ಮಿಲಿಯನ್ ಡಾಲರ್ ಮುಗುಳುನಗೆ

7

ಮಿಲಿಯನ್ ಡಾಲರ್ ಮುಗುಳುನಗೆ

Published:
Updated:
Deccan Herald

ಮೂರು ದಾರಿ ಕೂಡುವಲ್ಲಿ
ಒಂದು ಕೋಲ್ಡ್ರಿಂಕ್ ಹೌಸು
ಹತ್ತು ಹಲವು ಚೆಲುವೆಯರು
ಮಳೆಗಾಲದಲ್ಲೂ ತಂಪಿನದೇ ನಸೀಬು,
ತಮ್ಮೊಳಗೇ ಕೈಕುಲುಕಿಕೊಂಡು
ಬಾಯ್ತುಂಬ ಮುಕ್ತಿಯ ನ್ನೇ ನಗುತ್ತಾ ,
ದಾರಿ ತಪ್ಪಿದ ಚೆಲುವನಿಗೆ
ಬೆರಳು ತೋರುವ ಉಪಕಾರ ಮಾಡಿ,
ಸಿಪ್ ಬೈ ಸಿಪ್
ಆ್ಯಪಲ್ ಮಿಲ್ಕ್ ಶೇಕ್ ಹೀರುವವಳನ್ನು
ಸಹಿಸಿಕೊಳ್ಳಲಾರಿರಿ ನೀವು,

 

ನೂರು ದಾರಿ ಕೂಡುವಲ್ಲಿ
ಮಿಲಿಯನ್ ಡಾಲರ್ ಮುಗುಳುನಗೆಗೆ
ಸೋಲದವರೇ ಇಲ್ಲ
ಕಾಲುಗಡಗ
ಮುಕ್ತ ಪಾದ
ತೋಳ್ಬಲ
ಎಡಗಾಲಿನ ಕರಿ ದಾರ
ತೊನೆಯುವ ನಮ್ಮದೇ...
"ಏನು ಹೆಂಗಸರಪ್ಪಾ.....?"
ಮೂಗು ಮುರಿಯುತ್ತೀರಿ
ಫೇಸ್ಬುಕ್ಕಿನಲ್ಲಿ ಒನ್ ಕೆ ಲೈಕ್ ಒತ್ತುವ 'ಶೀಲಾ ಗಂಡಸರಿಗೆ'
ತಮ್ಮ ಹೆಸರು ತೊಡುವ ಧೈರ್ಯವಿಲ್ಲ
ಮತ್ತೆ ಮತ್ತೆ ಮುಗ್ಗರಿಸುತ್ತೀರಿ
ಮಿಲಿಯನ್ ಡಾಲರ್ ಮುಗುಳುನಗೆಗೆ

 

ಇದೇ ಓಣಿಯ ತಿರುವಿನಲ್ಲಿ
ಫಕ್ಕನೆ ತಿರುಗಿ ಒಂದು ನೋಟ ಎಸೆದವಳ
ಬೆನ್ನ ಮೇಲಿನ ಹಚ್ಚೆ
ಹಣೆಯ ಮೇಲಿನ ಬ್ಲಂಟೆಡ್ ಹೇರ್
ಟಿಂಟೆಡ್ ಫ್ರೇಮಿನಲ್ಲಿ
ಝಗಮಗಿಸುವ ಬ್ರಾಡ್ ಸ್ಮೈಲಿಗೆ
ಅಲುಗಾಡಿದವರ ಹಲ್ಲುಗಳು
ರಿಪೇರಿಯಾಗುತ್ತಿಲ್ಲ,
ಮಾತನಾಡದಿರಿ ನಮ್ಮ ಕುರಿತು
ಓರೆ ನೋಟಗಳ ಹಳೆಯ ಖಯಾಲಿಗೆ
ರಾತ್ರಿಗಳ ಉರಿಸಬೇಡಿ
ಚಂದ್ರನನ್ನು ಬಿಟ್ಟುಕೊಟ್ಟುಬಿಡಿ
ನಿಮಗೂ ಉಪಮೆ ರೂಪಕಗಳ ಕಟ್ಟಿ
ಹಾಡು ಬರೆಯುತ್ತೇವೆ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !