ಕುಕ್ಕರ್ಗಳನ್ನು ಎಲ್ಲರೂ ಬಳಕೆ ಮಾಡುತ್ತಾರೆ. ಪಾತ್ರೆಗಳಿಗೆ ಹೋಲಿಸಿದರೆ ಕುಕ್ಕರ್ನಲ್ಲಿ ಬೇಗನೆ ಅಡುಗೆ ಸಿದ್ಧವಾಗುತ್ತದೆ. ಮಾತ್ರವಲ್ಲದೆ, ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ಆದರೆ ಕುಕ್ಕರ್ ಬಳಕೆ ಮಾಡುವ ಮುನ್ನ ಕೆಲವು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಸಣ್ಣ ಅಜಾಗರೂಕತೆ ಕುಕ್ಕರ್ ಸ್ಫೋಟಕ್ಕೆ ಕಾರಣವಾಗಬಹುದು.

ಕುಕ್ಕರ್ನಲ್ಲಿರುವ ಗ್ಯಾಸ್ಕೆಟ್ ರಬ್ಬರ್ ಸರಿಯಾಗಿ ಕೆಲಸ ಮಾಡದಿದ್ದರೆ, ಕುಕ್ಕರ್ ಸ್ಫೋಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಪ್ರತಿ ಬಾರಿ ಕುಕ್ಕರ್ ಬಳಸುವ ಮುನ್ನ ಗ್ಯಾಸ್ಕೆಟ್ ರಬ್ಬರ್ ಬಿರುಕು ಬಿಟ್ಟಿದೆಯೇ? ಸಡಿಲವಾಗಿದೆಯೇ ಎಂಬುದನ್ನು ಪರಿಶೀಲಿಸಿರಿ. ಕನಿಷ್ಠ 6 ತಿಂಗಳಿಗೊಮ್ಮೆ ಗ್ಯಾಸ್ಕೆಟ್ ರಬ್ಬರ್ ಅನ್ನು ಬದಲಾಯಿಸುವುದು ಸೂಕ್ತ.

ಕುಕ್ಕರ್ನಲ್ಲಿ ಶೇ.67ರಷ್ಟು ಮಾತ್ರ ಆಹಾರವಿರಬೇಕು. ಉಳಿದ ಭಾಗ ಖಾಲಿ ಇರುವಂತೆ ಎಚ್ಚರವಹಿಸಬೇಕು. ಇದಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರವನ್ನು ತುಂಬಿಸಿ ಬೇಯಿಸಿದರೆ, ಕುಕ್ಕರ್ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೇಲಿನ 2/3 ರ ಅನುಪಾತದಲ್ಲಿ ಇರುವಂತೆ ನೋಡಿಕೊಳ್ಳಿ.

ಕೆಲ ವೇಳೆ ಸ್ಟಾವ್ ಮೇಲೆ ಕುಕ್ಕರ್ ಇಟ್ಟಿರುವುದು ಮರೆತು ಹೋಗಿ ಸ್ಫೋಟವಾಗಿರುವ ಉದಾಹರಣೆಗಳಿವೆ. ಹಾಗಾಗಿ ಸರಿಯಾದ ಸಮಯಕ್ಕೆ ಸ್ಟಾವ್ ಆಫ್ ಮಾಡುವುದು ಒಳ್ಳೆಯದು. ಜತೆಗೆ ಕುಕ್ಕರ್ ಇಟ್ಟು ಹೊರಹೋಗುವುದು, ಸ್ನಾನಕ್ಕೆ ಹೋಗುವುದು ಸೇರಿದಂತೆ ಇತರೆ ಕೆಲಸದಲ್ಲಿ ತೊಡಗಿಕೊಳ್ಳುವುದನ್ನು ನಿಯಂತ್ರಿಸಿ.

ವಿಷಲ್ ಕುಕ್ಕರ್ನ ಹೃದಯ ಭಾಗವಾಗಿದೆ. ಪ್ರತಿ ಬಾರಿ ಕುಕ್ಕರ್ ಅನ್ನು ಬಳಸಿದ ನಂತರ ವಿಷಲ್ನ ಭಾಗಗಳನ್ನು ಬೇರ್ಪಡಿಸಿಕೊಂಡು ಸ್ವಚ್ಛಗೊಳಿಸುವುದು ಉತ್ತಮ. ಇಲ್ಲದಿದ್ದರೆ ವಿಷಲ್ ಕಟ್ಟಿಕೊಂಡು, ಒತ್ತಡ ಹೊರಹೋಗಲು ಅಡ್ಡಿ ಉಂಟು ಮಾಡಬಹುದು. ಜೊತೆಗೆ ವೆಂಟ್ ಪೈಪ್ ಅನ್ನು ಸರಿಯಾಗಿ ಸ್ವಚ್ಛಗೊಳಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.