ಅಡುಗೆ ಮಾಡಿದ ಬಳಿಕ ಪಾತ್ರೆಯನ್ನು ಎಷ್ಟು ಉಜ್ಜಿ ತೊಳೆದರೂ ಅದರೊಳಗೆ ಜಿಡ್ಡು ಹಾಗೂ ಕಲೆಗಳು ಉಳಿಯುವುದು ಸಾಮಾನ್ಯ. ಜಿಡ್ಡನ್ನು ಹೋಗಲಾಡಿಸಲು ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಪಾತ್ರೆಗಳನ್ನು ಫಳಫಳ ಹೊಳೆಯುವಂತೆ ಮಾಡಲು ಇಲ್ಲಿವೆ ಕೆಲವು ಸಲಹೆಗಳು.

ಬಿಸಿ ನೀರು ಬಳಕೆ

ಪಾತ್ರೆ ತೊಳೆದ ಬಳಿಕ ಜಿಡ್ಡು ಹಾಗೆ ಉಳಿದರೆ, ಸ್ವವ್ ಹಚ್ಚಿ ಅದರ ಮೇಲೆ ಜಿಡ್ಡು ಪಾತ್ರೆಯನ್ನು ಇಟ್ಟು ಅದಕ್ಕೆ ನೀರು ಹಾಕದೆ 5 ನಿಮಿಷ ಬಿಸಿ ಮಾಡಬೇಕು. ಫಾತ್ರೆ ಬಿಸಿ ಇದ್ದಾಗಲೇ ಅದಕ್ಕೆ 1–2 ಲೋಟ ನೀರು ಹಾಕಿ ಚೆಲ್ಲಾಬಹುದು ಅಥವಾ ಜಿಡ್ಡು ಹಿಡಿದ ಪಾತ್ರೆಯ ತುಂಬಾ ನೀರು ಹಾಕಿ ಅದನ್ನು ಚೆನ್ನಾಗಿ ಕುದಿಸುವುದರಿಂದ ಅದರೊಳಗೆ ಜಿಡ್ಡಿನಾಂಶ ತೆಗೆಯಲು ಸಹಕರಿಸುತ್ತದೆ.

ನಿಂಬೆಹಣ್ಣು ಮತ್ತು ಉಪ್ಪು

ನಿಂಬೆಹಣ್ಣಿನ ಅರ್ಧ ಹೋಳಿನ ಮೇಲೆ ಸ್ವಲ್ಪ ಕಲ್ಲು ಉಪ್ಪು ಸೇರಿಸಿ ಅದರಿಂದ ಜಿಡ್ಡು ಹಿಡಿದ ಪಾತ್ರೆಯನ್ನು ಉಜ್ಜಬೇಕು. ನಿಂಬೆಯಲ್ಲಿನ ಸಿಟ್ರಿಕ್ ಆಮ್ಲವು ಜಿಡ್ಡಿನ ಅಂಶವನ್ನು ತೆಗೆಯಲು ಉಪಯುಕ್ತವಾಗಿದೆ.

ಬೂದಿ, ಮಸಿ(ಇದ್ದಿಲು), ಮರುಳು ಮಿಶ್ರಿತ ಮಣ್ಣು, ಒಣ ಅಕ್ಕಿ ಹಿಟ್ಟು

ಬೂದಿ, ಇದ್ದಿಲನ್ನು ಕೂಡ ಬಳಸಿ ಪಾತ್ರೆ ಉಜ್ಜುವುದರಿಂದ ಎಣ್ಣೆಯ ಜಿಡ್ಡು ತೆಗೆದು ಹಾಕಬಹುದು. ಪಾತ್ರೆಯನ್ನು ಹೊಳೆಯುವಂತೆ ಮಾಡಲು ಈ ವಿಧಾನ ಸಹಕಾರಿಯಾಗಲಿದೆ.

ಒಣ ಅಕ್ಕಿ ಹಿಟ್ಟಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಪಾತ್ರೆ ತೊಳೆಯುವುದರಿಂದಲೂ ಜಿಡ್ಡನ್ನು ಹೋಗಲಾಡಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.