ಉತ್ತರ ಕನ್ನಡ ಜಿಲ್ಲೆ ಕರ್ನಾಟಕದ ಕಡಿಮೆ ಜನಸಾಂದ್ರತೆಯ ಪ್ರದೇಶಗಳಲ್ಲಿ ಒಂದಾಗಿದ್ದು, ಕರಾವಳಿ ಮತ್ತು ಘಟ್ಟ ಪ್ರದೇಶಗಳನ್ನು ಒಂದೇ ಮೈದಾಳಿನಲ್ಲಿ ಹೊಂದಿರುವ ತನ್ನದೇ ಆದ ವೈಶಿಷ್ಟ್ಯತೆಯಿಂದ ಗುರುತಿಸಿಕೊಂಡಿದೆ. ಈ ಭೂಭಾಗವು ಪ್ರಕೃತಿ ಸೌಂದರ್ಯದ ಅಡಗಿದ ಖಜಾನೆ ಎಂದೇ ಹೇಳಬಹುದು. ಹನ್ನೊಂದು ತಾಲ್ಲೂಕುಗಳಲ್ಲಿ ಯಲ್ಲಾಪುರ ತಾಲ್ಲೂಕು ತನ್ನ ನಿಸರ್ಗಸೌಂದರ್ಯಕ್ಕಾಗಿ ವಿಶೇಷವಾಗಿ ಮೆಚ್ಚುಗೆ ಪಡೆಯುತ್ತದೆ. ಜಲಪಾತಗಳು, ನದಿಗಳ ಕಣಿವೆಗಳು ಮತ್ತು ಹಸಿರು ಕಾನನಗಳು ಈ ಪ್ರದೇಶದ ವೈವಿಧ್ಯತೆಯನ್ನು ಇನ್ನಷ್ಟು ಮನಮೋಹಕವಾಗಿಸುತ್ತವೆ.

ಅಂತಹ ನಿಸರ್ಗದ ಮಡಿಲಿನಲ್ಲಿ ನೆಲೆಗೊಂಡಿರುವ ಜೇನುಕಲ್ಲು ಗುಡ್ಡ, ವಿಶಾಲವಾದ ಕಣಿವೆಯನ್ನು ವೀಕ್ಷಿಸಲು ಅವಕಾಶ ನೀಡುವ ಅದ್ಭುತ ತಾಣ. ಈ ಸ್ಥಳದತ್ತ ಪ್ರಯಾಣಿಸುವಾಗ ಕಣ್ಣಿಗೆ ಬೀಳುವ ಹಸಿರು ಕಾನನವೇ ಮೊದಲ ಆಕರ್ಷಣೆ. ದಶಕದ ಹಿಂದೆ ಈ ತಾಣವನ್ನು ಕಂಡವರಿಗೆ, ಇಂದಿನ ಸ್ವಲ್ಪ ಬದಲಾವಣೆಗಳು ಆಶ್ಚರ್ಯ ಮೂಡಿಸುವಂತಿವೆ–ಆದರೂ ಅದರ ಮೂಲ ಸೌಂದರ್ಯ ಕಳೆದುಕೊಂಡಿಲ್ಲ.

ಇಲ್ಲಿ ನಿರ್ಮಿಸಲಾದ ಎರಡು ಪರ್ಗೊಲಾಗಳು ಮತ್ತು ಒಂದು ವೀಕ್ಷಣಾ ವೇದಿಕೆ ಪ್ರವಾಸಿಗರಿಗೆ ಅನುಭವವನ್ನು ಇನ್ನಷ್ಟು ಸಮೃದ್ಧಗೊಳಿಸುತ್ತವೆ. ಪ್ರತಿದಿನವೂ ಇಲ್ಲಿ ಭೇಟಿ ನೀಡುವವರು ಅಪರೂಪದ ಸೂರ್ಯಾಸ್ತದ ಕ್ಷಣಗಳನ್ನು ಕಣ್ಣಲ್ಲಿ ತುಂಬಿಸಿಕೊಂಡೇ ಮರಳುತ್ತಾರೆ. ಕೆಲವರು ಗುಂಪುಗಳಲ್ಲಿ ಸೇರಿ ಕಾವ್ಯವಾಚನ, ಚರ್ಚೆಗಳು, ಅಭಿಪ್ರಾಯ ವಿನಿಮಯ ನಡೆಸುವುದು ಈ ತಾಣಕ್ಕೆ ವಿಶಿಷ್ಟ ಸಾಂಸ್ಕೃತಿಕ ಸ್ಪರ್ಶ ನೀಡುತ್ತದೆ.

ಆಧುನಿಕತೆಯ ಅತಿರೇಕದಿಂದ ದೂರವಾಗಿರುವ, ಮಾಲಿನ್ಯವಿಲ್ಲದ, ಅಂಗಡಿ-ಮುಂಗಟ್ಟುಗಳ ಗದ್ದಲವಿಲ್ಲದ ಈ ಜೇನುಕಲ್ಲು ಗುಡ್ಡ, ಪ್ರಕೃತಿಯನ್ನು ಅದರ ಸ್ವಾಭಾವಿಕ ರೂಪದಲ್ಲೇ ಅನುಭವಿಸಲು ಬಯಸುವವರಿಗೆ ಅಪರೂಪದ ತಾಣವಾಗಿ ಉಳಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-129139551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.