ಬಟ್ಟೆಗಳ ಮೇಲೆ ಆಗಿರುವ ಕಲೆ ಅಥವಾ ಬಣ್ಣಗಳನ್ನು ತೆಗೆಯುವುದು ಅಷ್ಟು ಸುಲಭದ ಮಾತಲ್ಲ. ಹಾಗಂತ ಕಷ್ಟವೂ ಅಲ್ಲ. ಹಾಗಾದರೆ ಬಟ್ಟೆಗಳ ಮೇಲೆ ಆಗಿರುವ ಕಲೆ ಅಥವಾ ಬಣ್ಣಗಳನ್ನು ಹೋಗಲಾಡಿಸಲು ಇಲ್ಲಿವೆ ಸರಳ ಉಪಾಯಗಳು..

* ಎಣ್ಣೆ ಅಥವಾ ಗ್ರೀಸ್ ಕಲೆಯ ಮೇಲೆ ಸ್ವಲ್ಪ ಟಾಲ್ಕಂ ಪೌಡರ್ ಅಥವಾ ಕಾರ್ನ್ ಫ್ಲೋರ್ ಹಾಕಿ 15 ನಿಮಿಷ ಬಿಡಿ. ಅದು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ನಂತರ ಡಿಶ್ ವಾಶ್ ಲಿಕ್ವಿಡ್ ಹಾಕಿ ಉಜ್ಜಿ ತೊಳೆಯಿರಿ.

*ಟೀ ಅಥವಾ ಕಾಫಿ ಕಲೆಯನ್ನು ತಕ್ಷಣವೇ ತಣ್ಣೀರಿನಿಂದ ತೊಳೆಯಿರಿ. ಕಲೆ ಹಳೆಯದಾಗಿದ್ದರೆ, ಸ್ವಲ್ಪ ವಿನೆಗರ್ ಮತ್ತು ನೀರನ್ನು ಬೆರೆಸಿ ಕಲೆಯ ಮೇಲೆ ಹಚ್ಚಿ, 10 ನಿಮಿಷದ ನಂತರ ವಾಶ್ ಮಾಡಿ.

*ರಕ್ತದ ಕಲೆಗೆ ಆಗಿದ್ದರೆ ಕಲೆಗಳನ್ನು ತೆಗೆಯಲು ಎಂದಿಗೂ ಬಿಸಿ ನೀರು ಬಳಸಬೇಡಿ. ಕೇವಲ ತಣ್ಣೀರು ಮತ್ತು ಸೋಪಿನಿಂದ ಉಜ್ಜಿದರೆ ಕಲೆ ಬೇಗ ಹೋಗುತ್ತದೆ. ಹಳೆಯ ಕಲೆಯಾಗಿದ್ದರೆ ʼಹೈಡ್ರೋಜನ್ ಪೆರಾಕ್ಸೈಡ್ʼ ಬಳಸಬಹುದು.

* ಶಾಯಿ ಅಥವಾ ಪೆನ್ನಿಂದ ಆಗಿರುವ ಕಲೆಗಳ ಮೇಲೆ ಸ್ವಲ್ಪ ಸ್ಯಾನಿಟೈಸರ್ ಅಥವಾ ರಬ್ಬಿಂಗ್ ಆಲ್ಕೋಹಾಲ್ ಹಾಕಿ ಹತ್ತಿಯಿಂದ ಒತ್ತಿ. ಶಾಯಿ ಕರಗಲು ಪ್ರಾರಂಭವಾಗುತ್ತದೆ. ಕಲೆ ಇರುವ ಭಾಗವನ್ನು ರಾತ್ರಿ ಪೂರ್ತಿ ಹಾಲಿನಲ್ಲಿ ನೆನೆಸಿಟ್ಟು, ಮರುದಿನ ಸೋಪಿನಿಂದ ತೊಳೆದರೆ ಕಲೆ ಮಾಯವಾಗುತ್ತದೆ.

