ಪರಿಸರವನ್ನು ರಕ್ಷಿಸಬೇಕು, ಹಸಿರು ಉಳಿಸಬೇಕು ಎಂದು ಬೀದಿಗಿಳಿದು ಹೋರಾಟ ಮಾಡುವ ಬದಲು ನಮ್ಮ ಮನೆಯಿಂದಲೇ ಪರಿಸರ ಸಂರಕ್ಷಣೆಗೆ ನಾಂದಿ ಹಾಡಿದರೆ ಪ್ರಕೃತಿಯನ್ನು ಉಳಿಸಬಹುದು.

ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಪ್ರತಿವರ್ಷ ಮೇ 22 ರಂದು ಅಂತರರಾಷ್ಟ್ರೀಯ ಜೀವ ವೈವಿಧ್ಯತೆ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ‘ಜಾಗತಿಕ ಪರಿಣಾಮಕ್ಕಾಗಿ ಸ್ಥಳೀಯವಾಗಿ ಕಾರ್ಯನಿರ್ವಹಿಸುವುದು’ ಎನ್ನುವುದು ವಿಶ್ವಸಂಸ್ಥೆಯ ಧ್ಯೇಯವಾಕ್ಯವಾಗಿದೆ. ಹೀಗಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ಆದ್ಯತೆಯಾಗಿರಬೇಕು.

ದೊಡ್ಡ ಮಟ್ಟದಲ್ಲಿ ಏನು ಮಾಡಲು ಸಾಧ್ಯವಿಲ್ಲದಿದ್ದರೂ ಮನೆಯ ಅಂಗಳದಲ್ಲಿ, ಟೆರೇಸ್ ಮೇಲೆ, ಬಾಲ್ಕನಿಯಲ್ಲಿ ಕೈತೋಟವನ್ನು ಮಾಡುವ ಮೂಲಕ ಮನೆಯ ಅಂದದ ಜೊತೆಗೆ ಪ್ರಕೃತಿಯ ಪುಟ್ಟ ತಾಣವಾಗಿ ಬದಲಾಯಿಸಬಹುದು. ನಗರಗಳಲ್ಲಿ ಇರುವವರಿಗೆ ಮನೆಯ ಬಳಿ ಹಸಿರು ನಳನಳಿಸಬೇಕು ಎನ್ನುವ ಆಸೆಯಂತೂ ಇರುತ್ತದೆ. ಪ್ರಕೃತಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಯಾವ ರೀತಿಯ ಗಿಡಗಳನ್ನು ಬೆಳೆಸಬಹುದು ಎನ್ನುವ ಸಿಂಪಲ್ ಟಿಪ್ಸ್ ಇಲ್ಲಿದೆ.

ವಾತಾವರಣಕ್ಕೆ ಹೊಂದಿಕೊಳ್ಳುವ ಸಸ್ಯಗಳನ್ನಿಡಿ

ಬಹುತೇಕರು ವಿದೇಶಿ ತಳಿಯ, ನೋಡಲು ಆಕರ್ಷಕವಾಗಿರುವ ಬಣ್ಣದ ಗಿಡಗಳನ್ನು ತಂದು ಇಡುತ್ತಾರೆ. ಆದರೆ ಇವುಗಳಿಂದ ಸ್ಥಳೀಯ ಹಕ್ಕಿ-ಕೀಟಗಳಿಗೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಸ್ಥಳೀಯ ಸಸ್ಯಗಳನ್ನು ತಂದು ಬೆಳೆಸಿ. ಉದಾಹರಣೆಗೆ ದಾಸವಾಳ, ಮಲ್ಲಿಗೆ, ಕನಕಾಂಬರ, ಕೃಷ್ಣ ತುಳಿಸಿ, ಅಲೋವೆರಾ (ಲೋಳೆಸರ), ಇನ್ಸುಲಿನ್ ಗಿಡಗಳನ್ನು ಬೆಳೆಸಬಹುದು. ಇವುಗಳಿಂದ ಶುದ್ಧವಾಗ ಗಾಳಿಯನ್ನೂ ಪಡೆಯಬಹುದು. ನಮ್ಮ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆ ಮತ್ತು ಸ್ಥಳೀಯ ಕೀಟಗಳಿಗೆ ಆಸರೆಯಾಗುತ್ತವೆ.

