ಎಲ್ಲರ ಬದುಕಿನಲ್ಲೂ ಅಮ್ಮ– ಅಪ್ಪನ ಸ್ಥಾನವನ್ನು ತುಂಬುವುದಕ್ಕೆ ಬೇರೆ ಯಾರಿಗೂ ಸಾಧ್ಯವೇ ಇಲ್ಲ. ಈಗಿನ ಪೀಳಿಗೆಯಲ್ಲಿ ಬಹುತೇಕ ಹೆಣ್ಣುಮಕ್ಕಳು ಹೊರಗೆ ದುಡಿಯುತ್ತಾರೆ. ಎಲ್ಲವನ್ನೂ ನಿಭಾಯಿಸುತ್ತಾರೆ. ಆದರೆ, ನನ್ನಮ್ಮ ಮನೆ, ಮಕ್ಕಳು, ಅವರ ಬೇಕು–ಬೇಡಗಳನ್ನೆಲ್ಲ ಅರ್ಥ ಮಾಡಿಕೊಂಡು, ಅವರಿಗೆ ಭಾವನಾತ್ಮಕ ಬೆಂಬಲ ನೀಡುತ್ತಾ ನಮ್ಮನ್ನೆಲ್ಲ ಬೆಳೆಸಿದ ರೀತಿ ನನ್ನೊಳಗೆ ಸದಾ ಅಚ್ಚರಿಯನ್ನು ಉಂಟು ಮಾಡುತ್ತದೆ.

ಇವತ್ತಿಗೂ ನನ್ನ ಅಮ್ಮ ನನ್ನ ಬದುಕಿನಲ್ಲಿ ಬಹುದೊಡ್ಡ ಪಾತ್ರವನ್ನೇ ವಹಿಸುತ್ತಿದ್ದಾರೆ. ಚಿತ್ರೀಕರಣಕ್ಕಾಗಿ ದಿನ ನಿಗದಿ ಮಾಡುವುದರಿಂದ ಹಿಡಿದು, ಮಾಡಿದ ಕೆಲಸಕ್ಕೆ ದುಡ್ಡು ಬಂತೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡುವವರೆಗೂ ಅಮ್ಮ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಅಷ್ಟೇಅಲ್ಲ ನಾನು ಏನು ಊಟ ಮಾಡುತ್ತಿದ್ದೇನೆ, ಅದರಲ್ಲಿ ಪ್ರೋಟೀನ್ ಇದೆಯೇ ಎಂಬುದನ್ನು ಖುದ್ದು ಪರಿಶೀಲನೆ ಮಾಡುತ್ತಾರೆ. ಹೊರಗೆ, ಶೂಟಿಂಗ್ನಲ್ಲಿ ಊಟ ಮಾಡುವುದು ಅಷ್ಟು ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ ಸ್ವತಃ ಮನೆಯಲ್ಲಿ ಪ್ರೋಟೀನ್ ಪುಡಿಯನ್ನು ತಯಾರಿಸಿ ಕೊಡುತ್ತಾರೆ. ಹೀಗೆ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಅಮ್ಮ ಮಾಡುವ ಕಾಳಜಿಗೆ ಅವರಷ್ಟೇ ಸಾಟಿ ಎಂದು ಮಾತ್ರ ಹೇಳಬಲ್ಲೆ.