ಬಟ್ಟೆಗಳನ್ನು ಒಗೆಯುವಾಗ ಅಥವಾ ಬಟ್ಟೆಗಳನ್ನು ಒಗೆಯಲು ನೆನೆಸಿಟ್ಟಾಗ ಒಂದು ಬಟ್ಟೆಯ ಬಣ್ಣ ಮತ್ತೊಂದು ಬಟ್ಟೆಗೆ ಅಂಟಿಕೊಳ್ಳುತ್ತದೆ. ಬಣ್ಣ ಬಿಡುವ ಬಟ್ಟೆಗಳನ್ನು ಪ್ರತ್ಯೇಕವಾಗಿ ನೆನೆಸಿಡಿ ಅಥವಾ ವಾಷಿಂಗ್ ಮೆಷನ್ಗೆ ಹಾಕಿ. ಇಲ್ಲವಾದರೆ ಬಟ್ಟೆಗಳು ಬಣ್ಣವಾಗುತ್ತದೆ. ಒಂದು ವೇಳೆ ಬಟ್ಟೆಗೆ ಬಣ್ಣ ಅಂಟಿಕೊಂಡರೆ ಹೀಗೆ ಮಾಡಿ..

*ಬಿಳಿ ಬಟ್ಟೆಯ ಮೇಲೆ ಬಣ್ಣವಾಗಿದ್ದರೆ, ಆ ಭಾಗಕ್ಕೆ ನಿಂಬೆ ರಸ ಹಿಂಡಿ ಉಪ್ಪು ಸವರಿ ಬಿಸಿಲಿನಲ್ಲಿ ಒಣಗಿಸಿ. ನಂತರ ವಾಶ್ ಮಾಡಿ.

* ಬಕೆಟ್ ನೀರಿಗೆ ಒಂದು ಚಮಚ ಅಡುಗೆ ಸೋಡಾ ಹಾಕಿ ಬಟ್ಟೆಯನ್ನು ನೆನೆಸಿಡಿ. ಇದು ಬಣ್ಣದ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ತುಕ್ಕು ಅಥವಾ ಮಣ್ಣಿನ ಕಲೆ (Rust or Mud)

* ತುಕ್ಕು ಹಿಡಿದ ಜಾಗಕ್ಕೆ ನಿಂಬೆ ರಸ ಮತ್ತು ಉಪ್ಪು ಹಚ್ಚಿ ಚೆನ್ನಾಗಿ ಉಜ್ಜಿ, ಬಿಸಿಲಿನಲ್ಲಿ ಒಣಗಲು ಬಿಡಿ.

* ಮಣ್ಣು ಹಸಿ ಇರಲಿ ಅಥವಾ ಒಣಗಿರಲಿ, ಮೊದಲು ಅದನ್ನು ಬ್ರಷ್ನಿಂದ ತೆಗೆಯಿರಿ. ನಂತರ ಡಿಟರ್ಜೆಂಟ್ ಬಳಸಿ ತೊಳೆಯಿರಿ.

ಇವುಗಳನ್ನು ಗಮನಿಸಿ..

*ಕಲೆ ಆದ ತಕ್ಷಣ ತೊಳೆದರೆ ಶೇ. 90ರಷ್ಟು ಕಲೆಗಳು ಸುಲಭವಾಗಿ ಹೋಗುತ್ತವೆ. ಒಣಗಿದ ನಂತರ ತೆಗೆಯುವುದು ಕಷ್ಟ.

* ಹೆಚ್ಚಿನ ಕಲೆಗಳು ಬಿಸಿ ನೀರಿನಿಂದಾಗಿ ಬಟ್ಟೆಯ ನೂಲಿನೊಳಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಮೊದಲು ತಣ್ಣೀರು ಬಳಸಿ. ಬಿಸಿ ನೀರು ಬಳಸಬೇಡಿ.

ಯಾವುದೇ ರಾಸಾಯನಿಕ ಅಥವಾ ಮೇಲ್ಕಂಡ ಉಪಾಯಗಳನ್ನು ಬಳಸುವ ಮೊದಲು ಕಲೆ ಬಟ್ಟೆಯ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಪರೀಕ್ಷಿಸಿ ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.