ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಂಗಳೂರಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು

Last Updated 22 ಆಗಸ್ಟ್ 2019, 16:05 IST
ಅಕ್ಷರ ಗಾತ್ರ

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು,ಕಾರ್ಯಕ್ರಮಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಪ್ರವಚನ: ವಿಷಯ–ಕೃಷ್ಣ ಜನ್ಮಾಷ್ಟಮಿ, ಪ್ರವಚನಕಾರರು–ರಾಮಸ್ವಾಮಿ ಅಯ್ಯಂಗಾರ್‌, ಆಯೋಜನೆ, ಸ್ಥಳ–ಶಂಕರ ಜಯಂತಿ ಮಂಡಲಿ, ಶಂಕರ ಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬ್ಲಾಕ್‌, ಜಯನಗರ, ಸಂಜೆ 6

ಕಾಕೋಳು ವೇಣುಗೋಪಾಲಸ್ವಾಮಿ ದೇವಸ್ಥಾನ: ಸಂಜೆ 6ಕ್ಕೆ ವಿಶೇಷ ಪೂಜೆ, ನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ, ರಾತ್ರಿ 8ಕ್ಕೆ ಕಲ್ಪೋಕ್ತ ಪೂಜೆ, ವೇಣುವಾದನ–ಜಯತೀರ್ಥ ಕುಲಕರ್ಣಿ, ತಬಲಾ–ವಿಜಯೇಂದ್ರ ಸಾಗರ್‌.

ನಂದನವನ ಬಡಾವಣೆಯ ಗೋಪಾಲಕೃಷ್ಣ ದೇವಸ್ಥಾನ: ಸಂಜೆ 7ರಿಂದ ವಿಶೇಷ ಪೂಜೆ, ರಾತ್ರಿ 11ಕ್ಕೆ ಸಹಸ್ರನಾಮ, ರಾತ್ರಿ 12.12ಕ್ಕೆ ಅರ್ಘ್ಯಪ್ರದಾನ.

ಕಾರ್ಡ್‌ ರಸ್ತೆಯ ರಾಧಾ ಕೃಷ್ಣ ಮಂದಿರ: ಬೆಳಿಗ್ಗೆ 4ರಿಂದ ಪ್ರಹ್ಲಾದ ನರಸಿಂಹ ಮಂಗಳ ಆರತಿ, ಅಭಿಷೇಕ, ಸಂಗೀತೋತ್ಸವ, ಆಯೋಜನೆ–ಅಂತರರಾಷ್ಟ್ರೀಯ ಕೃಷ್ಣಪ್ರಭಾ ಸಂಘ.

ಇಸ್ಕಾನ್‌, ಕುಮಾರಸ್ವಾಮಿ ಲೇಔಟ್‌: ಬೆಳಿಗ್ಗೆ 9ರಿಂದ ರಾತ್ರಿ 10ರವರೆಗೆ ವೈಭವೋಪೇತ ಅಲಂಕಾರ, ಕೃಷ್ಣ ಭಜನೆ, ಕೀರ್ತನೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಅಭಿಷೇಕ, ಉಯ್ಯಾಲೋತ್ಸವ, ಪ್ರಸಾದ.

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಕತ್ರಿಗುಪ್ಪೆ ಮುಖ್ಯರಸ್ತೆ: ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೃಷ್ಣ ಜನ್ಮಾಷ್ಟಮಿ ಆಚರಣೆ.

ಇಸ್ಕಾನ್‌ ಕಲ್ಚರಲ್ ಟ್ರಸ್ಟ್‌, ರಾಜಾಜಿನಗರ: ಬೆಳಿಗ್ಗೆ 9ರಿಂದ ರಾತ್ರಿ 10ರವರೆಗೆ ವಿಶೇಷ ಕಾರ್ಯಕ್ರಮಗಳು

ಉಡುಪಿ ಶ್ರೀ ಪುತ್ತಿಗೆ ಮಠ: ಮಾನಸ ಕುಲಕರ್ಣಿ ಅವರಿಂದ ದಾಸವಾಣಿ, ತಬಲಾ–ಸರ್ವೋತ್ತಮ್‌, ಕೀಬೋರ್ಡ್‌–ಲೋಕೇಶ್‌, ಸ್ಥಳ–ಬುಲ್‌ ಟೆಂಪಲ್‌ ರಸ್ತೆ, ಎನ್‌.ಆರ್‌.ಕಾಲೊನಿ, ಬಸವನಗುಡಿ, ಮಧ್ಯಾಹ್ನ 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT