ತಾಯಿಯೆಂದರೆ ಕೇವಲ ಪದವಲ್ಲ ಅದೊಂದು ಪ್ರಪಂಚ. ಮಗುವಿನ ಅಕ್ಕರೆಯ ಆರೈಕೆ, ಲಾಲನೆ, ಪಾಲನೆ, ಪೋಷಣೆಗಾಗಿ ತನ್ನನ್ನೇ ಮುಡಿಪಾಡಿಗಿಡುವ ನಿಶ್ಕಲ್ಮಶ ಜೀವವದು. ಅಂತಹದೊಂದು ನಲ್ಮೆಯ ಬಂಧದ ಬಗ್ಗೆ ಚಂದನವನದ ಚೆಲುವೆ ಭಾವನಾ ರಾಮಣ್ಣ 'ಪ್ರಜಾವಾಣಿ' ಜೊತೆ ಮಾತನಾಡಿದ್ದಾರೆ.

ಸದ್ಯ ಮಗಳೆಂಬ ಮುದ್ದನ್ನು ಆರೈಕೆ ಮಾಡುತ್ತಿರುವ ಅವರು, ತಾಯ್ತನದ ಸುಖದಲ್ಲಿದ್ದಾರೆ. ಅಮ್ಮನೆಂಬ ಪಟ್ಟ ನೀಡಿದ ‘ರುಕ್ಮಿಣಿ’ಯ ಪ್ರಪಂಚದಲ್ಲಿರುವ ಭಾವನಾ ತಂತ್ರಜ್ಞಾನದ ಸಾರ್ಥಕ ಬಳಕೆಯಿಂದ ತಾಯಿಯಾಗುವ ನಿರ್ಧಾರ ಕೈಗೊಂಡದ್ದು ಹೇಗೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.
.ವೀರ್ಯದಾನದಿಂದ ಕೃತಕ ಗರ್ಭಧಾರಣೆ: ಹೊಸಗಾಲದ ಹಸುಮಕ್ಕಳ ಹರಸಿ....ಮಗಳ ನಾಮಕರಣ ಸಂಭ್ರಮದಲ್ಲಿ ನಟಿ ಭಾವನಾ ರಾಮಣ್ಣ.
‘ಮಗು ಹುಟ್ಟಿದಾಕ್ಷಣ ಭಾವೋತ್ಕಟತೆಯಲ್ಲಿ ಕಣ್ಣೀರು ಸುರಿಯತ್ತಲೇ ಇತ್ತು. ಅವಳನ್ನು ಎತ್ತಿ ಮುದ್ದಾಡುವ ತುಡಿತವಿತ್ತು. ಆದರೆ 10 ದಿನಗಳ ನಂತರ ಅವಳನ್ನು ಎತ್ತಿಕೊಂಡಿದ್ದೆ. ಆ ಸ್ಪರ್ಶ ಹೊಸ ಅನುಭವ ನೀಡಿತ್ತು. ಮೊದಲೆಲ್ಲ ನನ್ನದೇ ಆಲೋಚನೆಯಲ್ಲಿ ದಿನಚರಿ ಆರಂಭವಾಗುತ್ತಿತ್ತು. ಬೆಳಿಗ್ಗೆ ಎದ್ದಾಕ್ಷಣ ವ್ಯಾಯಾಮ, ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ, ಆದರೀಗ ಅವಲ್ಲವೂ ಬದಲಾಗಿದೆ, ಆದ್ಯತೆಯಾಗಿ ಮಗಳಿದ್ದಾಳೆ. ಮಗುವಿಗೆ ಹಸಿವಾಗಿರಬಹುದು, ಏನು ತಿನ್ನಿಸಬೇಕು ಎನ್ನುವ ಯೋಚನೆಯಿಂದಲೇ ದಿನ ಆರಂಭವಾಗುತ್ತದೆ.

ರುಕ್ಮಿಣಿ ಬಂದ ಕಾರಣ ಈ ವರ್ಷ ಅಮ್ಮಂದಿರ ದಿನ ನನ್ನ ಪಾಲಿಗೆ ವಿಶೇಷವಾಗಿದೆ. ಪ್ರತಿ ಹೆಣ್ಣು ತಾಯಿಯಾಗುವ ಅಥವಾ ತಾಯಿಯಾದ ಮೇಲಿನ ಅನುಭವವನ್ನು ಪಡೆಯಲೇಬೇಕು. ಬೇರೆ ಯಾರಿಂದಲೂ ಎಷ್ಟೇ ಪ್ರೀತಿ ಸಿಕ್ಕರೂ ಈ ಅನುಭವದ ಮುಂದೆ ಬೇರೆ ಯಾವುದೂ ಇಲ್ಲ.