ರಾಸಾಯನಿಕ ಬಳಕೆ ಬೇಡ

ಸೇವಂತಿಗೆ, ಮಲ್ಲಿಗೆ, ಅಥವಾ ಚೆಂಡು ಹೂವಿನ ಗಿಡಗಳನ್ನು ಬೆಳೆಸಿ. ಆದರೆ ಗಿಡಗಳು ಚೆನ್ನಾಗಿ ಬೆಳೆಯಲಿ, ರಾಶಿ ರಾಶಿ ಹೂ ಬಿಡಲಿ ಎಂದು ರಾಸಾಯನಿಕ ಕೀಟನಾಶಕ ಸಿಂಪಡಿಸದಿರಿ. ಏಕೆಂದರೆ ಇದರಿಂದ ಜೇನು ನೊಣ, ಚಿಟ್ಟೆಯಂತ ಕೀಟಗಳು ಬರದೆ ಪರಾಗಸ್ಪರ್ಶ ಕ್ರಿಯೆಗೆ ಅಡ್ಡಿಯಾಗುತ್ತದೆ. ಗಿಡಗಳನ್ನು ಚೆನ್ನಾಗಿ ಎಳೆ ಬಿಸಿಲು ಬರುವಲ್ಲಿ ಇಡಿ, ಕಾಲಕಾಲಕ್ಕೆ ಪಾಟ್ ಮತ್ತು ಮಣ್ಣನ್ನು ಬದಲಾಯಿಸುತ್ತಿರಿ. ಇದರಿಂದ ಬಾಲ್ಕನಿಗೆ ಬಣ್ಣ ಬಣ್ಣದ ಚಿಟ್ಟೆಗಳು ಬರುವಂತೆ ಮಾಡಬಹುದು.

ಹಕ್ಕಿಗಳಿಗಾಗಿ ನೀರಿಡಿ

ಬಾಲ್ಕನಿಯಲ್ಲಿ, ಟೆರೇಸ್ ಮೇಲೆ ಅಥವಾ ಮನೆಯ ಹೊರಗೆ ನೀರನ್ನು ಇಡಿ. ಇದರಿಂದ ಪಕ್ಷಿಗಳು ಬಂದು ನೀರುಕುಡಿದು ಹೋಗುತ್ತವೆ. ಒಂದು ಮಣ್ಣಿನ ಪಾತ್ರೆಯಲ್ಲಿ ಪ್ರತಿದಿನ ಸ್ವಚ್ಛವಾದ ನೀರನ್ನು ಇಡಿ, ಮತ್ತೊಂದು ಪುಟ್ಟ ಬೌಲ್ನಲ್ಲಿ ನವಣೆ ಅಥವಾ ರಾಗಿ ಕಾಳುಗಳನ್ನು ಹಾಕಿಡಿ. ಮನೆಯ ಬಳಿಯೇ ಹಕ್ಕಿಗಳ ಕಲರವ ಕೇಳಬಹುದು.

ತರಕಾರಿ ತೋಟವನ್ನೂ ಮಾಡಬಹುದು

ಟೆರೇಸ್ ಮೇಲೆ ಅಥವಾ ಅಂಗಳದಲ್ಲಿ ಕೇವಲ ಹೂವಿನ ಗಿಡಗಳಷ್ಟೇ ಅಲ್ಲದೆ, ಅಡುಗೆಗೆ ಬಳಸುವ ಪುದೀನಾ, ಕೊತ್ತಂಬರಿ, ಹಸಿಮೆಣಸಿನಕಾಯಿ, ಕರಿಬೇವು ಮತ್ತು ದೊಡ್ಡಪತ್ರೆ ಗಿಡಗಳನ್ನು ಸುಲಭವಾಗಿ ಕುಂಡಗಳಲ್ಲಿ ಬೆಳೆಸಬಹುದು. ಬಾಲ್ಕನಿಯಲ್ಲೇ ಬೆಳೆದರೆ ಮನೆಯ ಒಳಾಂಗಣದ ಗಾಳಿಯನ್ನು ಶುದ್ಧಮಾಡುತ್ತದೆ, ಜತೆಗೆ ಬಾಲ್ಕನಿಯ ತೇವಾಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಹಸಿರು ಕಸದಿಂದ ಗೊಬ್ಬರ

ರಾಸಾಯನಿಕ ಗೊಬ್ಬರಗಳ ಬದಲಾಗಿ ಮನೆಯ ಅಡುಗೆಮನೆಯ ಹಸಿ ಕಸವನ್ನು ಅಂದರೆ ತರಕಾರಿ ಸಿಪ್ಪೆ, ಹಣ್ಣಿನ ತ್ಯಾಜ್ಯ, ಬಳಸಿದ ಚಹಾ ಪುಡಿಯನ್ನು ಕಸದ ಗಾಡಿಗೆ ಹಾಕುವ ಬದಲು, ಒಂದು ಸಣ್ಣ ಬಕೆಟ್ನಲ್ಲಿ ಗೊಬ್ಬರ ಮಾಡಿಕೊಳ್ಳಬಹುದು. ಇದು ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳನ್ನು ಜಾಗೃತಗೊಳಿಸಿ, ಮಣ್ಣಿನ ಫಲವತ್ತತೆಯನ್ನೂ ಹೆಚ್ಚಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.