ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯಮಿಗಳ ಇಹವ್ಯ ಟೆಕ್ನಾಲಜಿ

Last Updated 11 ನವೆಂಬರ್ 2019, 19:41 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನದಿಂದ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ಮತ್ತು ಹೆಚ್ಚಿನ ವಿದೇಶಿ ವಿನಿಮಯ ತಂದಿರುವಬೆಂಗಳೂರು ಇದೀಗ ಮಹಿಳಾ ಉದ್ಯಮಿಗಳ ಮತ್ತೊಂದು ಹೊಸ ರೀತಿಯ ಸಾಹಸಕ್ಕೆ ಸಾಕ್ಷಿಯಾಗಿದೆ.

ನಗರದ ಯುವ ಮಹಿಳಾ ಉದ್ಯಮಿಗಳಿಬ್ಬರು ಸ್ವತಂತ್ರವಾಗಿ ಇಹವ್ಯ ಟೆಕ್ ಎಂಬ ವಿನೂತನ ಟೆಕ್ನಾಲಜಿ ಕಂಪನಿಯೊಂದನ್ನು ಹುಟ್ಟು ಹಾಕಿದ್ದಾರೆ. ಈ ಕಂಪನಿ ಎಲ್ಲ ಬಗೆಯ ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸುವ ಜತೆಗೆನೂರಾರು ಯುವಕರಿಗೆ ಉದ್ಯೋಗ ಸೃಷ್ಟಿಸಿದೆ.

ಬಸವೇಶ್ವರ ನಗರದಲ್ಲಿ ಕಚೇರಿ ಹೊಂದಿರುವ ‘ಇಹವ್ಯ’ ಡಾ. ಸ್ನೇಹಾ ರಾಕೇಶ್ ಮತ್ತು ಡಾ. ದಿವ್ಯಾ ಆರ್‌.ಯು ಅವರ ಕನಸಿನ ಕೂಸು. ಕಂಪನಿಯು ವೆಬ್ ಟೆಕ್ನಾಲಜಿ, ಡೈನಾಮಿಕ್ ವೆಬ್‌ಸೈಟ್‌,ಇ-ಕಾಮರ್ಸ್, ಮೊಬೈಲ್ ಆ್ಯಪ್ಸ್, ಹೈಬ್ರಿಡ್ ಅಪ್ಲಿಕೇಷನ್ಸ್, ವೆಬ್ ಅಪ್ಲಿಕೇಷನ್ಸ್, ಎಸ್ಇಓ ಮತ್ತು ಅನಾಲಿಟಿಕ್ಸ್ ಸಂಬಂಧಿಸಿದ ಕ್ಷೇತ್ರಗಳಿಗೆ ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸುತ್ತದೆ.

ಹಾಸನ ಜಿಲ್ಲೆಯ ಪುಟ್ಟ ಗ್ರಾಮದ ಡಾ. ಸ್ನೇಹಾ ರಾಕೇಶ್ ಯುರೋಪ್ ಇಂಡಿಯಾ ಸೆಂಟರ್ ಫಾರ್ ಬ್ಯುಸಿನೆಸ್‌ ಆಂಡ್ ಇಂಡಸ್ಟ್ರಿಯ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಡಾ. ದಿವ್ಯಾ ಇತ್ತೀಚಿಗೆ ಲಂಡನ್‌ನ ಎನ್‌ಆರ್‌ಐ ಕ್ಷೇಮಾಭಿವೃದ್ಧಿ ಸಂಘದ ಮಹಾತ್ಮ ಗಾಂಧಿ ಲೀಡರ್ ಶಿಪ್ ಪ್ರಶಸ್ತಿ ಪಡೆದಿದ್ದಾರೆ.

ಇವರಿಬ್ಬರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಕಂಪನಿಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಚೆಗೆ ಉದ್ಘಾಟಿಸಿ, ಶುಭ ಹಾರೈಸಿದರು.

‘ಕನ್ನಡಿಗ ಯುವ ಮಹಿಳಾ ಉದ್ಯಮಿಗಳು ಇಂಥದೊಂದು ಕಂಪನಿಯನ್ನು ಹುಟ್ಟು ಹಾಕಿ, ಮುನ್ನಡೆಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಂದಿನ ಯುವ ಉದ್ಯಮಿಗಳಿಂದಾಗಿ ದೇಶ ಹೆಮ್ಮೆ ಪಡುವಂತಾಗಿದೆ. ಉದ್ಯಮಿಗಳು ಕೇವಲ ನೂರಾರು ಜನರಿಗೆ ಉದ್ಯೋಗ ಕಲ್ಪಿಸಿ ಕೊಡುವಲ್ಲಿ ಮಾತ್ರ ಯಶಸ್ವಿಯಾಗಿಲ್ಲ, ಜೊತೆಗೆ ಅಧಿಕ ಮೌಲ್ಯದ ವಿದೇಶಿ ವಿನಿಮಯ ತರುವಲ್ಲಿಯೂ ನೆರವಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT