ಚರ್ಮ ಮತ್ತು ಕೂದಲಿಗೆ ಮೊದಲಿನಿಂದಲೂ ವಿಶೇಷ ಆರೈಕೆಯನ್ನೇನೂ ನಾನು ಮಾಡುವುದಿಲ್ಲ. ದೇಹಕ್ಕೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ. ಅದರಲ್ಲಿಯೂ ಈ ಬೇಸಿಗೆಯಲ್ಲಿ ನೀರಿಗೆ ಮಹತ್ವ ಕೊಡಬೇಕು. ದಿನಕ್ಕೆ ಮೂರೂವರೆ ಲೀಟರ್ ನೀರನ್ನು ಕುಡಿಯುತ್ತೇನೆ. ಎಲ್ಲೇ ಹೋದರೂ ಯಾವುದೇ ಕಾಲದಲ್ಲಿಯೂ ಇಷ್ಟು ಪ್ರಮಾಣದ ನೀರು ಕುಡಿಯುವುದನ್ನು ತಪ್ಪಿಸುವುದಿಲ್ಲ. ಜತೆಗೆ ಗ್ರೀನ್ ಟೀ ಕುಡಿಯುತ್ತೇನೆ. ಪಾಲಾಕ್ ಸೊಪ್ಪಿನ ರಸವನ್ನು ಆಗಾಗ್ಗೆ ಸೇವಿಸುತ್ತೇನೆ. ಇದು ಚರ್ಮವನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ.

ಯಾವಾಗಾದರೊಮ್ಮೆ ಫೇಸ್ ಲೇಸರ್ ಮಾಡಿಸುತ್ತೇನೆ. ಫೇಷಿಯಲ್ ಮಾಡಿಸುವುದಿಲ್ಲ. ತಿಂಗಳಿನಲ್ಲಿ ಹದಿನೈದು ದಿನ ಎಬಿಸಿ(ಆಮ್ಲ, ಬೀಟ್ರೂಟ್, ಕ್ಯಾರೆಟ್) ಜ್ಯೂಸ್ ಕುಡಿದರೆ ಹೆಚ್ಚು. ಚರ್ಮ ನಳನಳಿಸಲು ತಾಜಾ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ತಿನ್ನುತ್ತೇನೆ. ಇದು ಬಿಟ್ಟರೆ ನಿರ್ದಿಷ್ಟವಾಗಿ ಮನೆ ಮದ್ದು ಎಂದು ಏನನ್ನೂ ಮಾಡುವುದಿಲ್ಲ.

ಕೂದಲಿಗೆ ನಿತ್ಯ ಎಣ್ಣೆ ಹಚ್ಚುವ ಪೈಕಿಯವಳಲ್ಲ. ಅಮ್ಮ ನನ್ನ ಜತೆ ಇದ್ದಾಗಷ್ಟೇ ಅವರು ನನ್ನ ಕೂದಲಿಗೆ ಎಣ್ಣೆ ಹಚ್ಚುತ್ತಾರೆ. ನಾನು ಸಲೂನ್ಗೆ ಹೋಗಿ ಹೇರ್ವಾಷ್ ಮಾಡಿಸಿಕೊಳ್ಳುತ್ತೇನೆ. ತುಂಬಾ ತುರ್ತು ಇದ್ದಾಗ ಮಾತ್ರ ಮನೆಯಲ್ಲಿ ಹೇರ್ವಾಷ್ ಮಾಡಿಕೊಳ್ಳುತ್ತೇನೆ. ಇದು ಬಿಟ್ಟರೆ ಹದಿನೈದು ದಿನಗಳಿಗೊಮ್ಮೆ ಹೇರ್ಸ್ಪಾ ಮಾಡಿಸುತ್ತೇನೆ.

ನಿತ್ಯ ಬೆಳಿಗ್ಗೆ ಬಿರುಸು ನಡಿಗೆಯಿಂದ ದಿನ ಆರಂಭ ಗೊಳ್ಳುತ್ತದೆ. ತಿಂಗಳಲ್ಲಿ ಇಪ್ಪತ್ತು ದಿನಗಳಾದರೂ ಜಿಮ್ಗೆ ಹೋಗುತ್ತೇನೆ. ವ್ಯಾಯಾಮದ ಮೂಲಕ ದೇಹವನ್ನು ದಂಡಿಸುವುದರಿಂದ ಮನಸ್ಸು ನಿರಾಳವಾಗುತ್ತದೆ. ಮನಸ್ಸಿನ ಕಲ್ಮಶಗಳು ಹೊರ ಹೋದಂತೆ ದೇಹ ತಾನಾಗಿಯೇ ಹೊಳಪು ಪಡೆಯುತ್ತದೆ. ಮನಸ್ಸಿಗೆ ಶಾಂತಿ ಇದ್ದಾಗಷ್ಟೇ ಕಣ್ಣು ಮತ್ತು ಚರ್ಮದಲ್ಲಿ ಹೊಳಪು ಬರುತ್ತದೆ. ಬದುಕಿನಲ್ಲಿ ನೆಮ್ಮದಿ ಇಲ್ಲವಾದರೆ ಯಾವುದೇ ದುಬಾರಿ ಕ್ರೀಮ್ಗಳೂ ಪ್ರಯೋಜನಕ್ಕೆ ಬಾರವು. ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಸರಿಯಾದ ಮಾರ್ಗದಲ್ಲಿ ನಿವಾರಿಸಿಕೊಳ್ಳದೇ ಇದ್ದರೆ ಅದು ಮುಖದಲ್ಲಿ ಎದ್ದು ಕಾಣುತ್ತದೆ.

ಎಲ್ಲರಿಗೂ ವಯಸ್ಸಾಗುತ್ತದೆ. ಮಾಗುವ ಪ್ರಕ್ರಿಯೆಯಲ್ಲಿ ಒಂದು ಸಹಜತನವಿದೆ. ಅದಕ್ಕೆ ತೊಂದರೆಯಾಗದಂತೆ ಬದುಕುವುದು ಬಹಳ ಮುಖ್ಯ. ಏನೇನೋ ಕೃತಕ ಪ್ರಸಾಧನ ಸಾಮಗ್ರಿಗಳನ್ನು ಬಳಸುವುದು, ವಯಸ್ಸನ್ನು ಮರೆಮಾಚಲು ಬೊಟೊಕ್ಸ್, ಫಿಲ್ಲರ್ಸ್ಗಳನ್ನು ಮಾಡಬಹುದು. ಆದರೆ ಅವೆಲ್ಲ ತಾತ್ಕಾಲಿಕ. ಅನುಭವಗಳಿಂದ ಮಾಗಿದಂತೆ ಕಂಡಾಗ, ವಯಸ್ಸಾದರೂ ಸಹಜವಾಗಿಯೇ ಸುಂದರವಾಗಿ ಕಾಣುತ್ತೇವೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-884617460

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.