ಬೆಂಗಳೂರು: ನಟಿ ಹಾಗೂ ಮಾಡೆಲ್ ದಿಶಾ ಮದನ್ ಅವರು ಸತತ ಎರಡನೇ ಬಾರಿ ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಫ್ರಾನ್ಸ್ನ ಕಾನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (2026) ಭಾಗವಹಿಸಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಆಭರಣಗಳನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಉಡುಗೆಯ ಬಗ್ಗೆ, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಕ್ಷಣಗಳ ವಿಡಿಯೊ ಶೇರ್ ಮಾಡಿದ್ದಾರೆ.

‘ಮತ್ತೊಮ್ಮೆ ಇದು ನನ್ನ ಕ್ಷಣ. 80 ವರ್ಷ ಹಳೆಯ ಎರಡು ವಿಂಟೇಜ್ ಸೀರೆಗಳನ್ನು ಒಂದೇ ಉಡುಪಿನಲ್ಲಿ ಬೆಸೆಯಲಾಗಿದೆ. ಭಾರತೀಯ ಜವಳಿಗಳ ಸಂರಕ್ಷಣೆಗೆ ವಿನ್ಯಾಸಗೊಳಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

ದಿಶಾ ಅವರು ತೊಟ್ಟ ಉಡುಪನ್ನು ನಿಹಾರಿಕಾ ವಿವೇಕ್ ಎನ್ನುವವರು ವಿನ್ಯಾಸ ಮಾಡಿದ್ದಾರೆ.

ಹಣೆಯಲ್ಲಿ ಕೆಂಪು ಬೊಟ್ಟು, ಮೂಗುತಿ, ಜಡೆ, ಜಡೆ ತುಂಬಾ ಬಿಲ್ಲೆಗಳು, ಕಿವಿಯೋಲೆ, ಉಗುರುಗಳಿಗೆ ವಿನ್ಯಾಸ, ಸೀರೆಯಲ್ಲಿ ತಯಾರಾದ ಗೌನ್ ಎಲ್ಲದರ ಸಮ್ಮಿಶ್ರಣದಿಂದ ದಿಶಾ ಸೌಂದರ್ಯ ಇಮ್ಮಡಿಗೊಂಡಿತ್ತು.

ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಂತೆ ಕ್ಯಾಮೆರಾ ಕಣ್ಣುಗಳು ತಮ್ಮತ್ತ ಹೊರಳಿದ್ದನ್ನು ಕಂಡ ದಿಶಾ, ನಗೆ ಬೀರುತ್ತಾ ಸಾಗಿದ್ದಾರೆ.

ಬಂಜಾರಾ ಉಡುಪಿನಲ್ಲಿ ದಿಶಾ

ನಿಹಾರಿಕಾ ಅವರೇ ವಿನ್ಯಾಸಗೊಳಿಸಿರುವ ಬಂಜಾರಾ ಸಮುದಾಯದ ಸಾಂಪ್ರದಾಯಿಕ ಉಡುಗೆ ತೊಟ್ಟು ದಿಶಾ, ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಇದರ ವಿಡಿಯೊ, ಫೋಟೊಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಾಡೆಲಿಂಗ್, ಧಾರಾವಾಹಿ ಲೋಕದಲ್ಲಿ ಸಕ್ರಿಯವಾಗಿರುವ ದಿಶಾ ಮದನ್ ‘ಫ್ರೆಂಚ್ ಬಿರಿಯಾನಿ’ ಎಂಬ ಸಿನಿಮಾದಲ್ಲಿ ಹಾಗೂ ‘ಹಂಬಲ್ ಪೊಲಿಟಿಷಿಯನ್ ನೊಗರಾಜ್’ ಎಂಬ ವೆಬ್ ಸಿರೀಸ್ನಲ್ಲಿ ಅಭಿನಯಿಸಿದ್ದಾರೆ.

ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಭಾವನಾ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.