ಮಂಗಳೂರು: ಯುರೋಪ್ ಮತ್ತು ಕೊಲ್ಲಿಯ 38 ರಾಷ್ಟ್ರಗಳಿಗೆ ದ್ವಿಚಕ್ರ ವಾನದಲ್ಲಿ ಪ್ರವಾಸ ಮಾಡಲು ಮುಂದಾಗಿರುವ ನಗರದ ಉದ್ಯಮಿ ಶರತ್ ಗ್ಯಾಬ್ರಿಯಲ್ ಶಿರಿ ಅವರ ಪ್ರಯಾಣ ಭಾನುವಾರ ಆರಂಭಗೊಂಡಿತು.

ಬಲ್ಮಠದ ಶಾಂತಿ ಕೆಥಡ್ರಿಲ್ ಬಳಿ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿ ಬಿನು ವರ್ಗೀಸ್ ಮತ್ತು ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಪ್ರವೇಶ ವಿಭಾಗದ ವ್ಯವಸ್ಥಾಪಕ ರೊನಾಲ್ಡ್ ಐವನ್ ಸೋನ್ಸ್ ಹಸಿರು ನಿಶಾನೆ ತೋರಿಸಿದರು. ಹವ್ಯಾಸಿ ಬೈಕ್ ಸವಾರರು ಮತ್ತು ಬೈಕಿಂಗ್ ಕ್ಲಬ್ಗಳ ಸದಸ್ಯರು ಪ್ರಯಾಣದ ಆರಂಭಕ್ಕೆ ಸಾಕ್ಷಿಯಾದರು.

ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿರುವ ಶರತ್ ಅವರು ಹೈದರಾಬಾದ್ ಮೂಲಕ ಮಧ್ಯಪ್ರದೇಶ, ಉತ್ತರಪ್ರದೇಶ ತಲುಪಿ ನೇಪಾಳ ಪ್ರವೇಶಿಸಲಿದ್ದಾರೆ. ಟಿಬೆಟ್, ಚೀನಾ, ಕಜಕಸ್ತಾನ, ರಷ್ಯಾ, ಲ್ಯಾಟ್ವಿಯಾ, ಲಿಥುವಾನಿಯ, ಪೋಲೆಂಡ್, ಜರ್ಮನಿ, ನೆದರ್ಲೆಂಡ್ಸ್, ಬೆಲ್ಜಿಯಂ, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಇಟಲಿ, ಆಸ್ಟ್ರಿಯ, ಹಂಗರಿ, ರೊಮಾನಿಯ, ಬಲ್ಗೇರಿಯ, ಟರ್ಕಿ, ಇರಾಕ್, ಕುವೈತ್, ಸೌದಿ ಅರೆಬಿಯ, ಬಹರೇನ್, ಕತಾರ್ ಮತ್ತು ದುಬೈಗೆ ಸಾಗಿ ಒಮಾನ್ನಿಂದ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಯಾಣ ಪೂರೈಸಲು 5ರಿಂದ 6 ತಿಂಗಳು ತಗುಲಲಿದ್ದು 35ರಿಂದ 40 ಸಾವಿರ ಕಿಲೊಮೀಟರ್ ವಾಹನ ಚಲಾಯಿಸಲಿದ್ದಾರೆ. ವಾಹನದಲ್ಲಿ ಭಾರತದ ರಾಷ್ಟ್ರಧ್ವಜ ಹಾಗೂ ತುಳುನಾಡ ಧ್ವಜವನ್ನು ಅಳವಡಿಸಲಾಗಿದೆ.

ಶರತ್ 2024ರಲ್ಲಿ ಬೈಕ್ನಲ್ಲಿ ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-271685461

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.