ನಾವು ಚಿಕ್ಕಮಕ್ಕಳಾಗಿದ್ದಾಗ ತುತ್ತು ಉಣಿಸುವುದು ಬೇರೆ. ಆದರೆ, ಈಗಲೂ ಅಂತಹ ಕಾಳಜಿ ತೋರಿಸುವುದು ಇದೆಯಲ್ಲ, ಅದಕ್ಕೆ ದೊಡ್ಡ ಮಟ್ಟದ ಜೀವನಪ್ರೀತಿ ಇರಲೇಬೇಕಾಗುತ್ತದೆ. ನಾನು ಎಷ್ಟು ಪ್ರಯತ್ನಪಟ್ಟರೂ ಅಳವಡಿಸಿಕೊಳ್ಳಲು ಸಾಧ್ಯವೇ ಆಗದಂತಹ ಅಮ್ಮನ ಗುಣವೆಂದರೆ ವಿಪರೀತ ಶುಚಿ. ಸ್ವಚ್ಛತೆಯೇ ಅಮ್ಮನ ಸದಾಕಾಲದ ಧ್ಯಾನ. ಹಾಲು ಕಾಯಿಸುವಾಗ ಒಂದು ಚೂರು ಉಕ್ಕಿದರೂ ಗ್ಯಾಸ್ ಕಟ್ಟೆಯನ್ನು ಮೂರು ಬಾರಿ ಸ್ವಚ್ಛ ಮಾಡುತ್ತಾರೆ. ಅಡುಗೆ ಮಾಡುವಾಗ ಇತ್ತ ತೆಗೆದಿಟ್ಟುಕೊಂಡ ಉಪ್ಪಿನ ಡಬ್ಬಿಯನ್ನು ಮುಚ್ಚದೇ ಬಿಟ್ಟಿದ್ದರೆ, ಸ್ವಲ್ಪ ಸಮಯ ನೋಡುತ್ತಾರೆ; ತಕ್ಷಣವೇ ಅದನ್ನು ಮುಚ್ಚಿ ಅದರ ಜಾಗದಲ್ಲಿ ಇಟ್ಟುಬಿಡುತ್ತಾರೆ. ಅವರ ಶುಚಿ, ಅಚ್ಚುಕಟ್ಟುತನವನ್ನು ನಾನು ನೋಡಬಹುದಷ್ಟೆ, ಕಲಿಯಲು ಸಾಧ್ಯವೇ ಆಗದು.

ಏಳು ತಿಂಗಳ ಹಿಂದೆ ನನ್ನ ತಂದೆಗೆ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಅದೇ ಹೊತ್ತಿಗೆ ನನ್ನ ತಂಗಿಗೆ ಎರಡನೇ ಮಗು ಹುಟ್ಟಿತ್ತು. ಒಂದು ಕಡೆ, ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಪ; ಮತ್ತೊಂದು ಕಡೆ, ಬಾಣಂತಿ ಮಗಳು ಇಬ್ಬರನ್ನೂ ಕಕ್ಕುಲಾತಿಯಿಂದ ಸಲಹಿದರು ಅಮ್ಮ. ಎಲ್ಲ ಸವಾಲುಗಳ ನಡುವೆ ಕೌಟುಂಬಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ಗಟ್ಟಿತನವೊಂದು ಇರಲೇಬೇಕಾಗುತ್ತದೆ. ಆ ಗಟ್ಟಿತನವೇ ನನ್ನಮ್ಮ.

ಆದರೆ ಅಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಮಾತ್ರ ಸದಾ ಹಿಂದೆ. ನನಗೆ ಬುದ್ಧಿ ಬಂದಾಗಿನಿಂದ, ಅವಳು ಹೇಗೆ ನಮ್ಮನ್ನೆಲ್ಲ ಮುದ್ದು ಮಾಡಿದಳು ಎಂಬುದರ ಚಿತ್ರಣವೇ ನೆನಪಿಗೆ ಬರುವುದಿಲ್ಲ. ಅಪ್ಪಿ ಮುದ್ದು ಮಾಡುತ್ತಾ, ಲಲ್ಲಗರೆಯುವುದರಲ್ಲಿ ಅಮ್ಮ ತುಸು ಹಿಂದೆಯೇ ಅಂತ ಆಗಾಗ್ಗೆ ಅನ್ನಿಸುವುದುಂಟು. ನಾನು ಭರತನಾಟ್ಯ ತರಗತಿಗಳನ್ನು ನಡೆಸುತ್ತೇನೆ. ಕಳೆದ ಫೆಬ್ರುವರಿಯಲ್ಲಿ ಈ ನನ್ನ ಸಂಸ್ಥೆಗೆ ಎರಡು ವರ್ಷ ತುಂಬಿತು. ಆ ಹೊತ್ತಿನಲ್ಲಿ, ನನ್ನ ಬದುಕೇ ಆಗಿರುವ ಅಪ್ಪ–ಅಮ್ಮನಿಗೆ ಸನ್ಮಾನದ ಗೌರವ ನೀಡುವ ಭಾಗ್ಯ ಒದಗಿಬಂದಿತ್ತು. ಆ ಕ್ಷಣ ಅಮ್ಮನ ಕಣ್ಣುಗಳಲ್ಲಿ ಸಾರ್ಥಕದ ಕಣ್ಣಹನಿ ಜಿನುಗಿದ್ದು ನೋಡಿ ಮನಸ್ಸು ತುಂಬಿಬಂತು.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-890264362

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.