ಬುಧವಾರ, ಅಕ್ಟೋಬರ್ 23, 2019
21 °C
ಜನಧ್ವನಿ

ಸ್ಕೈವಾಕ್‌: ಜಾಹೀರಾತು ಮುಕ್ತವಾಗಲಿ

Published:
Updated:
Prajavani

ಜಯನಗರ 3ನೇ ಬ್ಲಾಕ್ ವೃತ್ತದಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಸ್ಕೈವಾಕ್‌ ನಿರ್ಮಾಣ ಮಾಡಲಾಗಿದೆ. ಕೆಳಗೆ ಸ್ವಲ್ಪಭಾಗ ಕಬ್ಬಿಣದ ಗ್ರಿಲ್ ಅಳವಡಿಸಿದ್ದರೂ ಇದು ಎರಡೂ ಕಡೆ ಜಾಹಿರಾತಿನಿಂದ ಬಹುತೇಕ ಆವೃತ್ತವಾಗಿದ್ದು ಜಾಹೀರಾತುಗಳೇ ಎದ್ದುಕಾಣುತ್ತಿದೆ. ರಸ್ತೆ ದಾಟುವ ಮಹಿಳೆಯರ ಮೇಲೆ ದೌರ್ಜನ್ಯವಾದರೆ ಅಥವಾ ಕಳ್ಳಕಾಕರಿಂದ ಅಪಾಯವಾದರೆ ಹೊರಗಿನ ಯಾರ ಕಣ್ಣಿಗೂ ಕಾಣದಂತೆ ಸಂಪೂರ್ಣ ಅಡ್ಡವಾಗಿದ್ದು ಅಸುರಕ್ಷತೆಯಿಂದ ಕೂಡಿದೆ.

ಪಾಲಿಕೆಗೆ ಆದಾಯದ ಮೂಲ ಎನಿಸಿದರೂ ಸುರಕ್ಷತೆ ದೃಷ್ಟಿಯಿಂದ ಇಂತಹವನ್ನು ನಿರ್ಬಂಧಿಸಬೇಕು.
ಹೊರಗಿನ ರಸ್ತೆ ಹಾಗೂ ಜನರು ಕಾಣುವಂತಾದರೆ ಯಾವುದೇ ಹಿಂಜರಿಕೆಯಿಲ್ಲದೆ ಮಹಿಳೆಯರೂ ಸೇರಿದಂತೆ ಎಲ್ಲರೂ ಉಪಯೋಗಿಸಬಹುದು. ಸಂಬಂಧಪಟ್ಟವರು ಕ್ರಮ ಕೈಗೊಳ್ಳಲಿ.

ಪತ್ತಂಗಿ ಎಸ್. ಮುರಳಿ
77 ನೇ ಅಡ್ಡರಸ್ತೆ,
ಕುಮಾರಸ್ವಾಮಿ ಬಡಾವಣೆ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)