ಸೋಮವಾರ, ಸೆಪ್ಟೆಂಬರ್ 23, 2019
27 °C

ಸರಾಗ ಸಂಚಾರಕ್ಕೆ ಅಡ್ಡಿ

Published:
Updated:
Prajavani

ಬ್ಯಾಂಕ್ ಕಾಲೊನಿಯಿಂದ ರಿಂಗ್ ರಸ್ತೆಯ ಎಂಬತ್ತು ಅಡಿ ಸಂಪರ್ಕ ರಸ್ತೆ ಹೊಸಕೆರೆಹಳ್ಳಿ ಕ್ರಾಸ್ ಬಳಿ ಜಾರಿಯಲ್ಲಿದ್ದ ಜಲಮಂಡಲಿ ಕಾಮಗಾರಿ ಕಾರಣಾಂತರದಿಂದ ಸ್ಥಗಿತಗೊಂಡಿದೆ. ಆಳವಾಗಿ ರಸ್ತೆ ಮಧ್ಯ ಗುಂಡಿ ತೋಡಿ, ತೆಗೆದ ಮಣ್ಣನ್ನು ರಸ್ತೆ ಅಕ್ಕಪಕ್ಕ ಪೇರಿಸಿದ್ದರಿಂದ ರಸ್ತೆ ಕಿರಿದಾಗಿದೆ. ರಿಂಗ್ ರಸ್ತೆ ಮೂಲಕ ಮೈಸೂರು ರಸ್ತೆಗೆ ಇದೇ ಮುಖ್ಯ ಮಾರ್ಗವಾಗಿದ್ದರಿಂದ ವಾಹನಗಳ ಓಡಾಟ ಹೆಚ್ಚು. ಕಾಮಗಾರಿಯಿಂದ ವಾಹನ ಸಂಚಾರವೇ ಕಷ್ಟಕರವಾಗಿದೆ. ಪೇರಿಸಿದ ಮಣ್ಣನ್ನು ರಸ್ತೆ ವಿಭಾಜಕದ ಅಕ್ಕ ಪಕ್ಕ ಉದ್ದವಾಗಿ ಹಾಕಿದರೆ ರಸ್ತೆ ಅಗಲವಾಗಿ ಸಂಚಾರ ಸುಗಮವಾಗುತ್ತದೆ. ಜಲ ಮಂಡಲಿ ಇದರತ್ತ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ನೆರವಾಗಲಿ.
 

ಸತ್ಯಬೋಧ, 53, 3ನೇ ಕ್ರಾಸ್‌, ಹೊಸಕೆರೆಹಳ್ಳಿ ಬಡಾವಣೆ

Post Comments (+)