ನಾನು ಶೂಟಿಂಗ್ನಲ್ಲಿ ಇದ್ದಾಗಷ್ಟೇ ಮೇಕಪ್ ಹಾಕಿಕೊಳ್ಳುತ್ತೇನೆ. ಅದುಬಿಟ್ಟರೆ ಯಾವುದೇ ಸಮಾರಂಭಕ್ಕೂ ಮೇಕಪ್ ಮಾಡುವುದಿಲ್ಲ. ಆದಷ್ಟೂ ನೈಜವಾಗಿರಲು ಬಯಸುತ್ತೇನೆ. ಶೂಟಿಂಗ್ ಇಲ್ಲವೆಂದರೆ ಸದಾ ತಲೆಗೆ ಎಣ್ಣೆ ಹಚ್ಚಿಕೊಂಡೇ ಇರುತ್ತೇನೆ. ಸಾಮಾನ್ಯವಾಗಿ ಹರಳೆಣ್ಣೆ ಹಚ್ಚುತ್ತೇನೆ. ವಾರಕ್ಕೆ ಎರಡು ಬಾರಿ ತಲೆಸ್ನಾನ ಮಾಡುತ್ತೇನೆ. ಅಮ್ಮ ಕೂದಲಿಗೆಂದು ಈರುಳ್ಳಿ, ಕರಿಬೇವು ಹಾಕಿ ತಯಾರಿಸುವ ವಿಶೇಷವಾದ ಎಣ್ಣೆಯನ್ನು ಹಚ್ಚಿಕೊಳ್ಳುತ್ತೇನೆ.

ಸಾಮಾನ್ಯವಾಗಿ ಚರ್ಮಕ್ಕೆ ಐಸ್ವಾಟರ್ ಮೂಲಕ ಕ್ಲೆನ್ಸ್ ಮಾಡಿಕೊಳ್ಳುತ್ತೇನೆ. ಕಡಲೆಹಿಟ್ಟು, ಅರಸಿನ ಸೇರಿಸಿದ ಫೇಸ್ಪ್ಯಾಕ್ ಆಗಾಗ್ಗೆ ಮಾಡಿಕೊಳ್ಳುತ್ತೇನೆ. ಚರ್ಮ ಮತ್ತು ಕೂದಲು ಚೆನ್ನಾಗಿರಬೇಕು ಎಂದರೆ ತರಕಾರಿ ಮತ್ತು ಹಣ್ಣುಗಳ ಸೇವನೆ ಹೆಚ್ಚು ಮಾಡಬೇಕು. ಆದರೆ ನನಗೆ ತರಕಾರಿ ಅಷ್ಟು ಇಷ್ಟ ಆಗದು. ಹಾಗಾಗಿ, ಆ್ಯಪಲ್, ಪಪ್ಪಾಯಿ, ದಾಳಿಂಬೆಯನ್ನು ಹೆಚ್ಚು ತಿನ್ನುತ್ತೇನೆ. ಕರಿಬೇವನ್ನು ಹಾಗೇ ತಿನ್ನುವುದು ಸಹ ಒಳ್ಳೆಯದು. ಒಂದು ಲೋಟ ಬಿಸಿನೀರು ಕುಡಿದು ದಿನವನ್ನು ಆರಂಭಿಸುತ್ತೇನೆ. ನಂತರ ಸ್ವಲ್ಪವಾಕ್ ಮಾಡುತ್ತೇನೆ. ಒಂದೂವರೆ ಗಂಟೆ ಈಜುತ್ತೇನೆ. ಅದು ಬಿಟ್ಟರೆ ಸ್ಕಿಪಿಂಗ್, ಸೈಕ್ಲಿಂಗ್ ಮಾಡುತ್ತೇನೆ. ಇದು ನಾನು ಫಿಟ್ ಆಗಿರುವಂತೆ ಮಾಡಲು ಸಹಕಾರಿಯಾಗಿದೆ. ಎಷ್ಟೇ ಇಷ್ಟವಾದ ತಿಂಡಿಯಾದರೂ ನಾನು ತಿನ್ನುವ ಪ್ರಮಾಣ ತುಂಬಾ ಕಡಿಮೆ. ಸ್ವಲ್ಪ ತಿಂದರೂ ನನಗೆ ಹೊಟ್ಟೆ ತುಂಬಿಬಿಡುತ್ತದೆ. ಇದು ಕೂಡ ನನ್ನ ಫಿಟ್ನೆಸ್ಗೆ ಸಹಕಾರಿಯಾಗಿದೆ.

ಅಮ್ಮ ಹೇಳ್ತಾಳೆ...

ಕತ್ತರಿಸಿದ ಆಲೂಗಡ್ಡೆಯು ಕಂದು ಬಣ್ಣಕ್ಕೆ ತಿರುಗುವುದನ್ನು ತಡೆಯಬೇಕೆ? ಹಾಗಿದ್ದರೆ, ಮೊದಲು ತಣ್ಣೀರಿನಲ್ಲಿ ಆಲೂಗಡ್ಡೆಯ ತುಂಡುಗಳನ್ನು ಮುಳುಗಿಸಿ, ನಂತರ ಅಡುಗೆಗೆ ಬಳಸಬೇಕು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-871471384

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.