೂ ಫೋಕಸ್‌ ಲೈಟ್‌ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಮತ್ತು ಇದರ ಫುಟೇಜ್‌ಗಳು ಎಲ್ಲರಿಗೂ ಸ್ಪಷ್ಟವಾಗಿಕಾಣಿಸುವಂತೆ ಬೃಹತ್‌ ಪರದೆಯನ್ನೂ ಅಳವಡಿಸಿದ್ದಾರೆ.

ಇದೆಲ್ಲದರ ಜೊತೆಗೆ ಚರ್ಚ್‌ ಸ್ಟ್ರೀಟ್‌ನಲ್ಲಿ ಮೀಸಲು ಪೊಲೀಸ್‌ ಪಡೆಯ ವಾಹನಗಳನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ಗಸ್ತಿನಲ್ಲಿರುವ ಪೊಲೀಸರೂ ಇದ್ದಾರೆ. ಯುವ ಮನಸುಗಳ, ಹೊಸತನದ ತುಡಿತದ ಜೀವಗಳ ಹೊಸವರ್ಷ ಸ್ವಾಗತಿಸುವ ಸಂಭ್ರಮಾಚರಣೆ ಪೊಲೀಸರ ಹದ್ದುಬಸ್ತಿನಲ್ಲಿ ಯಾವುದೇ ಅಹಿತಕರ ಘಟನೆಗಳ ಆಸ್ಪದ ನೀಡದಂತೆ ನಡೆಯುತ್ತಿದೆ.

’ಪ್ರಜಾವಾಣಿ’ಯ ಛಾಯಾಗ್ರಾಹಕ ಎಂ.ಎಸ್‌. ಮಂಜುನಾಥ್‌ ಸೆರೆಹಿಡಿದ ಕೆಲವು ಚಿತ್ರಗಳು ಹದ್ದುಬಸ್ತಿಗೆ ಪೊಲೀಸರು ನಡೆಸಿದ ಸಿದ್ಧತೆಯನ್ನು ಕಟ್ಟಿಕೊಡುತ್ತವೆ.

ಮಹಾತ್ಮಗಾಂಧಿ ರಸ್ತೆ ಮೆಟ್ರೊ ನಿಲ್ದಾಣದ ಬಳಿ ಹೊಸವರ್ಷದ ಆಚರಣೆ ಹಿನ್ನೆಲೆಯಲ್ಲಿ ಮಹಿಳಾ ರಕ್ಷಣೆಗಾಗಿ ಸಜ್ಜುಗೊಂಡಿರುವ ‘ವುಮೆನ್‌ ಸೇಫ್ಟಿ ಐಲ್ಯಾಂಡ್‌’
ಚರ್ಚ್‌ಸ್ಟ್ರೀಟ್‌ ರಸ್ತೆಯಲ್ಲಿ ಮಹಿಳಾ ರಕ್ಷಣೆಗಾಗಿ ಸಜ್ಜುಗೊಂಡಿರುವ ‘ವುಮೆನ್‌ ಸೇಫ್ಟಿ ಐಲ್ಯಾಂಡ್‌’
ಮಹಾತ್ಮ ಗಾಂಧಿ ರಸ್ತೆಯ ಕಾವೇರಿ ಎಂಪೋರಿಯಂ ಬಳಿ ಪೊಲೀಸರು ಅಳವಡಿಸಿದ ಸಿಸಿ ಕ್ಯಾಮರಾ ಫುಟೇಜ್‌ ಫಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT