ಶುಕ್ರವಾರ, ನವೆಂಬರ್ 22, 2019
20 °C

ದೀಪಾವಳಿಗೆ ತನಿಷ್ಕ್‌ ‘ವಿರಾಸತ್‌’ ಸಂಗ್ರಹ

Published:
Updated:

ಟಾಟಾ ಸಮೂಹದ ಮುಂಚೂಣಿ ಆಭರಣ ಬ್ರಾಂಡ್‌ ತನಿಷ್ಕ್‌ ದೀಪಾವಳಿಗಾಗಿ ಆಕರ್ಷಕ ಕೊಡುಗೆ ಮತ್ತು ರಿಯಾಯ್ತಿ ಘೋಷಿಸಿದೆ. ಚಿನ್ನಾಭರಣಗಳ ಮೇಲಿನ ಮೇಕಿಂಗ್‌ ಶುಲ್ಕ ಮತ್ತು ವಜ್ರಾಭರಣಗಳ ಮೇಲೆ ಶೇ 25ವರೆಗೂ ರಿಯಾಯ್ತಿ ಘೋಷಿಸಲಾಗಿದೆ. 

ದೀಪಾವಳಿಗಾಗಿಯೇ ‘ವಿರಾಸತ್‌’ ಹೊಸ ಆಭರಣಗಳ ಸಂಗ್ರಹ ಬಿಡುಗಡೆ ಮಾಡಿದೆ. ಭಾರತೀಯ ಮಹಿಳೆಯರ ಅಭಿರುಚಿಗೆ ಅನುಗುಣವಾಗಿ ಸಾಂಪ್ರದಾಯಿಕ ಆಭರಣಗಳಿಗೆ ಸಮಕಾಲೀನ ಸ್ಪರ್ಶ ನೀಡಲಾಗಿದೆ. ಚಿನ್ನ, ಗ್ಲಾಸ್‌ ಕುಂದನ್‌, ಪೊಲ್ಕಿ ಕುಮದನ್‌ ಶೈಲಿಯ ಆಭರಣಗಳನ್ನು ಸದ್ಯದ ಫ್ಯಾಷನ್‌ಗೆ ಅನುಗುಣವಾಗಿ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. 190 ನಗರಗಳಲ್ಲಿ 300ಕ್ಕೂ ಹೆಚ್ಚು ತನಿಷ್ಕ್‌ ಮಳಿಗೆಗಳನ್ನು ಹೊಂದಿದ್ದು ಚಿನ್ನದ ಶುದ್ಧತೆ ಪರೀಕ್ಷಿಸಲು ಕ್ಯಾರಟ್‌ ಮೀಟರ್‌ ಸೌಲಭ್ಯ ಕಲ್ಪಿಸಲಾಗಿದೆ.

ಟೈಟನ್‌ ಕಂಪನಿಯ ಅಭರಣ ವಿಭಾಗದ ಸಹ ಉಪಾಧ್ಯಕ್ಷೆ (ಮಾರುಕಟ್ಟೆ) ದೀಪಿಕಾ ತಿವಾರಿ, ಚಿನ್ನ ಸಮೃದ್ಧಿಯ ಸಂಕೇತ. ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಚಿನ್ನಾಭರಣ ಮತ್ತು ವಜ್ರಾಭರಣಗಳ ಖರೀದಿ ಮೇಲೆ ರಿಯಾಯ್ತಿ ಮತ್ತು ಕೊಡುಗೆ ಘೋಷಿಸಲಾಗಿದೆ. ವಿರಾಸತ್‌ ಚಿನ್ನಾಭರಣಗಳ ಸಂಗ್ರಹ ದೀಪಾವಳಿಯ ಅಂದವನ್ನು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಪ್ರತಿಕ್ರಿಯಿಸಿ (+)