ಒತ್ತಡ ಜೀವನದಲ್ಲಿ ಒಂದಷ್ಟು ವಿರಾಮ ಬೇಕು, ಹೊಸ ಪರಿಸರದಲ್ಲಿ ಕಾಲ ಕಳೆಯಬೇಕು ಎನ್ನುವ ಕಾರಣಕ್ಕೆ ಅನೇಕರು ಟ್ರೆಕ್ಕಿಂಗ್, ಸಫಾರಿ, ಮೃಗಾಲಯ, ಆನೆ ಶಿಬಿರಗಳಿಗೆ ಹೋಗುವುದು ಸಹಜ. ದಟ್ಟಾರಣ್ಯದ ನಡುವೆ ನಡೆದಾಡುವುದೇ ಒಂದು ಸೋಜಿಗ. ಸಫಾರಿಗೆಂದು ಹೋದರೆ ತರಹೇವಾರಿ ಕಾಡು ಪ್ರಾಣಿಗಳು, ಅವುಗಳ ಚಲನವಲನಗಳನ್ನು ಕಣ್ತುಂಬಿಕೊಳ್ಳಬಹುದು.

ಸಂತಸದ ಸಮಯ ಎಂದಿಗೂ ದುರಂತಕ್ಕೆ ಎಡೆ ಮಾಡಿಕೊಡಬಾರದು. ಹೀಗಾಗಿ ಪ್ರವಾಸಕ್ಕೆ ಹೋದಾಗ ಜಾಗರೂಕರಾಗಿರುವುದೂ ಮುಖ್ಯವಾಗಿರುತ್ತದೆ.
.ದುಬಾರೆಯಲ್ಲಿ ಸಾಕಾನೆಗಳ ಕಾದಾಟದ ನಡುವೆ ಸಿಲುಕಿ ಮಹಿಳೆ ಸಾವು, ಪತಿ-ಮಗು ಪಾರು.
ಸಫಾರಿ ಅಥವಾ ಪ್ರಾಣಿಗಳ ಭೇಟಿಗೆ ಹೋದಾಗ ಪಾಲಿಸಲೇಬೇಕಾದ ವಿಚಾರಗಳು...

ಪ್ರಾಣಿಗಳು ಎಷ್ಟೇ ನಾಜೂಕಾಗಿವೆ ಎಂದರೂ ಕಾಡು ಪ್ರಾಣಿಗಳು ಎಂದಿಗೂ ಅಪಾಯಕಾರಿಯೇ ಆಗಿರುತ್ತವೆ. ಹೀಗಾಗಿ ಆದಷ್ಟು ದೂರದಿಂದಲೇ ಅವುಗಳನ್ನು ಕಣ್ತುಂಬಿಕೊಳ್ಳುವುದು ಒಳ್ಳೆಯದು.

ಫೋಟೊ, ವಿಡಿಯೊ ನೆಪದಲ್ಲಿ ಮೈಮರೆತು ಪ್ರಾಣಿಗಳ ಬಳಿ ಸಾಗದಿರಿ.

ಪ್ರಾಣಿಗಳ ಪಾಲಕರಿಲ್ಲದೆ ಆಹಾರ ನೀಡುವ ಅಥವಾ ಅವುಗಳನ್ನು ಮುಟ್ಟುವ ಪ್ರಯತ್ನಕ್ಕಂತೂ ಹೋಗಲೇಬೇಡಿ.

ಚೇಷ್ಟೆ, ಕೂಗಾಟದಿಂದ ಪ್ರಾಣಿಗಳು ಉದ್ರೇಕಗೊಳ್ಳಬಹುದು, ಹೀಗಾಗಿ ಎಚ್ಚರಿಕೆಯಿರಲಿ.

ಸಫಾರಿ ವಾಹನದಲ್ಲಿ ಹೋಗುವಾಗ ಗೈಡ್ ಅಥವಾ ಡ್ರೈವರ್ ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಕೆಳಕ್ಕೆ ಇಳಿಯದಿರಿ.

ಅರಣ್ಯ ಪ್ರವಾಸದಲ್ಲಿ ಮಾಡಲೇಬಾರದ ಕೆಲಸಗಳಿವು...

ಎಷ್ಟೆಂದರೂ ಕಾಡೆನ್ನುವುದು ಅಲ್ಲಿ ವಾಸಿಸುವ ಪ್ರಾಣಿಗಳಿಗೆ ಮೀಸಲಾದ ಜಾಗವಾಗಿರುತ್ತದೆ. ಹೀಗಾಗಿ ಶಿಸ್ತು ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತದೆ.

ಜೋರಾಗಿ ಕೂಗುವುದು, ಮೋಜಿಗಾಗಿ ಸ್ಪೀಕರ್ಗಳ ಬಳಕೆ

ರಾತ್ರಿ ಕಾಡಿನಲ್ಲೇ ಉಳಿದು ಫೈರ್ ಕ್ಯಾಂಪ್ ಹಾಕುವುದು

ಕುತೂಹಲದಿಂದ ಅಪಾಯಕಾರಿ ಜಾಗಗಳಿಗೆ ಹೋಗುವುದು

ಎಲ್ಲೆಂದರಲ್ಲಿ ಕಸಗಳನ್ನು ಎಸೆಯವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.