ನನ್ನ ಅಮ್ಮನಿಂದ ನಾನು ಸಾಕಷ್ಟು ಪ್ರೀತಿ ಪಡೆದಿದ್ದೇನೆ, ನನ್ನ ಮಗಳಿಗೂ ನನ್ನ ಬಳಿ ಎಷ್ಟು ಸಾಧ್ಯವೋ ಅಷ್ಟೂ ಪ್ರೀತಿ ನೀಡಬಲ್ಲೆ. ಅಲ್ಲದೆ ನನ್ನಮ್ಮನಿಂದ ಕಲಿತ ಅಮೂಲ್ಯ ಪಾಠವೆಂದರೆ ಆರೈಕೆ ವಿಧಾನ. ಹೀಗಾಗಿ ನನ್ನಷ್ಟೂ ಆರೈಕೆ, ಪೋಷಣೆ, ಸಮಯ ರುಕ್ಮಿಣಿಗೇ ಮೀಸಲು.

ಮೊದಲೆಲ್ಲ ಆತ್ಮವಿಶ್ವಾಸದಿಂದ, ಗಟ್ಟಿಯಾಗಿ ಇರಬೇಕು ಅಥವಾ ಹೀಗೇ ಇರಬೇಕು ಎಂದುಕೊಳ್ಳುತ್ತೇವೆ, ಆದರೆ ತಾಯಿಯಾದ ಮೇಲೆ ಅದ್ಯಾವುದನ್ನೂ ಅಂದುಕೊಂಡು ಬೆಳೆಸಿಕೊಳ್ಳಬೇಕಿಲ್ಲ. ನಮ್ಮೊಳಗೆ ಅದು ಬೆಳೆದಿರುತ್ತದೆ. ಮಗು ಹುಟ್ಟಿದ ಮೇಲೆ ಪರಿಪೂರ್ಣತೆ, ತೃಪ್ತಿಯ ಭಾವನೆ ಬೇರೂರಿರುತ್ತದೆ.

ಐವಿಎಫ್ ಮೂಲಕ ಮಗು ಪಡೆಯುವ ಬಗ್ಗೆ ಸುಮಾರು ಐದಾರು ವರ್ಷಗಳಿಂದ ಯೋಚಿಸುತ್ತಲೇ ಇದ್ದೆ. ಜನ ಏನೆಂದುಕೊಳ್ಳುತ್ತಾರೋ, ಹೇಗೆ ಸ್ವೀಕರಿಸುತ್ತಾರೋ ಎನ್ನುವ ಭಯವಿತ್ತು. ಕಾನೂನು ಕೂಡ ಪರವಾಗಿಯೇ ಇರುವ ಕಾರಣ ಅಳುಕಿನ ನಡುವೆಯೂ ಧೈರ್ಯವಿತ್ತು. ಉತ್ತಮ ವೈದ್ಯರ ಮಾರ್ಗದರ್ಶನ, ಸಲಹೆ ಕೂಡ ಸಿಕ್ಕಿತು. ಹೀಗಾಗಿ ನಿರ್ಧಾರ ಎಷ್ಟು ಮುಖ್ಯವೋ ಉತ್ತಮ ವೈದ್ಯರನ್ನು ಸರಿಯಾದ ಸಮಯಕ್ಕೆ ಸಂಪರ್ಕಿಸುವುದು ಅಷ್ಟೇ ಮುಖ್ಯ.

ಮಗುವಾದ ಮೇಲೆ ಸಮಾಜ ಕೂಡ ಒಪ್ಪಿಕೊಂಡಿದೆ. ಅದರ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ, ಬದಲಾಗಿ ಹೆಮ್ಮೆಪಡುತ್ತಿದ್ದಾರೆ. ನನ್ನ ಮಗು ಒಂದೊಳ್ಳೆ ವಾತಾವರಣದಲ್ಲಿ ಬೆಳೆಯುತ್ತಿದೆ ಎನ್ನುವ ಖುಷಿಯಿದೆ. ರುಕ್ಮಿಣಿಯ ಅಮ್ಮನಾದ ಬಗ್ಗೆ ಹೆಮ್ಮೆಯಿದೆ.

ಮಗಳ ಮುಂದಿನ ಜೀವನದ ಬಗೆಗಿನ ಕನಸೆಂದರೆ ಆಕೆಗೆ ಭರತನಾಟ್ಯ, ಸಂಗೀತ ಕಲಿಸಬೇಕೆಂದಿದೆ. ಅದರ ಹೊರತಾಗಿ ಯಾವ ಶಾಲೆಗೆ ಹೋದರೂ ಕನ್ನಡವನ್ನು ಕಲಿಸಿಯೇ ಕಲಿಸುತ್ತೇನೆ'
.ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ:ತಾಯ್ತನದ ಖುಷಿಯಲ್ಲಿ ಭಾವನಾ.ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು..ತಾಯ್ತನದ ಸಂಭ್ರಮದಲ್ಲಿರುವ ಭಾವನಾ ರಾಮಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.