ಪ್ರಸ್ತುತ ದಿನಗಳಲ್ಲಿ ಬಹುತೇಕರ ಬಳಿ ಸ್ವಂತದ ಲ್ಯಾಪ್ಟಾಪ್ ಇದ್ದೆ ಇರುತ್ತದೆ. ಹೀಗಾಗಿ ಲ್ಯಾಪ್ಟಾಪ್ ಅನ್ನು ಸರಿಯಾಗಿ ಸ್ವಚ್ಛಗೊಳಿಸುವುದು ತುಂಬ ಮುಖ್ಯ. ಇದರಿಂದ ಲ್ಯಾಪ್ಟಾಪ್ ದೀರ್ಘಕಾಲದವರೆಗೆ ಬಾಳಿಕೆ ಬರಲು ಸಹಕಾರಿಯಾಗಿದೆ. ಜೊತೆಗೆ ಅದರ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ. ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಲ್ಯಾಪ್ಟಾಪ್ ಅತಿಯಾಗಿ ಬಿಸಿಯಾಗುವುದನ್ನು ಕೂಡ ತಪ್ಪಿಸಬಹುದಾಗಿದೆ.

ಲ್ಯಾಪ್ಟಾಪ್ ಅನ್ನು ಸ್ವಚ್ಛಗೊಳಿಸುವ ಮೊದಲು ಆಫ್ ಮಾಡಿ. ಬಳಿಕ ಲ್ಯಾಪ್ಟಾಪ್ಗೆ ಜೋಡಿಸಿರುವ ಇತರೆ ಔಟ್ಪುಟ್ ಹಾಗೂ ಇನ್ಪುಟ್ ಸಾಧನಗಳನ್ನು ಬೇರ್ಪಡಿಸಿಕೊಂಡು ನಂತರ ಸ್ವಚ್ಛತೆ ಆರಂಭಿಸಿ.

ಒಣಗಿದ ಮೈಕ್ರೋಫೈಬರ್ ಬಟ್ಟೆಯನ್ನು ತೆಗೆದುಕೊಂಡು ಲ್ಯಾಪ್ಟಾಪ್ ಮೇಲಿರುವ ಧೂಳನ್ನುನಿಧಾನವಾಗಿ ಒರೆಸಿ. ನಂತರ ಬಟ್ಟೆಗೆ ಸ್ವಲ್ಪ ನೀರು ಹಾಕಿಕೊಂಡು ಮೃದುವಾಗಿ ಮೇಲ್ಭಾಗ ಮತ್ತು ಕೆಳಭಾಗವನ್ನು ಒರೆಸಿರಿ.

ಲ್ಯಾಪ್ಟಾಪ್ ಅನ್ನು ತಲೆಕೆಳಗಾಗಿ ಮಾಡಿ ಮೆಲ್ಲನೆ ಹಿಂಭಾಗದಿಂದ ತಟ್ಟಿ. ಇದರಿಂದ ಕೀಲಿಗಳ ನಡುವೆ ಸಿಲುಕಿರುವ ಧೂಳು ಕೆಳಗೆ ಬೀಳುತ್ತದೆ. ನಂತರ ಬ್ರಷ್ ಬಳಸಿ, ನಿಧಾನವಾಗಿ ಕೀಲಿಗಳ ನಡುವೆ ಇರುವ ಧೂಳನ್ನು ತೆಗೆಯಿರಿ. ಇದರಿಂದ ಕೀಲಿಗಳು ಸುಲಭವಾಗಿ ಹಾಗೂ ಮೃದುವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ.

ಲ್ಯಾಪ್ಟಾಪ್ ಸ್ಕ್ರೀನ್ ಮೇಲೆ ಗಡುಸಾದ ಅಥವಾ ಒರಟಾದ ಬಟ್ಟೆಯನ್ನು ಎಂದಿಗೂ ಬಳಸಬೇಡಿ. ಇದರಿಂದ ಸ್ಕ್ರೀನ್ ಹಾಳಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಒಣ ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಿರಿ. ಸೋಪಿನ ನೀರು ಅಥವಾ ಇತರೆ ಕ್ಲೀನಿಂಗ್ ದ್ರಾವಣಗಳನ್ನು ಬಳಸಬೇಡಿ. ಅಗತ್ಯವಿದ್ದರೆ ಸ್ವಲ್ಪ ತೇವಾಂಶವುಳ್ಳ ಬಟ್ಟೆಯನ್ನು ಬಳಸಿ.

ಲ್ಯಾಪ್ಟಾಪ್ನೊಂದಿಗೆ ಇನ್ಪುಟ್ ಹಾಗೂ ಔಟ್ಪುಟ್ಗಾಗಿ ಯುಎಸ್ಬಿ ಪೋರ್ಟ್ಗಳನ್ನು ನೀಡಿರುತ್ತಾರೆ.ಅವುಗಳ ಒಳಗೆ ಧೂಳು ತುಂಬಿರುತ್ತದೆ. ಹೀಗಾಗಿ ಇವುಗಳನ್ನು ಒಣ ಬ್ರಷ್ ಬಳಸಿ ಸ್ವಚ್ಛಗೊಳಿಸಬಹುದು. ಕಂಪ್ರೆಸ್ಡ್ ಏರ್ ಕೂಡ ಬಳಸಿ ಸ್ವಚ್ಛತೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.