ಪ್ರಸ್ತುತ ದಿನಗಳಲ್ಲಿ ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿಯಾಗಿಲ್ಲ. ಬದಲಾಗಿ ಎಲ್ಲ ಕೆಲಸಗಳಿಗೂ ಪ್ರಮುಖ ದಾಖಲೆಯಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ಬಹುತೇಕ ಯುವಕರು ವಿದ್ಯಾಭ್ಯಾಸ ಮುಗಿದ ನಂತರ ಸ್ವಂತದ ಊರನ್ನು ತೊರೆದು ಬೆಂಗಳೂರಿನಂತಹ ಮಹಾನಗರಗಳಿಗೆ ಬಂದು ಇಲ್ಲಿಯೇ ನೆಲೆಯೂರುತ್ತಾರೆ. ಮಾತ್ರವಲ್ಲದೆ ಮದುವೆಯಾದ ವಧು ಗಂಡನ ಮನೆಗೆ ಹೋದಾಗ ವಿಳಾಸ ಬದಲಾವಣೆ ಮಾಡಬೇಕಾಗುತ್ತದೆ.

ಈ ಎಲ್ಲವನ್ನೂ ಮನೆಯಲ್ಲಿಯೇ ಕುಳಿತು ಆರಾಮವಾಗಿ ಬದಲಾಯಿಸಬಹುದಾಗಿದೆ. ಈ ಮೊದಲು ಆಧಾರ್ ಅಪ್ಡೇಟ್ಗೆ ಸಂಬಂಧಿಸಿದ ಯಾವುದೇ ಬದಲಾವಣೆಗಳನ್ನು ಮಾಡಬೇಕಾದಲ್ಲಿ ಆಧಾರ್ ಸೆಂಟರ್ ಅಥವಾ ಗ್ರಾಮ ಓನ್ಗಳಿಗೆ ಭೇಟಿ ನೀಡಬೇಕಿತ್ತು. ಆದರೆ ಇದೀಗ ನಿಮ್ಮ ಮೊಬೈಲ್ ಮೂಲಕ ಮಾಹಿತಿಯನ್ನು ದೃಢಿಕರಿಸಬಹುದು.

ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಆಧಾರ್ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಷನ್ ಅನ್ನು ಡೌನ್ ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
.ಹೊಸ ‘ಆಧಾರ್’ ಅಪ್ಲಿಕೇಷನ್’ಬಳಸುವುದು ಹೇಗೆ... ಇಲ್ಲಿದೆ ಸಂಪೂರ್ಣ ಮಾಹಿತಿ.
ವಿಳಾಸ ಬದಲಾವಣೆ ಹೇಗೆ?

ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಿಮ್ಮೊಂದಿಗಿದ್ದರೆ ಸುಲಭವಾಗಿ ಮಾಹಿತಿಯನ್ನು ನವೀಕರಣ ಮಾಡಬಹುದಾಗಿದೆ. ನಿಮ್ಮ ಮೊಬೈಲ್ನಲ್ಲಿ ಆಧಾರ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಒಂದು ಅಪ್ಲಿಕೇಷನ್ನಲ್ಲಿ ಕುಟುಂಬದ 5 ಸದಸ್ಯರ ಆಧಾರ್ ಮಾಹಿತಿಯನ್ನು ದೃಢೀಕರಿಸಬಹುದು.

ವಿಳಾಸವನ್ನು ಬದಲಿಸಲು ಬಯಸಿದರೆ, ‘address update' ಆಯ್ಕೆ ಮಾಡಿರಿ. 'My documents' ಆಯ್ಕೆ ಮಾಡಿ. ಬಳಿಕ 'continue to update address' ಕ್ಲಿಕ್ ಮಾಡಿ 'OTP' ದೃಢೀಕರಿಸಿ 'Continue' ಆಯ್ಕೆ ಮಾಡಿ. ನಂತರ ವೋಟರ್ ಐಡಿಯ ಫೋಟೊವನ್ನು ಅಪ್ಲೋಡ್ ಮಾಡಿ.

ಬಳಿಕ ನಿಮ್ಮ ಮನೆ ವಿಳಾಸ, ಪಿನ್ ಕೋಡ್, ಜಿಲ್ಲೆ, ರಾಜ್ಯ, ಹಳ್ಳಿ. ಅಂಚೆ ಕಚೇರಿಯ ಮಾಹಿತಿಯನ್ನು ಭರ್ತಿ ಮಾಡಿ. ಮುಖ ಪರಿಶೀಲನೆ ಮಾಡಿ. ನಿಗದಿತ ಶುಲ್ಕ ಪಾವತಿಸಿದರೆ ನಿಮ್ಮ ವಿಳಾಸ ಬದಲಾಗುತ್ತದೆ.

ಮೊಬೈಲ್ ನಂಬರ್ ಬದಲಾವಣೆ ಹೇಗೆ?

ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಬಯಸಿದರೆ, 'moblie number update' ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ 'continue to update moblie number' ಆಯ್ಕೆ ಮಾಡಿ. ಆಧಾರ್ ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ನವೀಕರಿಸಬೇಕಾದ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಹೊಸ ಸಂಖ್ಯೆಗೆ ಓಟಿಪಿ ಪಡೆಯಿರಿ. ನಂತರ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿಸಿದರೆ ಮೊಬೈಲ್ ಸಂಖ್ಯೆ ನಿಗದಿತ ಅವಧಿಯೊಳಗೆ ನವೀಕರಣಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.