ಉಗಿಬಂಡಿಯ ಪುಟ್ಟ ಕಥೆ

ಗುರುವಾರ , ಜೂನ್ 20, 2019
26 °C

ಉಗಿಬಂಡಿಯ ಪುಟ್ಟ ಕಥೆ

Published:
Updated:
Prajavani

* ಮನುಷ್ಯ ಮೊದಲು ಕಂಡುಹಿಡಿದಿದ್ದು ಯಾವುದನ್ನು? ರೈಲು ಹಳಿಗಳನ್ನೋ, ಉಗಿಬಂಡಿಗಳನ್ನೋ?

ರೈಲು ಬಂಡಿಯನ್ನು ಎಳೆಯುವ ಯಂತ್ರಗಳನ್ನು ಕಂಡುಹಿಡಿಯುವುದಕ್ಕಿಂತ ಮೊದಲೇ ಮರದ ರೈಲು ಹಳಿಗಳು ಬಳಕೆಯಲ್ಲಿದ್ದವು. 15ನೆಯ ಶತಮಾನದಲ್ಲಿ ಬ್ರಿಟನ್ನಿನಲ್ಲಿ ಕುದುರೆಗಳನ್ನು ಬಳಸಿ ಮರದ ರೈಲು ಹಳಿಗಳ ಮೇಲೆ ಚಿಕ್ಕ ರೈಲು ಓಡಿಸಲಾಗುತ್ತಿತ್ತು. ರೈಲು ಹಳಿಗಳ ಮೇಲೆ ಓಡುವ ಮೊದಲ ಉಗಿಬಂಡಿಯನ್ನು ಅಭಿವೃದ್ಧಿಪಡಿಸಿದ್ದು 1804ರಲ್ಲಿ.

* ಉಗಿಬಂಡಿ ಕಂಡುಹಿಡಿದಿದ್ದು ಯಾರು?

ಗ್ರೀಸ್‌ನ ಗಣಿತ ಶಾಸ್ತ್ರಜ್ಞನೊಬ್ಬ 2ನೆಯ ಶತಮಾನದಲ್ಲಿಯೇ ಉಗಿಬಂಡಿಯಂತಹ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದ. ಆದರೆ, ಮೊದಲ ಉಗಿಬಂಡಿಯನ್ನು ಅಭಿವೃದ್ಧಿಪಡಿಸಿದ ಕೀರ್ತಿ ಜೇಮ್ಸ್‌ ವಾಟ್‌ ಅವರಿಗೆ ಸಲ್ಲುತ್ತದೆ. ಇದನ್ನು ಅವರು ಅಭಿವೃದ್ಧಿಪಡಿಸಿದ್ದು 1769ರಲ್ಲಿ. ಇಂಗ್ಲೆಂಡಿನಲ್ಲಿ 1804ರಲ್ಲಿ ರಿಚರ್ಡ್‌ ಟ್ರೆವಿತಿಕ್‌ ಎನ್ನುವವರು ರೈಲು ಬೋಗಿಗಳನ್ನು ಎಳೆಯುವ ಉಗಿಬಂಡಿ ಸಿದ್ಧಪಡಿಸಿದರು.

* ಅತಿ ಉದ್ದದ ರೈಲು ಹಳಿ ಎಲ್ಲಿದೆ?

ಇದು ಇರುವುದು ರಷ್ಯಾದಲ್ಲಿ. ಅಲ್ಲಿನ ಟ್ರಾನ್ಸ್‌–ಸೈಬೀರಿಯನ್ ರೈಲು ಹಳಿಯ ಉದ್ದ 9,300 ಕಿಲೋ ಮೀಟರ್‌ಗಳು.

* ಮೊದಲ ರೈಲು ಸುರಂಗ ಮಾರ್ಗ ಯಾವುದು?

ಲಂಡನ್ನಿನ ಮೆಟ್ರೊಪಾಲಿಟನ್ ಮಾರ್ಗ. ಇದು 1863ರಲ್ಲಿ ಬಳಕೆಗೆ ಮುಕ್ತವಾಯಿತು.

* ಅತಿ ವೇಗದ ರೈಲುಗಳನ್ನು ಮೊದಲು ಬಳಸಿದ್ದು ಯಾವ ದೇಶ?

ಅತಿವೇಗದ ರೈಲುಗಳು ಸಂಚಾರ ಆರಂಭಿಸಿದ್ದು ಮೊದಲು ಜಪಾನ್‌ನಲ್ಲಿ. 1964ರಲ್ಲಿ ಟೋಕಿಯೊ ಮತ್ತು ಒಸಾಕಾ ನಡುವೆ ಬುಲೆಟ್ ರೈಲು ಸಂಚಾರ ಆರಂಭವಾಯಿತು. ಬುಲೆಟ್‌ ರೈಲುಗಳು ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !