ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಬೆಂಗಳೂರು ಜ್ಯುವೆಲರಿ ಶೋ’

Last Updated 11 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಪ್ರಥಮ ಬಾರಿಗೆ ಮಹಿಳಾ ಉದ್ಯಮಿಗಳಿಂದ ವೈವಿಧ್ಯಮಯ ಆಭರಣಗಳ ‘ದಿ ಬೆಂಗಳೂರು ಜ್ಯುವೆಲರಿ ಶೋ’ (ಡಿ.13ರಿಂದ 15ರವರೆಗೆ) ಹೆಬ್ಬಾಳ ಸಮೀಪ ಸಹಕಾರ ನಗರದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ನಗರದ ಆಭರಣಕಾರರನ್ನು ಒಂದೇ ಸೂರಿನಡಿ ತರುವ ಪ್ರಯತ್ನದ ಭಾಗವಾಗಿ ಈ ಆಭರಣಗಳ ಮೇಳ ಆಯೋಜಿಸಲಾಗುತ್ತಿದೆ ಎನ್ನುತ್ತಾರೆ ಸಂಘಟಕರು. ಈ ಪ್ರದರ್ಶನ ಮೇಳದಲ್ಲಿ ನಗರದ ಹಲವು ಆಭರಣ ತಯಾರಕರು ತಮ್ಮ ವಿಶೇಷ ಶೈಲಿಯ ಆಭರಣಗಳನ್ನು ಪ್ರದರ್ಶಿಸಲಿದ್ದಾರೆ.

ಇದೇ ಮೊದಲ ಬಾರಿಗೆ ಬೆಂಗಳೂರು ಉತ್ತರ ಭಾಗದಲ್ಲಿ ಇಂತಹ ವಿನೂತನ ಆಭರಣ ಪ್ರದರ್ಶನ ಮತ್ತು ಪ್ಯಾಷನ್ ಶೋ ಆಯೋಜಿಸಲಾಗುತ್ತಿದೆ. ನಗರದ ವಿವಿಧ ಭಾಗಗಳಲ್ಲಿರುವ ವೈವಿದ್ಯಮಯ ವಿನ್ಯಾಸದ, ಆಕರ್ಷಣೀಯ ಬ್ರ್ಯಾಂಡ್‌ ಆಭರಣಗಳನ್ನು ಒಂದೇ ವೇದಿಕೆಗೆ ತರಲಾಗುತ್ತಿದೆ. ಸೊಗಸಾದ ಮತ್ತು ಮಾನ್ಯತೆ ಪಡೆದ ಆಧುನಿಕ, ಪಾರಂಪರಿಕ ದೇವಾಲಯಗಳಲ್ಲಿನ ವಿನ್ಯಾಸದ ಚಿನ್ನ, ವಜ್ರದ ಆಭರಣಗಳ ಸಂಗ್ರಹ ಮೇಳದ ಆಕರ್ಷಣೆ. ಮೇಳದಲ್ಲಿ ಪ್ರತಿ ಗಂಟೆಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ. ಲಕ್ಕಿ ಡ್ರಾನಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಗುತ್ತಿದೆ.

ಚಿತ್ರನಟಿ ಕಾವ್ಯ ಗೌಡ, ಸೋನಿಕಾ ಗೌಡ, ಮಿಸೆಸ್‌ ಇಂಡಿಯಾ ಡಾ. ಶ್ರುತಿ ಗೌಡ, ಆರ್‌ಜೆ ಶ್ರುತಿ, ರೇಖಾ ಜಗದೀಶ್, ಮಿಸೆಸ್ ಇಂಡಿಯಾ ಕರ್ನಾಟಕ ಆಯೋಜಕ ಶುಬು ಶ್ರೀರಾಮ್ ಮತ್ತಿತರರು ಭಾಗವಹಿಸಲಿದ್ದಾರೆ.

ಸ್ಥಳ:ಸಹಕಾರ ನಗರದ ರಾಧಾಕೃಷ್ಣ ಕಲ್ಯಾಣ ಮಂಟಪ, ಡಿ.13ರಿಂದ 15ರವರೆಗೆ. ಬೆಳಿಗ್ಗೆ 10ರಿಂದ ಸಂಜೆ 7ಗಂಟೆಯವರಗೆ.ಉಚಿತ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT